ಉತ್ತರ ಕನ್ನಡ/ಭಟ್ಕಳ: ಲಾಕ್ಡೌನ್ ಜಾರಿಯಾದ ಬಳಿಕ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಕೆಲಸವೇ ಇಲ್ಲದಾಗಿದೆ. ಪ್ರಯಾಣಿಕರನ್ನೇ ನಂಬಿ ರಸ್ತೆಗಿಳಿಯುತ್ತಿದ್ದ ಇವರು ಲಾಕ್ಡೌನ್ನಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆ ಭಟ್ಕಳದ 2 ಸಾವಿರ ಆಟೋ ರಿಕ್ಷಾ ಚಾಲಕರಿಗೆ ಮಾಜಿ ಶಾಸಕ ಮಂಕಾಳ ವೈದ್ಯ ದಿನಸಿ ಕಿಟ್ಗಳನ್ನು ನೀಡಿ ನೆರವಾಗಿದ್ದಾರೆ.
ತಾಲೂಕಿನ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಗೂಡ್ಸ್ ರಿಕ್ಷಾ ಚಾಲಕರಿಗಾಗಿ ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಅವರು ಸುಮಾರು 2,000 ಕ್ಕೂ ಹೆಚ್ಚು ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಿದರು. ಈ ವೇಳೆ, ಮಾತನಾಡಿದ ಅವರು, ಕಳೆದ 27 ದಿನಗಳಿಂದ ದುಡಿಮೆಯಿಲ್ಲದೇ ಮನೆಯಲ್ಲಿಯೇ ಇರುವ ಚಾಲಕರು ತೀವ್ರ ಸಂಕಷ್ಟದಲ್ಲಿರುವುದನ್ನು ಅರಿತು ಅವರಿಗೆ ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಿದ್ದೇನೆ ಎಂದರು.