ETV Bharat / state

ಕರಾವಳಿಯಲ್ಲಿ ಸೈಕ್ಲೋನ್ ಎಫೆಕ್ಟ್: ಅವಧಿಗೂ ಮೊದಲೇ ಮೀನುಗಾರಿಕೆ ಬಂದ್! - ಸೈಕ್ಲೋನ್ ಎಫೆಕ್ಟ್​ನಿಂದ ಮೀನುಗಾರಿಕೆ ಬಂದ್

ಬಂಗಾಳಕೊಲ್ಲಿಯಲ್ಲಿ ಅಸಾನಿ ಚಂಡಮಾರುತ ಅಪ್ಪಳಿಸಿದೆ. ಒರಿಸ್ಸಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯದ ಕರಾವಳಿ ಭಾಗದಲ್ಲಿ ಚಂಡಮಾರುತ ಸಾಕಷ್ಟು ಪರಿಣಾಮ ಬೀರಿದೆ. ರಾಜ್ಯದ ಕರಾವಳಿ ಪ್ರದೇಶದಲ್ಲೂ ಮೀನುಗಾರರು ಒಂದು ವಾರದಿಂದ ಮೀನುಗಾರಿಕೆಗೆ ತೆರಳದ ಪರಿಸ್ಥಿತಿ ಇದೆ.

ಅವಧಿಗೂ ಮೊದಲೇ ಮೀನುಗಾರಿಕೆ ಬಂದ್
ಅವಧಿಗೂ ಮೊದಲೇ ಮೀನುಗಾರಿಕೆ ಬಂದ್
author img

By

Published : May 12, 2022, 12:53 PM IST

ಕಾರವಾರ: ಬಂಗಾಳ ಕೊಲ್ಲಿಯಲ್ಲಿ ಅಪ್ಪಳಿಸಿರುವ ಅಸಾನಿ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿ ಜಿಲ್ಲೆಯ ಮೇಲೂ ಬೀಳುತ್ತಿದೆ. ಕಳೆದ ಒಂದು ವಾರದಿಂದ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಜೋರಾಗಿ ಬೀಸುವ ಗಾಳಿಯಿಂದ ಮೀನುಗಾರಿಕೆಗೆ ತೆರಳಲಾಗದೆ ಬೋಟ್​​ಗಳು ವಾಪಸ್ ಆಗಿದ್ದು, ಅವಧಿ ಮುಕ್ತಾಯಕ್ಕೂ ಮುಂಚೆಯೇ ಮೀನುಗಾರಿಕೆ ಬಂದ್ ಮಾಡುವ ಪರಿಸ್ಥಿತಿ ಉದ್ಭವಿಸಿದೆ.

ಕಾರವಾರ ಬಂದರಿನಿಂದ ಪ್ರತಿನಿತ್ಯ ನೂರಾರು ಬೋಟ್​​ಗಳು ಮೀನುಗಾರಿಕೆಗೆ ತೆರಳುತ್ತವೆ. ಆದರೆ ಒಂದು ವಾರದಿಂದ ಆಳ ಸಮುದ್ರದಲ್ಲಿ ಅಲೆಗಳ ಅಬ್ಬರ ಅಧಿಕವಾಗಿದ್ದು, ಜೋರಾಗಿ ಬೀಸುವ ಗಾಳಿಯಿಂದ ಮೀನುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರದ ಬೈತ್ಕೋಲದ ಬಂದರಿನಲ್ಲಿ ವಾರದಿಂದ ಬೋಟ್​​ಗಳನ್ನು ಲಂಗರು ಹಾಕಿ ಮೀನುಗಾರರು ಕಾಯುತ್ತಾ ಕುಳಿತಿದ್ದಾರೆ. ಮೇ ಅಂತ್ಯಕ್ಕೆ ಪ್ರತಿ ವರ್ಷ ಮೀನುಗಾರಿಕೆ ಬಂದ್ ಮಾಡಲಾಗುತ್ತದೆ. ಆದರೆ ಈ ಬಾರಿ ತಿಂಗಳ ಮುಂಚೆಯೇ ಚಂಡಮಾರುತದ ಎಫೆಕ್ಟ್​​ನಿಂದ ಮೀನುಗಾರಿಕೆ ಬಂದ್ ಮಾಡಿರುವುದಕ್ಕೆ ಮೀನುಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟೇ ಅಲ್ಲ, ಮಲ್ಪೆ, ಕೇರಳ, ಗೋವಾ ಸೇರಿದಂತೆ ಹಲವು ಪ್ರದೇಶದ ಬೋಟ್​​ಗಳು ಲಂಗರು ಹಾಕಿ ನಿಂತಿವೆ. ಇನ್ನು ಈ ಬಾರಿ ಮೀನುಗಾರಿಕೆ ನಂಬಿದ್ದವರು ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಮೀನುಗಾರಿಕೆ ಬಂದ್ ಮಾಡುವ ತಿಂಗಳ ಮುಂಚೆಯೇ ಚಂಡಮಾರುತದ ಎಫೆಕ್ಟ್​ನಿಂದ ಮೀನುಗಾರಿಕೆ ಬಂದ್ ಮಾಡಿರುವುದು ಮೀನುಗಾರರಿಗೆ ನುಂಗಲಾರದ ತುತ್ತಾದಂತಾಗಿದೆ.

ಅಸಾನಿ ಚಂಡಮಾರುತದ ಬಗ್ಗೆ ಯಾವುದೇ ಅಲರ್ಟ್ ಕೊಟ್ಟಿರಲಿಲ್ಲ. ಆದರೂ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡಲಾಗದೇ ಬಂದರಿಗೆ ಬಂದಿರುವ ಎಲ್ಲಾ ರಾಜ್ಯದ ಬೋಟ್​​ಗಳಿಗೂ ಆಶ್ರಯ ಕೊಡುವ ಕಾರ್ಯ ಮಾಡಲಾಗುತ್ತಿದೆ ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ಕವಿತಾ ತಿಳಿಸಿದ್ದಾರೆ.

ಕೇವಲ ಕಾರವಾರ ಮಾತ್ರವಲ್ಲದೇ ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಹಲವು ಬಂದರುಗಳಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳುವುದನ್ನು ಚಂಡಮಾರುತದಿಂದಾಗಿ ನಿಲ್ಲಿಸಿದ್ದಾರೆ. ಮೀನುಗಾರಿಕೆ ಬಂದ್ ಮಾಡಿರುವ ಕಾರಣ ಕರಾವಳಿ ಭಾಗದ ಜನರ ಪ್ರಮುಖ ಆಹಾರ ಮೀನಿನ ಬೆಲೆಯಲ್ಲೂ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.