ಶಿರಸಿ: ಕೋವಿಡ್-19 ದೇಶದಲ್ಲಿ ಹರಡಬಾರದು ಎಂಬ ಉದ್ದೇಶದಿಂದ ಎಲ್ಲೆಡೆ ಲಾಕ್ಡೌನ್ ಘೋಷಿಸಲಾಗಿದೆ. ಈ ಸಮಯದಲ್ಲಿ ಸಂಸದ ಅನಂತಕುಮಾರ್ ಹೆಗಡೆ ಬಡವರ ಸಂಕಷ್ಟಕ್ಕೆ ಜೊತೆಯಾಗದೆ ಮತದಾರರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಲಾಕ್ಡೌನ್ನಿಂದ ಬಡವರು, ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಶಿರಸಿ ಜಾತ್ರೆಗೆ ಆಗಮಿಸಿದ ಸರ್ಕಸ್ ಕಂಪನಿ, ಅಮ್ಯೂಸ್ಮೆಂಟ್ ಕೆಲಸಗಾರರು ಊಟಕ್ಕೂ ಪರದಾಡುವಂತಾಗಿದೆ. ಇದನ್ನು ನೋಡಿ ಹಲವು ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ.
ಸಂಸದರಾಗಿ ಜನರ ಕಷ್ಟಕ್ಕೆ ಬರಬೇಕಿದ್ದ ಹೆಗಡೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬ ಆರೋಪವಿದೆ. ಪೊಲೀಸರು ದಿನನಿತ್ಯ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಜನರೊಂದಿಗೆ ಇರಬೇಕಾಗಿದ್ದ ಸಂಸದರ ಮಾತ್ರ ಮನೆಯಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.