ETV Bharat / state

3ನೇ ಹಂತದ ಲಸಿಕೆ ವಿತರಣೆಗೆ ಚಾಲನೆ: ಜಾಗೃತರಾಗಿರಲು ಸಚಿವ ಸುಧಾಕರ್ ಕರೆ - 2ನೇ ಅಲೆಗೆ ಜಾಗೃತರಾಗಿರಲು ಕರೆ

ಸೋಂಕು ಇರೋ ರಾಜ್ಯದಿಂದ ಬರುವವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ಬರಲು ಸೂಚಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಲಾಕ್​ಡೌನ್ ಆಗೋ ಸ್ಥಿತಿ ಇನ್ನೂ ಬಂದಿಲ್ಲ. ಜನರು ಜವಾಬ್ದಾರಿಯುತವಾಗಿ ಈ ಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದ್ದಾರೆ.

ಸಚಿವ ಸುಧಾಕರ್
ಸಚಿವ ಸುಧಾಕರ್
author img

By

Published : Mar 1, 2021, 8:01 PM IST

ಕಾರವಾರ: ರಾಜ್ಯದಲ್ಲಿ ಮತ್ತೆ ಲಾಕಡೌನ್ ಆಗಬಹುದೆಂಬ ಯೋಚನೆಯನ್ನು ಬಿಟ್ಟು ಪ್ರತಿಯೊಬ್ಬರು ಜವಾಬ್ದಾರಿಯಿಂದ ವರ್ತಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.

ಶಿರಸಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಕೋವಿಡ್-19 ರಾಜ್ಯ ಮಟ್ಟದ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಈಗಾಗಲೇ ಮೂರನೇ ಹಂತದ ಲಸಿಕೆಗೆ ಚಾಲನೆ ನೀಡಲಾಗಿದೆ. ಲಸಿಕೆ ಪಡಿಯಲು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ ಜನರು ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ. ಇದಕ್ಕಾಗಿ 270ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 50 ಲಕ್ಷ ‌ಜನರು ಹಿರಿಯ ನಾಗರಿಕರಿದ್ದು, 16 ಲಕ್ಷ ಜನರು ಇತರ ರೋಗದ ಸಮಸ್ಯೆ ಇರುವವರು ಇದ್ದಾರೆ ಎಂದರು.

3ನೇ ಹಂತದ ಲಸಿಕೆ ವಿತರಣೆಗೆ ಚಾಲನೆ

ಲಸಿಕೆ ವಿತರಣೆ ಹಾಗೂ ತೆಗೆದುಕೊಳ್ಳುವ ಹಂತದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ. ಜನರು ಆನ್‌ಲೈನ್ ಮೂಲಕ ಹೆಸರು ದಾಖಲು ಮಾಡಿಕೊಳ್ಳಬಹುದು. ಅನಕ್ಷರಸ್ಥರು ಸಹ ನೇರವಾಗಿ ಹತ್ತಿರದ ಪ್ರಾಥಮಿಕ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪಡೆಯಬಹುದು ಎಂದರು.

ಸೋಂಕು ಇರೋ ರಾಜ್ಯದಿಂದ ಬರುವವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ಬರಲು ಸೂಚಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಲಾಕ್​ಡೌನ್ ಆಗೋ ಸ್ಥಿತಿ ಇನ್ನೂ ಬಂದಿಲ್ಲ. ಜನರು ಜವಾಬ್ದಾರಿಯುತವಾಗಿ ಈ ಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.