ETV Bharat / state

ಪತಿ ಕಿರುಕುಳ ತಾಳಲಾರದೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ - ಪತಿಯ ಕಿರುಕುಳಕ್ಕೆ ಪತ್ನಿ ಕೆರೆಗೆ ಹಾರಿ ಆತ್ಮಹತ್ಯೆ

ಭಟ್ಕಳದಲ್ಲಿ ಪತಿಯ ಕಿರುಕುಳ ತಾಳಲಾರದೆ ಮಹಿಳೆಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಆತ್ಮಹತ್ಯೆ ಮಾಡಿಕೊಂಡ ಪತ್ನಿ
author img

By

Published : Dec 20, 2019, 12:05 AM IST

ಭಟ್ಕಳ: ಗೃಹಿಣಿವೋರ್ವಳು ತನ್ನ ಪತಿಯ ಕಿರುಕುಳ ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ತಾಲೂಕಿನ ಬೆಳೆಕೆ ಪಂಚಾಯತ್​ ನೂಜದ ಅಡಿಬಾರ ಎಂಬಲ್ಲಿ ನಡೆದಿದೆ.

ಇಂದಿರಾ ನಾಗರಾಜ ಗೊಂಡ (26) ಮೃತ ಮಹಿಳೆ. ಇವರು ನೂಜದ ಅಡಿಬಾರ ನಿವಾಸಿ. ಇದೇ ವರ್ಷದ ಮೇ 24 ರಂದು ನಾಗರಾಜ ಸೋಮಯ್ಯ ಗೊಂಡನ ಎಂಬಾತನ ಜೊತೆ ಗುರು ಹಿರಿಯರ ನಿಶ್ಚಿಯದಂತೆ ಮದುವೆಯಾಗಿತ್ತು. ವಿವಾಹದ ಬಳಿಕ ಪತಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಪದೇ ಪದೇ ಬಾವಿಗೆ ಬಿದ್ದು ಸಾಯಿ ಎಂದು ನಿಂದಿಸುತ್ತಿದ್ದ ಎನ್ನಲಾಗ್ತಿದೆ. ಅದರಂತೆ ಕಳೆದ ಗುರುವಾರ ಬೆಳಗ್ಗೆ ಮನೆಯ ಪಕ್ಕದ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗ್ತಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪತಿಯ ಕಿರುಕುಳ ತಾಳಲಾರದೆ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ಮದುವೆಯಾದ ಒಂದು ತಿಂಗಳಲ್ಲಿಯೇ ಪತಿ ಕಿರುಕುಳ ನೀಡುತ್ತಿದ್ದ ಬಗ್ಗೆ ತನ್ನ ಸಹೋದರನಿಗೆ ಈಕೆ ಮಹಿಳೆ ತಿಳಿಸಿದ್ದಳು. ಈಗಾಗಲೇ 2-3 ಬಾರಿ ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನ ಕೂಡ ನಡೆಸಲಾಗಿತ್ತಂತೆ. ಆದ್ರೆ ಇದೆಲ್ಲವೂ ವಿಫಲವಾಗಿದೆ ಎಂದು ಆಕೆಯ ಸಹೋದರ ತಿಳಿಸಿದ್ದಾರೆ.

Intro:ಭಟ್ಕಳ: ಮಹಿಳೆಯೋರ್ವಳು ತನ್ನ ಪತಿಯ ಕಿರುಕುಳ ತಾಳಲಾರದೆ ಗಂಡನ ಮನೆಯ ಪಕ್ಕದ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರದಂದು ಮುಂಜಾನೆ 4 ಗಂಟೆಗೆ
ತಾಲೂಕಿನ ಬೆಳೆಕೆ ಪಂಚಾಯತ ನೂಜದ ಅಡಿಬಾರ ಎಂಬಲ್ಲಿ ವರದಿಯಾಗಿದೆ.Body:ಮೃತ ಮಹಿಳೆ ಇಂದಿರ ನಾಗರಾಜ ಗೊಂಡ (26) ನೂಜದ ಅಡಿಬಾರ ನಿವಾಸಿ ಎಂದು ತಿಳಿದು ಬಂದಿದೆ.
ಮೃತ ಮಹಿಳೆ ಇದೇ ಮೇ 24 ರಂದು ನೂಜ್ ಅಡಿಬಾರ ಗ್ರಾಮದ ಪ್ರಕರಣದ ಆರೋಪಿತನಾದ ಗ್ರಹಿಣಿಯ ಪತಿ ನಾಗರಾಜ ಸೋಮಯ್ಯ ಗೊಂಡ ಇವರ ಜೊತೆ ಗುರು ಹಿರಿಯರ ನಿಶ್ಚಿಯದಂತೆ ಭಟ್ಕಳದ ಕೋಕ್ತಿ ಮಾಹಾಸತಿ ದೇವಸ್ಥಾನದಲ್ಲಿ ಮದುವೆಯಾಗಿದ್ಫು, ಮದುವೆಯಾದ ನಂತರದಲ್ಲಿ ಮೃತ ಮಹಿಳೆಯ ಪತಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಪದೇ ಪದೇ ಬಾವಿಗೆ ಬಿದ್ದು ಸಾಯಿ ಎಂದು ದುಸ್ಪ್ರೇರಣೆ ನೀಡಿದ್ದು. ಅದರಂತೆ ಬುಧವಾರ ರಾತ್ರಿ 9.30 ಗಂಟೆಯ ಸುಮಾರಿಗೆ ಊಟ ಮಾಡಿ ಮಲಗಿದ್ದವರು ಗುರುವಾರ ಮುಂಜಾನೆ 4 ಗಂಟೆಯ ನಡುವಿನ ಸಮಯದಲ್ಲಿ ಪತಿಯ ಮನೆಯ ಪಕ್ಕದ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.

ಸ್ಥಳಕ್ಕೆ ತಹಸೀಲ್ದಾರ ವಿ.ಪಿ. ಕೊಟ್ರಳ್ಳಿ, ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಂತರ ಗ್ರಹಿಣಿಯ ಮೃತ ದೇಹವನ್ನು ಭಟ್ಕಳ ತಾಲುಕಾಸ್ಪತ್ರೆಗೆ ಕರೆತರಲಾಗಿದ್ದು. ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಆರೋಪಿ ಗಂಡನ ಮೇಲೆ ಸಂಬಂಧಿಕರ ಕೊಲೆ ಆರೋಪ: ಮಹಿಳೆ ಆತ್ಮಹತ್ಯೆಯ ಮಾಡಿಕೊಂಡ ವಿಚಾರ ತಿಳಿದು ಮಹಿಳೆ ಗಂಡನ ಮನೆಯಲ್ಲಿ ಮಹಿಳೆಯ ಕುಟುಂಬಸ್ಥರು, ಸಾಕಷ್ಟು ಮಂದಿ ಸಂಬಂಧಿಕರು ಜಮಾವಣೆಗೊಂಡಿದ್ದು, ಮಹಿಳೆಯನ್ನು ಆಕೆಯ ಪತಿ, ಆರೋಪಿ ನಾಗರಾಜ ಗೊಂಡ ಕೊಲೆ ಮಾಡಿರುವುದಾಗಿ ಆರೋಪಿಯ ಮೇಲೆ ಹಲ್ಲೆಗೆ ಯತ್ನಿಸಿದ್ದು ಗ್ರಾಮೀಣ ಠಾಣೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಹಿಳೆ ಸಂಬಂಧಿಕರನ್ನು ಸಮಾಧಾನ ಪಡಿಸಿ ಆರೋಪಿ, ಪತಿ ನಾಗರಾಜ ಗೊಂಡನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಿ ಸಂಧಾನ‌ ವಿಫಲ: ಮ್ರತ ಮಹಿಳೆಗೆ ಮದುವೆಯಾದ ಒಂದು ತಿಂಗಳಲ್ಲಿಯೇ ಪತಿ ಕಿರುಕುಳ ನೀಡುತ್ತಿದ್ದ ಬಗ್ಗೆ ತನ್ನ ಸಹೋದರನಿಗೆ ತಿಳಿಸಿದ್ದು ಈಗಾಗಲೇ 2-3 ಬಾರಿ ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಸಲಾಗಿದ್ದರು ಎಲ್ಲವೂ ವಿಫಲವಾಗಿತ್ತು ಎಂಬುದಾಗಿ ಮೃತ ಮಹಿಳೆಯ ಸಹೋದರ ಸುಕ್ರ ಮಂಜು ಗೊಂಡ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ಮಹಿಳೆಯ ಸಹೋದರ ಸುಕ್ರ ಮಂಜು ಗೊಂಡ ದೂರು ಸಲ್ಲಿಸಿದ್ದು. ಪ್ರಕರಣವನ್ನು ಠಾಣಾ ಪಿ.ಎಸ್.ಐ ಎಚ್. ಓಂಕಾರಪ್ಪ ದಾಖಲಿಸಿಕೊಂಡಿದ್ಫು ತನಿಖೆ ಮುಂದುವರಿಸಿದ್ದಾರೆ.

ಬೈಟ್: ಸುಕ್ರ ಮಂಜು ಗೊಂಡ ಮೃತ ಮಹಿಳೆಯ ಸಹೋದರ Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.