ETV Bharat / state

ಮುರುಡೇಶ್ವರ ಕಡಲತೀರದಲ್ಲಿ ಅವಘಡ... ಅಲೆಗೆ ಸಿಲುಕಿದ್ದ ಐವರು ಪ್ರವಾಸಿಗರ ರಕ್ಷಣೆ - Five people stack in Murudeshwara beach

ಮುರುಡೇಶ್ವರ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಅಲೆಗೆ ಸಿಲುಕಿ ಅಪಾಯದಲ್ಲಿದ್ದ ಐವರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

Karwar
Karwar
author img

By

Published : Oct 11, 2020, 4:47 PM IST

ಕಾರವಾರ: ಭಟ್ಕಳ ತಾಲೂಕಿನ ಮುರುಡೇಶ್ವರ ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಲೆಗೆ ಸಿಲುಕಿ ಅಪಾಯದಲ್ಲಿದ್ದ ಐವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.

ತುಮಕೂರಿನಿಂದ ನಾಲ್ವರು ಸ್ನೇಹಿತರೊಂದಿಗೆ ಜೋಗ್ ಫಾಲ್ಸ್ ಗೆ ತೆರಳಿ ಬಳಿಕ ಮುರುಡೇಶ್ವರ ಕಡಲತೀರಕ್ಕೆ ಆಗಮಿಸಿದ್ದರು. ಈ ವೇಳೆ ಈಜಲು ಹೋಗಿ ಅರ್ಜುನ್ ಎಸ್. ಹಾಗೂ ಚರಣ್ ಸಿ.ಎಸ್ ಎನ್ನುವವರು ಅಲೆಗೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದರು.

ತಕ್ಷಣ ಜೊತೆಯಲ್ಲಿದ್ದವರು ಕೂಗಿಕೊಂಡಾಗ ಲೈಫ್ ಗಾರ್ಡ್ ಗಳು ಬಂದು ರಕ್ಷಣೆ ಮಾಡಿ ದಡಕ್ಕೆ ಕರೆ ತಂದಿದ್ದಾರೆ.

ಮತ್ತೆ ಮೂವರ ರಕ್ಷಣೆ :

ಇನ್ನು ಬೆಂಗಳೂರಿನಿಂದ ಒಟ್ಟು 9 ಮಂದಿ ಸೇರಿ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದು ಸಮುದ್ರದಲ್ಲಿ ಈಜಾಡತೊಡಗಿದ್ದರು. ಈ ವೇಳೆ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಒದ್ದಾಡುತ್ತಿರುವಾಗ ಲೈಫ್ ಗಾರ್ಡ್ ಗಳು ಬಂದು ಮೂವರನ್ನು ರಕ್ಷಣೆ ಮಾಡಿದ್ದಾರೆ.

ಜಯರಾಮ ಹರಿಕಾಂತ, ಶಶಿಧರ್ ನಾಯ್ಕ, ಅಣ್ಣಪ್ಪ ಹರಿಕಾಂತ ಹಾಗೂ ಕೆಲ ಮೀನುಗಾರರು ಸೇರಿ ಅಪಾಯದಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.