ETV Bharat / state

ಮನೆ ಬಾಗಿಲಿಗೆ ತೆರಳಿದ ಸರ್ಕಾರ: ಸಮಸ್ಯೆ ಮುಂದಿಟ್ಟು ಒಂದಿಷ್ಟು ಪರಿಹಾರ ಪಡೆದ ಸ್ಥಳೀಯರು

ಹಿಂದುಳಿದ ಸಮುದಾಯದವರೇ ಹೆಚ್ಚಾಗಿರುವ ಅಂಕೋಲಾ ತಾಲೂಕಿನ ಅಚವೆ ಗ್ರಾಮ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಪಿಂಚಣಿ, ವಿದ್ಯುತ್ ಹೀಗೆ ಸೌಲಭ್ಯಗಳಿಂದ ವಂಚಿತವಾಗಿತ್ತು. ಇಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಕಂದಾಯ ಸಚಿವ ಆರ್​​. ಅಶೋಕ್​​ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

author img

By

Published : Apr 16, 2022, 12:11 PM IST

Minister R Ashok grama vaastavya programme  in Karwar
ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಗಮಿಸಿದ ಸಚಿವರು

ಕಾರವಾರ: ಅದು ಮೂಲಭೂತ ಸೌಕರ್ಯ ವಂಚಿತ ಕುಗ್ರಾಮ. ಈ ಭಾಗದ ಜನರು ಸಮಸ್ಯೆ ಪರಿಹಾರಕ್ಕೆ ಹತ್ತಾರು ಬಾರಿ ಸರ್ಕಾರಿ ಕಚೇರಿ, ಜನಪ್ರತಿನಿಧಿಗಳ ಬಳಿ ಅಲೆದಾಡಿದ್ರು ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇಂತಹ ಸಂಕಷ್ಟದಿಂದ ಬಳಲುತ್ತಿದ್ದ ಗ್ರಾಮಕ್ಕೆ ಸಚಿವರ ದಂಡೆ ಮನೆ ಬಾಗಿಲಿಗೆ ಬಂದು ಸಮಸ್ಯೆ ಆಲಿಸಿ ಒಂದಿಷ್ಟು ಪರಿಹಾರ ಒದಗಿಸಿದ್ದಾರೆ.

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಗಮಿಸಿದ ಸಚಿವರು

ಹೌದು, ಸರ್ಕಾರ ರಾಜ್ಯದಾದ್ಯಂತ ಬಡವರಿಗೆ, ಅಸಹಾಯಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ಫಲಾನುಭವಿಗಳಿಗೆ ತಲುಪಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಇಷ್ಟಾದರೂ ಕೂಡ ಗ್ರಾಮೀಣ ಪ್ರದೇಶದ ಜನರಿಗೆ ಈ ಸೌಲಭ್ಯಗಳು ತಲುಪುತ್ತಿಲ್ಲ. ಇಂತಹ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಅಂಕೋಲಾ ತಾಲೂಕಿನ ಅಚವೆ ಗ್ರಾಮಕ್ಕೆ ನಿನ್ನೆ (ಶುಕ್ರವಾರ) ಕಂದಾಯ ಸಚಿವ ಆರ್. ಅಶೋಕ್​​ ಇತರೆ ಮೂವರು ಸಚಿವರೊಂದಿಗೆ ಭೇಟಿ ನೀಡಿದರು.

ಸರ್ಕಾರ ಕಂದಾಯ ಇಲಾಖೆಯಡಿ ಪ್ರತಿ‌ ತಿಂಗಳು ನಡೆಸುವ 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರನ್ನು ಹಳ್ಳಿಯ ಜನರು ಆರತಿ ಬೆಳಗಿ ಅದ್ದೂರಿಯಾಗಿ ಸ್ವಾಗತಿಸಿದರು. ಸ್ಥಳೀಯ ಕಲೆಗಳಾದ ಗೊಂಬೆಯಾಟ, ಡಮಾಮಿ ನೃತ್ಯ, ಯಕ್ಷಗಾನ, ಗುಮಟೆ ಪಾಂಗಿನೊಂದಿಗೆ ಟ್ರ್ಯಾಕ್ಟರ್ ಮೂಲಕ ತೆರೆದ ವಾಹನದಲ್ಲಿ ಸಚಿವರನ್ನು ಮೆರೆವಣಿಗೆ ಮೂಲಕ ಕರೆತರಲಾಯಿತು.

ಈ ವೇಳೆ ಮಾತನಾಡಿದ, ಕಂದಾಯ ಸಚಿವ ಆರ್​​. ಅಶೋಕ್​​, ಕಳೆದ 50 ವರ್ಷಗಳಿಂದ ಇಲ್ಲಿನ ಜನರು ಸರ್ಕಾರದ ವಿವಿಧ ಸೌಲಭ್ಯಗಳಿಗಾಗಿ ವಿವಿಧ ಇಲಾಖೆಗಳು, ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಲೇ ಇದ್ದಾರೆ. ಅವರರಿಗೆ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿರಲಿಲ್ಲ.‌ ಇದೇ ಕಾರಣಕ್ಕೆ ರಾಜ್ಯಾದ್ಯಂತ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಈಗಾಗಲೇ ಐದು ಗ್ರಾಮ ವಾಸ್ತವ್ಯ ಮುಗಿಸಿ ಇದೀಗ 6ನೇ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ. ಈವರೆಗೆ 99 ಸಾವಿರ ಅರ್ಜಿಗಳು ಬಂದಿದ್ದು, ಕಂದಾಯ ಇಲಾಖೆಯಿಂದ ಎಲ್ಲಾ ಅರ್ಜಿಗಳ ವಿಲೇವಾರಿಯಾಗಿದೆ. ಅಲ್ಲದೇ ಜನರಿಗೂ ಸರ್ಕಾರ ಮನೆ ಬಾಗಿಲಿಗೆ ಬಂದು ಸೌಲಭ್ಯ ವಿತರಿಸುವುದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

ಹಿಂದುಳಿದ ಸಮುದಾಯದವರೇ ಹೆಚ್ಚಾಗಿರುವ ಅಂಕೋಲಾ ತಾಲೂಕಿನ ಅಚವೆ ಗ್ರಾಮ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಪಿಂಚಣಿ, ವಿದ್ಯುತ್ ಹೀಗೆ ಸೌಲಭ್ಯಗಳಿಂದ ವಂಚಿತವಾಗಿತ್ತು. ಇದರಿಂದ ಗ್ರಾಮ ವಾಸ್ತವ್ಯ ನಡೆಸಿದ ಕಂದಾಯ ಸಚಿವರು ಒಂದು ಕೋಟಿ ಅನುದಾನ ನೀಡುವುದಾಗಿ ತಿಳಿಸಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ವಿವಿಧ ಯೋಜನೆಗಳ ಫಲಾನುಭವಿಗಳು ಪಾಲ್ಗೊಂಡಿದ್ದರು.

ವಿಧವಾ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನರಿಗೆ ಸಾಧನಗಳು, ರೈತ ಆತ್ಮಹತ್ಯೆ ಪರಿಹಾರ ಸೇರಿದಂತೆ ವಿವಿಧ ಯೋಜನೆಗಳ ಆಯ್ದ ಫಲಾನುಭವಿಗಳಿಗೆ ಸಚಿವರಿಂದಲೇ ಸೌಲಭ್ಯವನ್ನ ವಿತರಣೆ ಮಾಡಲಾಯಿತು. ನಗರ ಪ್ರದೇಶದಲ್ಲಿ ಕಂದಾಯ ಭೂಮಿ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡಿದ್ದ ಬಡವರಿಗೆ 94 C ಹಾಗೂ ಗ್ರಾಮೀಣ ಪ್ರದೇಶದಲ್ಲಿ 94 CC ಅಡಿಯಲ್ಲಿ ಜಾಗ ಒದಗಿಸಿಕೊಟ್ಟಿದ್ದು, ಜಿಲ್ಲೆಯಲ್ಲೇ 3 ಸಾವಿರಕ್ಕೂ ಅಧಿಕ ಮಂದಿಗೆ ಅನುಕೂಲವಾಗಿದೆ ಎಂದು ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು.

ಒಟ್ಟಿನಲ್ಲಿ ಮೂಲಭೂತ ಸೌಲಭ್ಯ ವಂಚಿತ ಕುಗ್ರಾಮದಲ್ಲಿ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದಾಗಿ ಅಭಿವೃದ್ಧಿ ಕಾಣುವ ಭರವಸೆ ಮೂಡುವಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.