ETV Bharat / state

ಮಹಿಳೆ ಮೇಲೆ ಹಲ್ಲೆ ನಡೆಸಿದ ಮುಸುಕುಧಾರಿ... ಮಾಂಗಲ್ಯ ಸರ ಕದ್ದು ಪರಾರಿ - ಮಹಿಳೆ ತಲೆಗೆ ಹಲ್ಲೆ ನಡೆಸಿದ ಮುಸುಕುಧಾರಿ

ಮುಸುಕುಧಾರಿಯೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಮಾಂಗಲ್ಯ ಸರ ಕದ್ದೊಯ್ದ ಘಟನೆ ಹೊನ್ನಾವರದಲ್ಲಿ ನಡೆದಿದೆ.

ಮಹಿಳೆ ತಲೆಗೆ ಹಲ್ಲೆ
author img

By

Published : May 17, 2019, 9:11 PM IST

ಕಾರವಾರ: ಮುಸುಕು ಧರಿಸಿ ಆಗಮಿಸಿದ ವ್ಯಕ್ತಿಯೋರ್ವ ಮಹಿಳೆಯ ತಲೆಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಹೊನ್ನಾವರ ತಾಲೂಕಿನ ಇಡಗುಂಜಿಯಲ್ಲಿ ನಡೆದಿದೆ.

ಪ್ರೇಮಾ ಪ್ರಭಾಕರ ಶೆಟ್ಟಿ, ಹಲ್ಲೆಗೊಳಗಾದ ಮಹಿಳೆ

ಹೊನ್ನಾವರ ತಾಲೂಕಿನ ಶಾಂತಿನಗರ ನಿವಾಸಿ ಪ್ರೇಮಾ ಪ್ರಭಾಕರ ಶೆಟ್ಟಿ ಹಲ್ಲೆಗೊಳಗಾದ ಮಹಿಳೆ. ರಸ್ತೆ ಮಾರ್ಗದಿಂದ ರೇಷನ್ ಅಂಗಡಿಗೆ ನಡೆದು ಹೋಗುತ್ತಿರುವಾಗ ನೀಲಿ ಬಣ್ಣದ ವಸ್ತ್ರ ಧರಿಸಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯೋರ್ವ ಏಕಾಏಕಿ ರಸ್ತೆ ಬದಿಯ ಕಾಡಿನಿಂದ ಇಳಿದು ಬಂದಿದ್ದ. ಬಳಿಕ ಆತ ದೊಣ್ಣೆಯಿಂದ ಹಲ್ಲೆ ನಡೆಸಿ ಸುಮಾರು 40 ಗ್ರಾಂ ತೂಕದ ತನ್ನ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ. ತಲೆಗೆ ಬಲವಾದ ಪೆಟ್ಟು ಬಿದ್ದಾಗ ಕೂಗಿಗೊಂಡೆ. ಆದರೆ ಸುತ್ತಮುತ್ತ ಯಾರು ಇಲ್ಲದ ಕಾರಣ ಆರೋಪಿ ಪರಾರಿಯಾಗಿದ್ದಾನೆ. ಬಳಿಕ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಸ್ಥಳೀಯ ರಿಕ್ಷಾ ಚಾಲಕರೋರ್ವರು ನನ್ನ ನೆರವಿಗೆ ಬಂದರು ಎಂದು ಹೇಳಿದ್ದಾರೆ.

ಗಾಯಗೊಂಡ ಮಹಿಳೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಬಳಿಕ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯ ಮಾಹಿತಿ ಪಡೆದು ಆಸ್ಪತ್ರೆಗೆ ಆಗಮಿಸಿದ ಮಂಕಿ ಠಾಣಾ ಪಿಎಸ್​ಐ ನೀತು ಗುಡೆ ಮಾಹಿತಿ ಕಲೆಹಾಕಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಹಿಳೆ ತಲೆಗೆ ಹಲ್ಲೆ ನಡೆಸಿದ ಮುಸುಗುದಾರಿ... ಮಾಂಗಲ್ಯ ಸರ ಕದ್ದು ಪರಾರಿ
ಕಾರವಾರ: ಮುಸುಕು ಧರಿಸಿ ಆಗಮಿಸಿದ ವ್ಯಕ್ತಿಯೊರ್ವ ಮಹಿಳೆಯ ತಲೆಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಹೊನ್ನಾವರ ತಾಲೂಕಿನ ಇಡಗುಂಜಿಯಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ಮೇಲಿನ ಇಡಗುಂಜಿ ಕುಳಿಮನೆಯ ಶಾಂತಿನಗರ ನಿವಾಸಿ ಪ್ರೇಮಾ ಪ್ರಭಾಕರ ಶೆಟ್ ಗಾಯಗೊಂಡು ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. ರಸ್ತೆ ಮಾರ್ಗದಿಂದ ರೇಷನ್ ಅಂಗಡಿಗೆ ನಡೆದು ಹೋಗುತ್ತಿರುವಾಗ ನೀಲಿಬಣ್ಣದ ವಸ್ತ್ರ ಧರಿಸಿ ಮುಖಕ್ಕೆ ಭಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯೊರ್ವ, ಏಕಾಏಕಿ ರಸ್ತೆ ಬದಿಯ ಕಾಡಿನಿಂದ ಇಳಿದು ಬಂದಿದ್ದಾನೆ. ಬಳಿಕ ಆ ವ್ಯಕ್ತಿ ದೊಣ್ಣೆಯಿಂದ ಹಲ್ಲೆ ನಡೆಸಿ ಸುಮಾರು 40 ಗ್ರಾಂ ತೂಕದ ತನ್ನ ಮಾಂಗಲ್ಯ ಸರ ಕಿತ್ತು ಪರಾರಿಯಾದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ.
ಇನ್ನು ತಲೆಗೆ ಬಲವಾದ ಪೆಟ್ಟು ಬಿದ್ದಾಗ ಕೂಗಿಗೊಂಡೆ ಆದರೆ ಸುತ್ತಮುತ್ತ ಯಾರು ಇಲ್ಲದ ಕಾರಣ ಆರೋಪಿ ಪರಾರಿಯಾಗಿದ್ದಾನೆ. ಈ ವೇಳೆ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಸ್ಥಳಿಯ ರಿಕ್ಷಾ ಚಾಲಕರೊರ್ವರು ನನ್ನ ನೆರವಿಗೆ ಬಂದರು ದು ಹೇಳಿದ್ದಾರೆ. ಬಳಿಕ ಮಹಿಳೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಬಳಿಕ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಮಾಹಿತಿ ಪಡೆದು ಆಸ್ಪತ್ರೆಗೆ ಆಗಮಿಸಿದ ಮಂಕಿಠಾಣಾ ಪಿಎಸೈ ನೀತು ಗುಡೆ ಮಾಹಿತಿ ಕಲೆಹಾಕಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.
Body:kConclusion:k
ETV Bharat Logo

Copyright © 2025 Ushodaya Enterprises Pvt. Ltd., All Rights Reserved.