ETV Bharat / state

ಜೀವ ಒತ್ತೆ ಇಟ್ಟು ಪ್ರಾಣ ರಕ್ಷಣೆ: ಪ್ರವಾಸಿಗರಿಗೆ ಆಪತ್ಭಾಂದವರು ಈ ಲೈಫ್​​ ಗಾರ್ಡ್ಸ್‌

ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡಲ ತೀರಗಳಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ ಕೊಚ್ಚಿ ಹೋಗುತ್ತಿದ್ದ 95ಕ್ಕೂ ಹೆಚ್ಚು ಪ್ರವಾಸಿಗರನ್ನು ಲೈಫ್​​ ಗಾರ್ಡ್ಸ್‌ ರಕ್ಷಣೆ ಮಾಡಿದ್ದಾರೆ- ಪ್ರವಾಸೋದ್ಯಮ ಪ್ರಭಾರ ನಿರ್ದೇಶಕ ಜಯಂತ ಹೇಳಿಕೆ.

lifeguards protecting tourists
ಲೈಫ್​​ ಗಾರ್ಡ್​ಗಳು
author img

By

Published : Jan 18, 2023, 8:58 AM IST

ಕಾರವಾರ: ಪ್ರವಾಸಿಗರ ಪಾಲಿಗೆ ಪ್ರಾಣರಕ್ಷಕರು ಲೈಫ್‌ಗಾರ್ಡ್ಸ್‌

ಕಾರವಾರ (ಉತ್ತರ ಕನ್ನಡ) : ಪ್ರವಾಸಿಗರ ಪಾಲಿಗೆ ಸ್ವರ್ಗದಂತಿರುವ ಉತ್ತರ ಕನ್ನಡ ಜಿಲ್ಲೆಯತ್ತ ಪ್ರವಾಸಿಗರ ದಂಡು ಹರಿದು ಬರುತ್ತದೆ. ಹೀಗೆ ಬಂದವರು ಇಲ್ಲಿನ ಕಡಲ ತೀರಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಅಪಾಯ ಅರಿಯದೇ ಮೋಜು ಮಸ್ತಿಯಲ್ಲಿ ತೊಡಗಿ ಮೈಮೇಲೆ ಆಪತ್ತು ತಂದುಕೊಳ್ಳುತ್ತಿರುತ್ತಾರೆ. ಆದರೆ ಇಂತಹ ಪ್ರವಾಸಿಗರ ಪಾಲಿಗೆ ಪ್ರಾಣ ರಕ್ಷಕರಾಗಿ ಲೈಫ್ ಗಾರ್ಡ್​ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾವಿನ ಮನೆ ತಲುಪುತ್ತಿದ್ದ ನೂರಾರು ಪ್ರವಾಸಿಗರನ್ನು ಇವರು ದಡ ಸೇರಿಸಿ ಮರುಜೀವ ನೀಡಿದ್ದಾರೆ.

95ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ: ಪ್ರವಾಸೋದ್ಯಮದಿಂದಲೇ ಸಾಕಷ್ಟು ಹೆಸರುವಾಸಿಯಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ದೇಶ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಕೋವಿಡ್​​ ಕಡಿಮೆಯಾದ ಬಳಿಕ ಜಿಲ್ಲೆಯ ಪ್ರವಾಸಿ ತಾಣಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಒಂದು ಕೋಟಿಗೂ ಮೀರಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಮುರುಡೇಶ್ವರ, ಗೋಕರ್ಣ ಕಡಲ ತೀರ ನಿತ್ಯವೂ ಪ್ರವಾಸಿಗರಿಂದಲೇ ತುಂಬಿಕೊಳ್ಳುತ್ತಿದೆ. ಹೀಗೆ ಬರುವ ಪ್ರವಾಸಿಗರು ಕಡಲತೀರದ ಅಪಾಯಗಳ ಬಗ್ಗೆ ತಿಳಿಯದೆ ಎಲ್ಲೆಂದರಲ್ಲಿ ಈಜಾಡುತ್ತಿದ್ದು ಅಲೆಗಳ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾರೆ. ಜಿಲ್ಲೆಯ ವಿವಿಧ ಕಡಲ ತೀರಗಳಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ ಹೀಗೆ ಕೊಚ್ಚಿ ಹೋಗುತ್ತಿದ್ದ 95ಕ್ಕೂ ಹೆಚ್ಚು ಪ್ರವಾಸಿಗರನ್ನು ಲೈಫ್ ಗಾರ್ಡ್​ಗಳು ರಕ್ಷಿಸಿದ್ದಾರೆ. ಕಡಲ ತೀರದ ಬಳಿಯೇ ಇದ್ದು ತಮ್ಮ ಪ್ರಾಣ ಲೆಕ್ಕಿಸದೆ ಪ್ರವಾಸಿಗರ ಜೀವ ಉಳಿಸುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

27 ಮಂದಿ ಲೈಫ್​​ ಗಾರ್ಡ್​ಗಳ ನೇಮಕ: ಕಡಲ ತೀರಗಳತ್ತ ಆಕರ್ಷಿತರಾಗುವ ಪ್ರವಾಸಿಗರು ಆಪತ್ತು ತಂದುಕೊಳ್ಳುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಳೆದ ಕೆಲ ವರ್ಷದ ಹಿಂದೆ ಕಡಲ ತೀರ ಹಾಗೂ ಜಲಪಾತಗಳು ಸೇರಿ ಒಟ್ಟು 12 ಕಡೆ 27 ಮಂದಿ ಲೈಫ್​​ ಗಾರ್ಡ್​ಗಳನ್ನು ನೇಮಿಸಿದೆ. ಹೀಗೆ ನೇಮಕವಾದ ಬಳಿಕ ಅಪಾಯಕ್ಕೆ ಸಿಲುಕಿದ ಸಾಕಷ್ಟು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಪ್ರಭಾರ ನಿರ್ದೇಶಕ ಜಯಂತ ಮಾಹಿತಿ ನೀಡಿದರು.

ಲೈಫ್​​ ಗಾರ್ಡ್​ಗಳಿಗೆ ಜೀವ ಭಯ: ತಮ್ಮ‌ ಪ್ರಾಣ ಒತ್ತೆಯಿಟ್ಟು ಪ್ರವಾಸಿಗರನ್ನು ರಕ್ಷಿಸುವ ಲೈಫ್ ಗಾರ್ಡ್​ಗಳಿಗೆ ಇದೀಗ ಜೀವ ಭಯ ಕಾಡುತ್ತಿದೆ. ಕಡಲ ತೀರಗಳಲ್ಲಿ ಈಜಾಡುತ್ತಿದ್ದವರಿಗೆ ಮುಂದೆ ಹೋಗದಂತೆ, ಆಳ ಇರುವ ಕಡೆ ತೆರಳದಂತೆ ಸೂಚಿಸಿದರೆ ಕೆಲ ಪ್ರವಾಸಿಗರು ಅವರೊಂದಿಗೆ ಜಗಳಕ್ಕೆ ಬರುತ್ತಿದ್ದಾರೆ. ಅಲ್ಲದೇ ಕಳೆದ ಎರಡು ದಿನದ ಹಿಂದೆ ಮುರುಡೇಶ್ವರದಲ್ಲಿ ಅಲೆಗೆ ಕೊಚ್ಚಿಹೋಗುತ್ತಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದಾಗಲೂ ವಿನಾಕಾರಣ ಕುಡಿದ ಮತ್ತಿನಲ್ಲಿ ಲೈಫ್ ಗಾರ್ಡ್​ಗಳ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಲಾಗಿದೆ. ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರವಾಸಿಗರು ಸೇರುವ ತಾಣಗಳಲ್ಲಿ ಪೊಲೀಸರನ್ನು ನೇಮಿಸಲಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಿಲ್ಲೆಯ ಕಡಲ ತೀರಗಳಲ್ಲಿ ಪ್ರವಾಸಿಗರ ರಕ್ಷಣೆಗಿರುವ ಲೈಫ್​​ ಗಾರ್ಡ್​ಗಳ ಮೇಲಿನ ಹಲ್ಲೆ ನಿಜಕ್ಕೂ ಖಂಡನೀಯ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಿ ಹೆಚ್ಚು ಪ್ರವಾಸಿಗರು ಸೇರುವ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂದು ಸ್ಥಳೀಯರಾದ ರವಿ ಗೌಡ ಒತ್ತಾಯಿಸಿದ್ಧಾರೆ.

ಇದನ್ನೂ ಓದಿ: ಪ್ರಾಣ ರಕ್ಷಿಸಿದ ಲೈಫ್ ಗಾರ್ಡ್ ಮೇಲೆಯೇ ಹಲ್ಲೆ: ಮದ್ಯದ ಅಮಲಿನಲ್ಲಿ ಪ್ರವಾಸಿಗರ ರಂಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.