ETV Bharat / state

ನೂರಕ್ಕೆ ನೂರರಷ್ಟು ರಸ್ತೆ ಮಾಡಿದ್ರೆ ಚುನಾವಣೆ ಹೊತ್ತಿಗೆ ಜನ ಮರೆತುಬಿಡ್ತಾರೆ: ಶಾಸಕ ದಿನಕರ ಶೆಟ್ಟಿ - ಉತ್ತರ ಕನ್ನಡ ಲೇಟೆಸ್ಟ್ ನ್ಯೂಸ್

ಎಲ್ಲಿಯೂ ನೂರಕ್ಕೆ ನೂರರಷ್ಟು ರಸ್ತೆಯನ್ನು ಮಾಡಿಕೊಡುತ್ತೇನೆ ಎಂದು ನಾನು ಹೇಳಲ್ಲ. ಎಲ್ಲವನ್ನೂ ಒಮ್ಮೆಲೇ ಮಾಡಿದ್ರೆ ಜನ ನಮ್ಮನ್ನ ಮರೆತು ಬಿಡುತ್ತಾರೆ ಎಂದು ಶಾಸಕ ದಿನಕರ್ ಶೆಟ್ಟಿ ಹೇಳಿದ್ದಾರೆ.

mla  dinakar shetty
ಶಾಸಕ ದಿನಕರ್ ಶೆಟ್ಟಿ
author img

By

Published : Mar 3, 2021, 2:51 AM IST

ಕಾರವಾರ: ಎಲ್ಲೆಡೆ ರಸ್ತೆ ಮಾಡಿದ್ದೇವೆ. ಆದರೆ ಎಲ್ಲಿಯೂ ನೂರರಷ್ಟು ರಸ್ತೆ ಮಾಡಿಲ್ಲ. ಎಲ್ಲವನ್ನೂ ಒಮ್ಮೆಲೇ ಮಾಡಿದ್ರೆ ಮುಂದಿನ ಚುನಾವಣೆ ಹೊತ್ತಿಗೆ ಜನ ನಮ್ಮನ್ನ ಮರೆತು ಬಿಡುತ್ತಾರೆ ಎಂದು ಶಾಸಕ ದಿನಕರ್ ಶೆಟ್ಟಿ ಹೇಳಿದ್ದಾರೆ.

ಹೊನ್ನಾವರ ಪಟ್ಟಣ ಹಾಗೂ ಮಾರ್ಗ ಮಧ್ಯದ 9 ಗ್ರಾಮ ಪಂಚಾಯತ್​ಗಳಿಗೆ ಶರಾವತಿ ನದಿ ಮೂಲದಿಂದ ನೀರು ಸರಬರಾಜು ಯೋಜನೆ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಕಾಮಗಾರಿ ಮಂಜೂರಿಯಾಗಿದ್ದು ಸತ್ಯ. ಆದರೆ ಸಂಪೂರ್ಣ ನೆನೆಗುದಿಗೆ ಬಿದ್ದಿತ್ತು. ಆದರೆ 2010ರಲ್ಲಿಯೇ ಈ ಹಿಂದೆ ಶಾಸಕನಿದ್ದಾಗ ಅಧಿವೇಶನದಲ್ಲಿ ಚರ್ಚೆ ಮಾಡಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರದಲ್ಲಿ ಇಂಥವರೆಲ್ಲಾ ಇರಬೇಕು: ಜಾರಕಿಹೊಳಿ ವಿಚಾರಕ್ಕೆ ಡಿಕೆಶಿ ವ್ಯಂಗ್ಯ

ಎಲ್ಲಿಯೂ ನೂರಕ್ಕೆ ನೂರರಷ್ಟು ರಸ್ತೆಯನ್ನು ಮಾಡಿಕೊಡುತ್ತೇನೆ ಎಂದು ನಾನು ಹೇಳಲ್ಲ. ಎಲ್ಲವನ್ನೂ ಒಮ್ಮೆಲೇ ಮಾಡಿದ್ರೆ ಜನ ನಮ್ಮನ್ನ ಮರೆತು ಬಿಡುತ್ತಾರೆ. ರಸ್ತೆ ಆಗಿದೆ ಎಂದು ಜನರು ಮುಂದಿನ ದಿನಗಳಲ್ಲಿ ಮತ ಹಾಕುತ್ತಾರೋ, ಇಲ್ಲವೋ ಎಂಬ ಬಗ್ಗೆ ಅನುಮಾನವಿದೆ. ಇದೇ ಕಾರಣಕ್ಕೆ ಶೇ.75ರಷ್ಟು ರಸ್ತೆ ಕೆಲಸ ಮಾಡಿದ್ದೇನೆ. ಇನ್ನುಳಿದ ಶೇ.25ರಷ್ಟು ಕೆಲಸವನ್ನ ಚುನಾವಣೆ ಬಂದಾಗ ಮಾಡುತ್ತೇನೆ ಎಂದು ಶಾಸಕ ದಿನಕರ್ ಶೆಟ್ಟಿ ಹೇಳಿದ್ದಾರೆ.

ಇದರ ಜೊತೆಗೆ ನಾವು ರಾಜಕಾರಣ ಮಾಡೋದಕ್ಕೆ ಅಂತಾನೆ ರಾಜಕೀಯಕ್ಕೆ ಬಂದಿರೋದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹಾಗೂ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಎದುರೇ ಜನರನ್ನು ರಾಜಕೀಯ ದಾಳವಾಗಿ ಬಳೆಸಿಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಇದೀಗ ಚರ್ಚೆಗೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.