ಕಾರವಾರ: ಬೆಂಗಳೂರಿನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಯುವತಿ ಸೇರಿದಂತೆ ವೇದಿಕೆ ಮೇಲಿದ್ದ ಎಲ್ಲರ ವಿರುದ್ಧವೂ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಒತ್ತಾಯಿಸಿದ್ದಾರೆ.
-
#CAA_NRC ವಿರೋಧಿಸುವ ಮುಸುಕಿನಲ್ಲಿ ಇಂದು ದೇಶದಲ್ಲಿ ನಡೆಯುತ್ತಿರುವುದು ಪ್ರಾಯೋಜಿತ ಸಂಪೂರ್ಣ #ಹಿಂದೂ_ವಿರೋದಿ ಪ್ರತಿಭಟನೆಗಳು. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ತಕ್ಕ strategic ಉತ್ತರ ನೀಡುತ್ತದೆ ಎಂದು ತಿಳಿಯುತ್ತೇನೆ. pic.twitter.com/9HgGuUwI0i
— Anantkumar Hegde (@AnantkumarH) February 20, 2020 " class="align-text-top noRightClick twitterSection" data="
">#CAA_NRC ವಿರೋಧಿಸುವ ಮುಸುಕಿನಲ್ಲಿ ಇಂದು ದೇಶದಲ್ಲಿ ನಡೆಯುತ್ತಿರುವುದು ಪ್ರಾಯೋಜಿತ ಸಂಪೂರ್ಣ #ಹಿಂದೂ_ವಿರೋದಿ ಪ್ರತಿಭಟನೆಗಳು. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ತಕ್ಕ strategic ಉತ್ತರ ನೀಡುತ್ತದೆ ಎಂದು ತಿಳಿಯುತ್ತೇನೆ. pic.twitter.com/9HgGuUwI0i
— Anantkumar Hegde (@AnantkumarH) February 20, 2020#CAA_NRC ವಿರೋಧಿಸುವ ಮುಸುಕಿನಲ್ಲಿ ಇಂದು ದೇಶದಲ್ಲಿ ನಡೆಯುತ್ತಿರುವುದು ಪ್ರಾಯೋಜಿತ ಸಂಪೂರ್ಣ #ಹಿಂದೂ_ವಿರೋದಿ ಪ್ರತಿಭಟನೆಗಳು. ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ತಕ್ಕ strategic ಉತ್ತರ ನೀಡುತ್ತದೆ ಎಂದು ತಿಳಿಯುತ್ತೇನೆ. pic.twitter.com/9HgGuUwI0i
— Anantkumar Hegde (@AnantkumarH) February 20, 2020
ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋ ಮಾಡಿರುವ ಅವರು, ಬೆಂಗಳೂರಿನಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ ಕರ್ನಾಟಕದ ಜನ ತಲೆತಗ್ಗಿಸುವಂತದ್ದು. ಪ್ರತಿಭಟನೆ ವೇಳೆ ಎಡಪಂತೀಯ ಚಿಂತಕಿ ಎಂದು ಬಂದ ಯುವತಿಯೋರ್ವಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾಳೆ. ಇದಕ್ಕೆ ಇಡೀ ವೇದಿಕೆ ಹಾಗೂ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ. ಇಂತಹ ದೇಶದ್ರೋಹಿ ಹೇಳಿಕೆಯನ್ನು ಕರ್ನಾಟಕದ ಮಣ್ಣು ಎಂದಿಗೂ ಕ್ಷಮಿಸುವುದಿಲ್ಲ. ಇದಕ್ಕೆ ಜನರು ತಕ್ಕ ಉತ್ತರವನ್ನು ನೀಡಲೇಬೇಕು ಎಂದು ಹೇಳಿದ್ದಾರೆ.
ಎಡಪಂಥೀಯ ವಿಚಾರ ದೇಶದ್ರೋಹಿ ವಿಚಾರವಾಗಿ ಮಾರ್ಪಟ್ಟಿದೆ. ಸಿಎಎ ಹೋರಾಟ ದೇಶದ್ರೋಹಿ ಹೋರಾಟವಾಗಿ, ದೇಶದ್ರೋಹಿ ಚಟುವಟಿಕೆಯಾಗಿ ಹಿಂದು ವಿರೋಧಿ ಹೋರಾಟವಾಗಿ ಮಾರ್ಪಟ್ಟಿದೆ. ಇಂದು ಯುವತಿ ಕೂಗಿರುವ ಘೋಷಣೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ದು, ವೇದಿಕೆ ಮೇಲಿರುವ ಎಲ್ಲರ ಮೇಲೆ ದೇಶದ್ರೋಹದ ಕೇಸು ದಾಖಲಿಸಬೇಕು. ದೇಶದ್ರೋಹಿಗಳನ್ನು ತಕ್ಷಣ ಬಂಧಿಸಬೇಕು. ದೇಶದ್ರೋಹಿಗಳ ಆಡಂಬರ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.