ETV Bharat / state

ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಕೋಡಿಶ್ರೀ ನುಡಿದ್ರು ಮಹತ್ವದ ಭವಿಷ್ಯ

author img

By

Published : Jul 21, 2021, 2:10 PM IST

Updated : Jul 21, 2021, 3:08 PM IST

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೋಡಿ ಮಠ ಶ್ರೀಗಳು ಎಲ್ಲವೂ 'ಶೀಘ್ರದಲ್ಲಿ ಸುಖಾಂತ್ಯ ಕಾಣಲಿದೆ' ಎಂದು ಭವಿಷ್ಯ ನುಡಿದಿದ್ದಾರೆ.

kodimatt swamiji reaction on cm bsy change
ಕೋಡಿಮಠ ಶ್ರೀ ಭವಿಷ್ಯ

ಶಿರಸಿ(ಉತ್ತರ ಕನ್ನಡ): ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಕುರಿತು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಶೀಘ್ರದಲ್ಲೇ ಈ ಬೆಳವಣಿಗೆ ಸುಖಾಂತ್ಯ ಕಾಣಲಿದೆ ಎಂದು ಶ್ರೀಗಳು ಹೇಳಿದ್ದಾರೆ.

ಕೋಡಿಮಠ ಶ್ರೀ ಭವಿಷ್ಯ

ಶಿರಸಿ ತಾಲೂಕಿನ ಈಚಲು ಬೆಟ್ಟದಲ್ಲಿ ಭೂದೇವಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಯಾವ ರೀತಿಯ ಸುಖಾಂತ್ಯ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯಕ್ಕೆ ಈಗ ಅಶುಭ ನುಡಿಯುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.‌

ರಾಜಕೀಯ ಬೆಳವಣಿಗೆಯ ಕುರಿತು ಮಠಾಧೀಶರು ಅಭಿಪ್ರಾಯ ವ್ಯಕ್ತಪಡಿಸುವುದು ಅವರವರ ವಾಕ್ ಸ್ವಾತಂತ್ರ್ಯವಾಗಿದ್ದು, ಈ ಅವಕಾಶವನ್ನು ಸಂವಿಧಾನವೇ ನೀಡಿದೆ ಎಂದು ಸಮರ್ಥಿಸಿಕೊಂಡರು.

ಆಗಸ್ಟ್ ಮೂರನೇ ವಾರದಿಂದ ರೋಗ ರುಜಿನ ಹೆಚ್ಚಾಗಲಿದೆ. ಅದು ಜನವರಿಯವರೆಗೆ ಇರಲಿದೆ. ಆದರೆ ಕೊರೊನಾ ಸಾಯುವಂತಹ ಕಾಯಿಲೆ ಅಲ್ಲ. ಜನರು ಕೇವಲ ಭೀತಿಯಿಂದ ಸಾಯುತ್ತಿದ್ದಾರೆ. ಯಾರೂ ಗಾಬರಿ ಪಡುವ ಅವಶ್ಯಕತೆಯಿಲ್ಲ. ಆಶ್ವೀಜ ಮಾಸದಿಂದ ಸಂಕ್ರಾಂತಿಯ ಒಳಗೆ ಬಹುದೊಡ್ಡ ಅವಘಡ ಆಗಲಿದೆ. ಮುಂದೆ ಹೆಚ್ಚು ಮಳೆಯಾಗಲಿದ್ದು, ಜಲಪ್ರಳಯ ಉಂಟಾಗಲಿದೆ ಎಂದು ಇದೇ ವೇಳೆ ಮತ್ತೊಂದು ಭವಿಷ್ಯ ನುಡಿದರು.

Last Updated : Jul 21, 2021, 3:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.