ETV Bharat / state

ಚಿನ್ನದಪಳ್ಳಿಯಲ್ಲಿ ಮಸೀದಿ ದರ್ಶನ ಕಾರ್ಯಕ್ರಮ - mosque Darshan Program bhatkal

ಜಮಾಅತ್​ಉಲ್ ಮುಸ್ಲಿಮೀನ್ ಸಂಸ್ಥೆಯ ಜಾಮಿಯಾ ಮಸೀದಿ ಚಿನ್ನದಪಳ್ಳಿಯಲ್ಲಿ ಮಸೀದಿ ದರ್ಶನ ಕಾರ್ಯಕ್ರಮ ನಡೆಯಿತು.

Chinnadapalli
ಮಸೀದಿ ದರ್ಶನ ಕಾರ್ಯಕ್ರಮ
author img

By

Published : Feb 4, 2020, 10:26 AM IST

ಭಟ್ಕಳ: ಜಮಾಅತ್​ಉಲ್​​ ಮುಸ್ಲಿಮೀನ್ ಸಂಸ್ಥೆಯ ಜಾಮಿಯಾ ಮಸೀದಿ ಚಿನ್ನದಪಳ್ಳಿಯಲ್ಲಿ ಮಸೀದಿ ದರ್ಶನ ಕಾರ್ಯಕ್ರಮ ನಡೆಯಿತು.

ಹಾಫಿಝ್ ಅಶ್ಫಾಖ್ ಚೆನ್ನಾರವರ ಕುರಾನ್ ಪಠಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅಲಿಮಿಯಾ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಲಿಯಾಸ್ ನದ್ವಿ ಮಾತನಾಡಿ, ಹಿಂದೂಗಳು ಮಸೀದಿಗಳಿಗೆ, ಮುಸ್ಲಿಮರು ಮಂದಿರಗಳಿಗೆ ಭೇಟಿ ನೀಡಬೇಕು. ಇದರಿಂದಾಗಿ ಪರಸ್ಪರ ಅಪನಂಬಿಕೆ ದೂರವಾಗುತ್ತದೆ. ಮಂದಿರ ಹಾಗೂ ಮಸೀದಿಗಳನ್ನು ಭಯೋತ್ಪಾದನಾ ಕೇಂದ್ರಗಳು ಎಂದು ಬಿಂಬಿಸುವವರಿಗೆ ಇದರಿಂದಾಗಿ ಹಿನ್ನಡೆಯುಂಟಾಗುವುದು ಎಂದರು.

ಚಿನ್ನದಪಳ್ಳಿಯಲ್ಲಿ ನಡೆದ ಮಸೀದಿ ದರ್ಶನ ಕಾರ್ಯಕ್ರಮ

ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, ನಮ್ಮಲ್ಲಿ ಒಬ್ಬರಿಗೆ ಮತ್ತೊಬ್ಬರಲ್ಲಿ ವಿಶ್ವಾಸವಿಲ್ಲ. ಇಂತಹ ಕಾರ್ಯಕ್ರಮಗಳು ಆಗಾಗ ನಡೆದರೆ ನಮ್ಮಲ್ಲಿನ ಅಪನಂಬಿಕೆಗಳು ದೂರವಾಗುತ್ತವೆ. ನಮ್ಮ ಹಿರಿಯರು ಸಾಮರಸ್ಯದಿಂದಲೇ ಬದುಕಿ ಬಂದವರು. ಅವರ ಕುರಿತಂತೆ ನಮ್ಮ ಯುವಪೀಳಿಗೆ ಮನವರಿಕೆ ಮಾಡಿಕೊಡಬೇಕು. ಭಟ್ಕಳದಲ್ಲಿ ಹಿಂದೂ-ಮುಸ್ಲಿಮರು ಆಗಾಗ ಬೆರೆಯುವಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.