ETV Bharat / state

₹19.50 ಲಕ್ಷ ಪಿಂಚಣಿ ಹಣ ಜನಸೇವೆಗೆ ; ಮಾಜಿ ಶಾಸಕ ಮಂಕಾಳ್ ವೈದ್ಯ ಘೋಷಣೆ - ಪಿಂಚಣಿ ಹಣ

ಕೊರೊನಾದಿಂದಾಗಿ ಹೆತ್ತವರನ್ನು ಕಳೆದುಕೊಂಡ ತಮ್ಮ ಕ್ಷೇತ್ರದ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸಕ್ಕಾಗಿ ತಮ್ಮ ಪಿಂಚಣಿಯ ಸಂಪೂರ್ಣ ಹಣವನ್ನು ವಿನಿಯೋಗಿಸುವುದಾಗಿ ಮಾಜಿ ಶಾಸಕ ಮಂಕಾಳ್ ವೈದ್ಯ ಘೋಷಣೆ ಮಾಡಿದ್ದಾರೆ..

mankal
mankal
author img

By

Published : Jun 6, 2021, 9:55 PM IST

Updated : Jun 6, 2021, 10:42 PM IST

ಕಾರವಾರ : ಕೊರೊನಾ ಸಂಕಷ್ಟದ ಸಮಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಡ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸುವುದಾಗಿ ಮಾಜಿ ಶಾಸಕ ಮಂಕಾಳ್ ವೈದ್ಯ ಘೋಷಿಸಿದ್ದಾರೆ.

ತಮಗೆ ಬಂದ ಈವರೆಗಿನ ಪಿಂಚಣಿಯ ಒಟ್ಟು 19.50 ಲಕ್ಷ ಹಣವನ್ನು ಬಡ ಜನರ ಸಹಾಯಕ್ಕೆ ಹಾಗೂ ಮಠ-ಮಂದಿರಗಳ ಅಭಿವೃದ್ಧಿಗೆ ಬಳಸುವುದಾಗಿ ಘೋಷಿಸಿದ್ದಾರೆ. ಕೋವಿಡ್​ ಕಾರಣದಿಂದ ಹುಟ್ಟುಹಬ್ಬ ಆಚರಣೆ ಮಾಡದಿರುವ ಬಗ್ಗೆ ಮುಂಚಿತವಾಗಿ ಘೋಷಣೆ ಮಾಡಿದ್ದ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಹುಟ್ಟುಹಬ್ಬದ ಪ್ರಯುಕ್ತ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಮಾಜಿ ಶಾಸಕ ಮಂಕಾಳ್ ವೈದ್ಯ

ಕೋವಿಡ್​ನಿಂದಾಗಿ ಕ್ಷೇತ್ರದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳು ಎಲ್ಲಿವರೆಗೆ ಏನು ವಿದ್ಯಾಭ್ಯಾಸ ಮಾಡುತ್ತಾರೋ ಅದರ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ತಾವು ಭರಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಆ ಮಕ್ಕಳಿಗೆ ಅವಶ್ಯಕತೆಯಿದ್ದಲ್ಲಿ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಘೋಷಣೆ ಮಾಡಿದ್ದಾರೆ.

ಇದಲ್ಲದೆ ತಮಗೆ ಸರ್ಕಾರದಿಂದ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು 45 ಸಾವಿರ ರೂ.ಗಳು ಬರುತ್ತಿದೆ. ಸತತ ಮೂರು ವರ್ಷದವರೆಗೆ 19.50 ಲಕ್ಷ ರೂ. ನಾನು ಈವರೆಗೆ ಪಡೆದಿಲ್ಲ. ಈಗ ಇದರ ಪ್ರಯೋಜನ ಜನರಿಗೆ ಸಲ್ಲಬೇಕೆಂಬ ಉದ್ದೇಶದಿಂದ ಜನರ ಸಹಾಯಕ್ಕೆ ಹಾಗೂ ಮಠ-ಮಂದಿರಗಳ ಅಭಿವೃದ್ಧಿಗೆ ಬಳಸುವುದಾಗಿ ಹೇಳಿದ್ದಾರೆ.

ಸರ್ಕಾರದಲ್ಲಿಯೇ ಹಣ ಇಡಬೇಕೆಂದಿದ್ದರೂ ಸದ್ಯ ಸರ್ಕಾರದಿಂದ ಲೂಟಿ ನಡೆಯುತ್ತಿದೆ. ಕ್ಷೇತ್ರದ ಜನರು ನನ್ನನ್ನು ಶಾಸಕನನ್ನಾಗಿ ಮಾಡಿಲ್ಲದಿದ್ದರೆ ಅಷ್ಟು ಹಣ ಬರುತ್ತಿರಲಿಲ್ಲ. ಅದಕ್ಕೆ ಅವರಿಗೇ ಅದನ್ನು ನೀಡುವುದು ಸೂಕ್ತ ಎಂದು ತೀರ್ಮಾನ ಕೈಗೊಂಡಿದ್ದೇನೆ.

ಜೊತೆಗೆ ಈ ಹಣದಲ್ಲಿ ಕೋವಿಡ್ ನಿರ್ವಹಣೆಗೆ ಜನರ ಸಹಾಯಕ್ಕೂ ಬಳಕೆ ಮಾಡಿಕೊಳ್ಳಲಿದ್ದು, ಕೋವಿಡ್ ಬಳಿಕವೂ ಜನರಿಗೆ ತಲುಪಿಸುವ ಕೆಲಸ ಮಾಡಲಿದ್ದೇನೆ ಎಂದು ಮಾಜಿ ಶಾಸಕ ವೈದ್ಯ ತಿಳಿಸಿದ್ದಾರೆ. ಈ ಹಿಂದೆಯೂ ಸಹ 5 ವರ್ಷದ ಶಾಸಕತ್ವದ ಅವಧಿಯ ಗೌರವಧನವನ್ನು ಕ್ಷೇತ್ರದಲ್ಲಿನ ಶಾಲೆ, ದೇವಸ್ಥಾನ, ಬಡ ವಿದ್ಯಾರ್ಥಿಗಳಿಗೆ, ಬಡವರಿಗೆ, ಮಠ-ಮಂದಿರಕ್ಕೆ ನೀಡಿದ್ದರು.

Last Updated : Jun 6, 2021, 10:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.