ಕಾರವಾರ : ಆಳ ಸಮುದ್ರದ ಮೀನುಗಾರಿಕೆಗೆ ಕೊನೆಯ ದಿನವಾದ ಶುಕ್ರವಾರದಂದು ಮೀನುಗಾರರ ಬಲೆಗೆ ಬರೋಬ್ಬರಿ 12 ಕೆ.ಜಿ ತೂಕದ ಇಸ್ವಾಣ (ಕಿಂಗ್ ಫಿಶ್) ಮೀನು ಬಿದ್ದಿದೆ.
ತಮಿಳುನಾಡು ಮೂಲದ ಪಾತಿದೋಣಿಯ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ, ಕಿಂಗ್ ಫಿಶ್ ಗುಂಪು ಮೀನುಗಾರರ ಬಲೆಗೆ ಬಿದ್ದಿದೆ. ಅದರಲ್ಲಿ ಸುಮಾರು ಆರು ಅಡಿ ಉದ್ದದ ಬೃಹತ್ ಕಿಂಗ್ ಫಿಶ್ ಬಲೆ ಬಿದ್ದಿದ್ದು, ಸಂಜೆ ಕಾರವಾರದ ಬೈತಖೋಲ್ ಬಂದರಿಗೆ ತರಲಾಗಿದೆ. ಸದ್ಯ ಕೆ.ಜಿಗೆ 700 ರೂ. ದರ ಇದ್ದು, 12 ಸಾವಿರಕ್ಕೂ ಹೆಚ್ಚು ಬೆಲೆ ಆಗಬಹುದು ಎಂದು ಅಂದಾಜಿಸಲಾಗಿದೆ.