ಭಟ್ಕಳ: ತನ್ನ ಹೊಸ ಆಟೋವನ್ನು ಓಡಿಸಬೇಕೆಂಬ ಚಾಲಕನೋರ್ವನ ಆಸೆಯನ್ನು ಭಟ್ಕಳದ ಶಾಸಕ ಸುನೀಲ ನಾಯ್ಕ ಈಡೇರಿಸಿದ್ದಾರೆ.
ತಾಲೂಕಿನ ಶಿರಾಲಿಯ ಆಟೋ ಚಾಲಕ ವೆಂಕಟೇಶ ನಾಯ್ಕ ತಾನು ಖರೀದಿಸಿದ ಆಟೋವನ್ನು ಮೊದಲು ನೆಚ್ಚಿನ ಶಾಸಕ ಸುನೀಲ ನಾಯ್ಕ ಓಡಿಸಿದ್ದಾರೆ. ಈ ಮೂಲಕ ತನ್ನ ಆಸೆ ಈಡೇರಿದೆ ಎಂದು ಹೇಳಿಕೊಂಡಿದ್ದಾನೆ.
ಇಂದು ಬೆಳಗ್ಗೆ ಹೊಸ ಆಟೋ ಖರೀದಿಸಿ ನೇರವಾಗಿ ಶಾಸಕರ ಕಚೇರಿ ಬಳಿ ತಂದು ಅವರಿಂದಲೇ ಮೊದಲು ಚಾಲನೆ ಮಾಡಿಸಿದ್ದಾನೆ.