ETV Bharat / state

ಸೇತುವೆ ಮೇಲಿಂದ ನದಿಗೆ ಬಿದ್ದ ಲಾರಿ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ - ಗಂಗಾವಳಿ ನದಿಯ ಸೇತುವೆ

ಗಂಗಾವಳಿ ನದಿಗೆ ಕಟ್ಟಲಾಗಿರುವ ಸೇತುವೆ ಮೇಲಿನಿಂದ ಚೀರೆಕಲ್ಲು ಇಳಿಸಿ ವಾಪಸ್ ಆಗುತ್ತಿದ್ದ ಲಾರಿಯೊಂದು ನದಿಗೆ ಉರುಳಿತ್ತು. ತಕ್ಷಣ ಐವರನ್ನು ರಕ್ಷಿಸಲಾಗಿತ್ತು. ಆದ್ರೆ ಓರ್ವ ವ್ಯಕ್ತಿ ನಾಪತ್ತೆಯಾಗಿದ್ದ.

ಸೇತುವೆ ಮೇಲಿಂದ ನದಿಗೆ ಬಿದ್ದ ಲಾರಿ
ಸೇತುವೆ ಮೇಲಿಂದ ನದಿಗೆ ಬಿದ್ದ ಲಾರಿ
author img

By

Published : Aug 26, 2022, 10:09 PM IST

ಕಾರವಾರ: ಅಂಕೋಲಾ ತಾಲೂಕಿನ ಪಣಸಗುಳಿಯಿಂದ ಯಲ್ಲಾಪುರದ ಗುಳ್ಳಾಪುರಕ್ಕೆ ತುಂಬಿ ಹರಿಯುತ್ತಿದ್ದ ಗಂಗಾವಳಿ ನದಿಯ ಸೇತುವೆ ಮೇಲೆ ಲಾರಿ ದಾಟಿಸುವಾಗ ನೀರಿನ ಸೆಳೆತಕ್ಕೆ ಸಿಕ್ಕಿ ಪಲ್ಟಿಯಾಗಿತ್ತು. ಇದರಲ್ಲಿ ಇದ್ದ ಓರ್ವ ವ್ಯಕ್ತಿ ನಾಪತ್ತೆಯಾಗಿದ್ದ. ಇದೀಗ ಆತನ ಶವ ಪತ್ತೆಯಾಗಿದೆ. ಕುಮಟಾ ತಾಲೂಕಿನ ಗೋಕರ್ಣ ಬಂಕಿಕೊಡ್ಲ ಸಮೀಪದ ಹನೇಹಳ್ಳಿಯ ಸಂದೀಪ ಪೊಕ್ಕಾ ಆಗೇರ ಮೃತ ದುರ್ದೈವಿ.

ಘಟನೆ ನಡೆದ ಸ್ಥಳದಿಂದ ಸುಮಾರು 2.5 ಕಿ.ಮೀ ದೂರದಲ್ಲಿ ಸ್ಥಳೀಯರು ಮೃತದೇಹವನ್ನು ಪತ್ತೆ ಮಾಡಿ ದಡಕ್ಕೆ ತಂದಿದ್ದಾರೆ. ಆಗಸ್ಟ್ 24ರ ಬುಧವಾರ ಸಂಜೆ ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ನೀರಿನ ರಭಸಕ್ಕೆ ಲಾರಿ ಪಲ್ಟಿಯಾಗಿತ್ತು. ಈ ವೇಳೆ ಚಾಲಕ ಹಾಗೂ ನಾಲ್ವರು ಕಾರ್ಮಿಕರನ್ನು ಸ್ಥಳೀಯ ಬೋಟ್ ಸಹಾಯದಿಂದ ಬಚಾವ್ ಮಾಡಲಾಗಿತ್ತು. ಆದರೆ ಈ ವೇಳೆ ಮತ್ತೋರ್ವ ಕಾರ್ಮಿಕ ಸಂದೀಪ ಎಂಬಾತ ನದಿಯ ಹರಿವಿನಲ್ಲಿ ಕೊಚ್ಚಿಕೊಂಡು ಹೋಗಿದ್ದ.

ಸೇತುವೆ ಮೇಲಿಂದ ನದಿಗೆ ಬಿದ್ದ ಲಾರಿ

ಬಳಿಕ ಆತ ಲಾರಿಯಲ್ಲಿ ಇರಬಹುದು ಎಂದು ಊಹಿಸಲಾಗಿತ್ತು. ಆದರೆ ಲಾರಿ ಮೇಲೆತ್ತಿದಾಗ ಆತ ಕಂಡುಬಂದಿರಲಿಲ್ಲ. ಹೀಗಾಗಿ ಆತನ ಪತ್ತೆಗಾಗಿ ಎಸ್‌ಡಿಆರ್‌ಎಫ್, ಪೊಲೀಸರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದರೆ ಸಂಜೆಯವರೆಗೆ ಹುಡುಕಾಟ ನಡೆಸಿದರೂ ಆತ ಮಾತ್ರ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಎರಡನೇಯ ದಿನ ಸಹ ಗಂಗಾವಳಿ ನದಿ ನೀರಿನಲ್ಲಿ ಮತ್ತು ಅಕ್ಕಪಕ್ಕದಲ್ಲಿ ಆತನ ಪತ್ತೆಗೆ ನಿರಂತರ ಕಾರ್ಯಚರಣೆ ಕೈಗೊಳ್ಳಲಾಗಿತ್ತು. ಇದೀಗ ಘಟನೆ ನಡೆದ ಎರಡು ದಿನದ ಬಳಿಕ ಆತನ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಕಾರವಾರ: ಸೇತುವೆ ಮೇಲಿಂದ ನದಿಗೆ ಬಿದ್ದ ಲಾರಿ, ಐವರ ರಕ್ಷಣೆ, ಓರ್ವ ನಾಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.