ETV Bharat / state

ವಾಗ್ಜರಿಯಲ್ಲಿ ಅಭಿವೃದ್ದಿ ಮರೆತರಾ ಹೆಗಡೆ? ಸಚಿವ ಸ್ಥಾನ ತಪ್ಪಿದ್ದೇಕೆ,ಬಿಸಿಬಿಸಿ ಚರ್ಚೆ! - Bjp

ಕಳೆದ ಬಾರಿ ರಾಜ್ಯ ಖಾತೆ ಸಚಿವರಾಗಿದ್ದ ಉತ್ತರ ಕನ್ನಡ ಸಂಸದ ಹೆಗಡೆಗೆ, ಈ ಬಾರಿ ಕ್ಯಾಬಿನೆಟ್ ದರ್ಜೆ ಸಿಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಲೆಕ್ಕಾಚಾರ ತಪ್ಪಿದೆ. ಈ ಬಾರಿ ಭಾರೀ ಬಹುಮತದಿಂದ ಆಯ್ಕೆಯಾಗಿದ್ದರೂ ಸಹ, ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಕ್ಷೇತ್ರಾದ್ಯಂತ ಬಿಸಿಬಿಸಿ ಚರ್ಚೆ ಶುರುವಾಗಿದೆ.

ಉಕ ಸಂಸದ ಹೆಗಡೆಗೆ ಸಚಿವ ಸ್ಥಾನ ಮಿಸ್...
author img

By

Published : Jun 1, 2019, 11:24 PM IST

ಶಿರಸಿ: ಕೇಂದ್ರದಲ್ಲಿ ಬಿಜೆಪಿ ಸತತ ಎರಡನೇ ಬಾರಿ ಅಧಿಕಾರಕ್ಕೇರಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿ ತಮ್ಮ ಸಂಪುಟದಲ್ಲಿ ಪ್ರಭಾವಿಗಳಿಗೆ ಸ್ಥಾನ ನೀಡುವುದರ‌ ಜೊತೆಗೆ ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಪ್ರಭಾವಗಳಿಗೆ ಕೊಕ್ ನೀಡಿದ್ದಾರೆ.

ಈ ಬಾರಿ ಸಂಪುಟದಲ್ಲಿ ಸ್ಥಾನ ಕಳೆದುಕೊಂಡವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಸದ, ಫೈರ್ ಬ್ರಾಂಡ್ ಖ್ಯಾತಿಯ ಅನಂತ್​ಕುಮಾರ ಹೆಗಡೆ ಸಹ ಒಬ್ಬರು. 6 ಬಾರಿ ಉತ್ತರ ಕನ್ನಡ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಅನಂತ್​ ಕುಮಾರ್​ ಹೆಗಡೆ ಕಳೆದ ಬಾರಿ ಮೋದಿ ಸರ್ಕಾರದಲ್ಲಿ ಕೌಶಲ್ಯಾಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿ ಅಲ್ಪಾವಧಿ ಕೆಲಸ ನಿರ್ವಹಿಸಿದ್ದರು. ಆದರೆ ಈ ಬಾರಿ ಭಾರೀ ಬಹುಮತದಿಂದ ಆಯ್ಕೆಯಾಗಿದ್ದರೂ ಸಹ, ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದರಿಂದ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದರೂ ಸಹ ಸಚಿವ ಸ್ಥಾನ ತಪ್ಪಲು ಕಾರಣವೇನು ಎಂಬ ಚರ್ಚೆ ಕ್ಷೇತ್ರದಾದ್ಯಂತ ನಡೆಯುತ್ತಿದೆ.

ತಮ್ಮ ಧರ್ಮ ವಿರೋಧಿ ಹೇಳಿಕೆ, ಸಂವಿಧಾನ ವಿರೋಧಿ ಹೇಳಿಕೆಗಳಿಂದಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಅನಂತ್ ​ಕುಮಾರ್​ ಹೆಗಡೆ ಮೇಲೆ, ಯಾರಿಗೂ ಗೌರವ ನೀಡುವುದಿಲ್ಲ ಎಂಬ ಆಪಾದನೆಯಿದೆ. ಆದರೂ ಸಹ ಕಳೆದ ಬಾರಿ ಜನರಲ್ಲಿ ಅವರ ಮೇಲಿರುವ ಅಪಾರ ಅಭಿಮಾನವನ್ನು ಪರಿಗಣಿಸಿ ಮೋದಿ ಸಂಪುಟದಲ್ಲಿ ರಾಜ್ಯ ಸಚಿವರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಸಚಿವರಾಗಿ ಆಯ್ಕೆಯಾದ ಮೇಲೂ ಸಹ ಅವರು ಕಾಂಟ್ರವರ್ಸಿ ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿದ ಪರಿಣಾಮ ಈ ಬಾರಿ ಸಚಿವ ಸ್ಥಾನವನ್ನು ನೀಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಅನಂತ್ ಕುಮಾರ್ ಹೆಗಡೆಗೆ ತಪ್ಪಿದ ಕೇಂದ್ರ ಸಚಿವ ಸ್ಥಾನ

ಸತತ 2 ನೇ ಬಾರಿಗೆ ಅಧಿಕಾರಕ್ಕೆ ಏರಿರುವ ಬಿಜೆಪಿ ಸರ್ಕಾರದಲ್ಲಿ ಈ ಬಾರಿ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಟಿಕೆಟ್ ನೀಡುವಾಗಲೂ ಹೊಸ ಮುಖಕ್ಕೆ ನೀಡಿ ಮುಖಂಡರಿಗೆ ಶಾಕ್ ನೀಡಿದ್ದ ಬಿಜೆಪಿ ಹೈಕಮಾಂಡ್, ಸಚಿವ ಸ್ಥಾನವನ್ನೂ ಸಹ ಊಹಿಸಲು ಸಾಧ್ಯವಾಗದ ಹಾಗೆ ಹಂಚಿಕೆ ಮಾಡಿದೆ. ಆದರೆ 6 ಬಾರಿ ಸಂಸದರಾಗಿ, ಕೇಂದ್ರ ಸಚಿವರೂ ಆಗಿದ್ದ ಹೆಗಡೆ ಮುಂದುವರೆಸಲು ಮಾತ್ರ ಹೈಕಮಾಂಡ್ ಮನಸ್ಸು ಮಾಡಿಲ್ಲ. ಇದು ಕ್ಷೇತ್ರದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದಿರುವುದೂ ಸಹ ಸರ್ಕಾರದ ಈ ನಡೆಗೆ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ಬಾರಿ ರಾಜ್ಯ ಖಾತೆ ಸಚಿವರಾಗಿದ್ದ ಕಾರಣ ಈ ಬಾರಿ ಕ್ಯಾಬಿನೆಟ್ ದರ್ಜೆ ಸಿಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಅದರಂತೇ ಹೆಗಡೆ ಜೊತೆಯಲ್ಲಿ ಅವರ ನಿಕಟವರ್ತಿಗಳು ದೆಹಲಿಗೂ ತೆರಳಿದ್ದರು. ಆದರೆ ಹೈಕಮಾಂಡ್ ಮಾತ್ರ ಅವರಿಗೆ ಸೊಪ್ಪು ಹಾಕಿಲ್ಲ. ಮುಂದಿನ ದಿನಗಳಲ್ಲಿ ಸಂಸದರಾಗಿ ಅವರ ಕೆಲಸ, ಹೇಳಿಕೆಗಳನ್ನು ಗಮನಿಸಿಕೊಂಡು ಸಂಪುಟ ವಿಸ್ತರಣೆ ವೇಳೆಯಲ್ಲಿ ಸಚಿವ ಸ್ಥಾನ ನೀಡಬಹುದು ಎಂಬ ಅಭಿಪ್ರಾಯ ರಾಜಕೀಯ ಮುಖಂಡರಲ್ಲಿ ವ್ಯಕ್ತವಾಗಿದೆ.

Intro:ಶಿರಸಿ :
ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೇರಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿ ತಮ್ಮ ಸಂಪುಟದಲ್ಲಿ ಪ್ರಭಾವಿಗಳಿಗೆ ಸ್ಥಾನ ನೀಡುವುದರ‌ ಜೊತೆಗೆ ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಪ್ರಭಾವಗಳಿಗೆ ಕೋಕ್ ನೀಡಿದ್ದಾರೆ. ಈ ಬಾರಿ ಸಂಪುಟದಲ್ಲಿ ಸ್ಥಾನ ಕಳೆದುಕೊಂಡವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಸದ , ಪೈರ್ ಬ್ರಾಂಡ್ ಖ್ಯಾತಿಯ ಅನಂತಕುಮಾರ ಹೆಗಡೆ ಅವರೂ ಸಹ ಒಬ್ಬರಾಗಿದ್ದಾರೆ.

೬ ಬಾರಿ ಉತ್ತರ ಕನ್ನಡದ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ ಹೆಗಡೆ ಕಳೆದ ಬಾರಿ ಮೋದಿ ಸರ್ಕಾರದಲ್ಲಿ ಕೌಶಲ್ಯಾಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿ ಅಲ್ಪಾವಧಿ ಕಾಲ ಕೆಲಸ ನಿರ್ವಹಿಸಿದ್ದರು. ಆದರೆ ಈ ಬಾರಿ ಭಾರೀ ಬಹುಮತದಿಂದ ಆಯ್ಕೆಯಾಗಿದ್ದರೂ ಸಹ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದರಿಂದ ದೇಶ ಮಟ್ಟದಲ್ಲಿ ಹೆಸರು ಮಾಡಿದ್ದರೂ ಸಹ ಸಚಿವ ಸ್ಥಾನ ತಪ್ಪಲು ಕಾರಣವೇನು ಎಂಬ ಚರ್ಚೆ ಕ್ಷೇತ್ರದಾದ್ಯಂತ ನಡೆಯುತ್ತಿದೆ. Body:ತಮ್ಮ‌ ಧರ್ಮ ವಿರೋಧಿ ಹೇಳಿಕೆ, ಸಂವಿಧಾನ ವಿರೋಧಿ ಹೇಳಿಕೆಗಳಿಂದಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಅನಂತಕುಮಾರ ಹೆಗಡೆ ಮೇಲೆ ಯಾರಿಗೂ ಗೌರವ ನೀಡಿವುದಿಲ್ಲ ಎಂಬ ಆಪಾದನೆಯಿದೆ. ಆದರೂ ಸಹ ಕಳೆದ ಬಾರಿ ಜನರಲ್ಲಿ ಅವರ ಮೇಲಿರುವ ಅಪಾರ ಅಭಿಮಾನವನ್ನು ಪರಿಗಣಿಸಿ ಮೋದಿ ಸಂಪುಟದಲ್ಲಿ ರಾಜ್ಯ ಸಚಿವರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಸಚಿವರಾಗಿ ಆಯ್ಕೆಯಾದ ಮೇಲೂ ಸಹ ಅವರು 'ಕಾಂಟ್ರವರ್ಸಿ' ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿದ ಪರಿಣಾಮ ಈ ಬಾರಿ ಸಚಿವ ಸ್ಥಾನವನ್ನು ನೀಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಸತತ ೨ ನೇ ಬಾರಿಗೆ ಅಧಿಕಾರಕ್ಕೆ ಏರೀರುವ ಬಿಜೆಪಿ ಸರ್ಕಾರದಲ್ಲಿ ಈ ಬಾರಿ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಟಿಕೇಟ್ ನೀಡುವಾಗಲೂ ಹೊಸ ಮುಖಕ್ಕೆ ನೀಡಿ ಮುಖಂಡರಿಗೆ ಶಾಕ್ ನೀಡಿದ್ದ ಬಿಜೆಪಿ ಹೈಕಮಾಂಡ್ ಸಚಿವ ಸ್ಥಾನವನ್ನೂ ಸಹ ಊಹಿಸಲು ಸಾಧ್ಯವಾಗದ ಹಾಗೆ ಹಂಚಿಕೆ ಮಾಡಿದೆ. ಆದರೆ ೬ ಬಾರಿ ಸಂಸದರಾಗಿ, ಕೇಂದ್ರ ಸಚಿವರೂ ಆಗಿದ್ದ ಹೆಗಡೆ ಮುಂದುವರೆಸಲು ಮಾತ್ರ ಹೈಕಮಾಂಡ್ ಮನಸ್ಸು ಮಾಡಿಲ್ಲ. ಇದು ಕ್ಷೇತ್ರದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದಿರುವುದೂ ಸಹ ಸರ್ಕಾರದ ಈ ನಡೆಗೆ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
Conclusion:ಕಳೆದ ಬಾರಿ ರಾಜ್ಯ ಖಾತೆ ಸಚಿವರಾಗಿದ್ದ ಕಾರಣ ಈ ಬಾರಿ ಕ್ಯಾಬಿನೆಟ್ ದರ್ಜೆ ಸಿಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಅದರಂತೇ ಹೆಗಡೆ ಜೊತೆಯಲ್ಲಿ ಅವರ ನಿಕಟವರ್ತಿಗಳು ದೆಹಲಿಗೂ ತೆರಳಿದ್ದರು. ಆದರೆ ಹೈಕಮಾಂಡ್ ಮಾತ್ರ ಅವರಿಗೆ ಸೊಪ್ಪು ಹಾಕಿಲ್ಲ. ಮುಂದಿನ ದಿನಗಳಲ್ಲಿ ಸಂಸದರಾಗಿ ಅವರ ಕೆಲಸ, ಹೇಳಿಕೆಗಳನ್ನು ಗಮನಿಸಿಕೊಂಡು ಸಂಪುಟ ವಿಸ್ತರಣೆ ವೇಳೆಯಲ್ಲಿ ಸಚಿವ ಸ್ಥಾನ ನೀಡಬಹುದು ಎಂಬ ಅಭಿಪ್ರಾಯ ರಾಜಕೀಯ ಮುಖಂಡರಲ್ಲಿ ವ್ಯಕ್ತವಾಗಿದೆ.
........
ಸಂದೇಶ ಭಟ್ ಶಿರಸಿ.

For All Latest Updates

TAGGED:

Bjp
ETV Bharat Logo

Copyright © 2025 Ushodaya Enterprises Pvt. Ltd., All Rights Reserved.