ಶಿರಸಿ (ಉತ್ತರ ಕನ್ನಡ): ಬಿಜೆಪಿಯ ಹಿರಿಯ ನಾಯಕ, ಲಿಂಗಾಯತ ಮುಖಂಡ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮ್ಮ ಶಾಸಕ ಸ್ಥಾನಕ್ಕೆ ಭಾನುವಾರ (ಇಂದು) ರಾಜೀನಾಮೆ ಸಲ್ಲಿಸಿದರು. 6 ಬಾರಿಯ ಶಾಸಕರಾಗಿದ್ದ ಶೆಟ್ಟರ್ ಶಿರಸಿಗೆ ಆಗಮಿಸಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿ ತಮ್ಮ ರಾಜೀನಾಮೆ ಪತ್ರ ನೀಡಿದರು. ನಂತರ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು.
ನಾನು ರಾಜೀನಾಮೆ ನೀಡುವ ಕುರಿತು ನನ್ನನ್ನು ಬಿಜೆಪಿ ಹೈಕಮಾಂಡ್ ಸಂಪರ್ಕಿಸಿ, ಮಾತನಾಡಿದ್ದಾರೆ. ಆದರೆ ಟಿಕೆಟ್ ನೀಡದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಜೊತೆಗೆ ಪಕ್ಷದ ಪ್ರಾಥಮಿಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದರು. ಶಾಸಕನಾಗಿ ಕೆಲಸ ಮಾಡುವುದು ಬೇಡ ಎನ್ನಲು ನನ್ನಲ್ಲಿರುವ ಸಣ್ಣ ಮಿಸ್ಟೇಕ್ ತೋರಿಸಲಿ. ಕಪ್ಪು ಚುಕ್ಕೆ, ಅನಾರೋಗ್ಯ, ಯಾವುದೋ ಸಿಡಿ, ರೌಡಿ ಶೀಟರ್ ಯಾವುದೂ ಇಲ್ಲ ಎಂದು ಶೆಟ್ಟರ್ ಹೇಳಿದ್ರು.
ಇದನ್ನೂ ಓದಿ: ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಫೈಟ್: ಟೆಂಗಿನಕಾಯಿ ಸೇರಿ ಆಕಾಂಕ್ಷಿಗಳ ಹಾದಿ ಸುಗಮ?
30 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಪಕ್ಷವೂ ನನಗೆ ಸಹಾಯ ಮಾಡಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಪಕ್ಷ ಕಟ್ಟಲು ಸಹಕರಿಸಿದ್ದೇನೆ. ಅಭ್ಯರ್ಥಿಗಳು ಸಿಗದೇ ಹೋದಾಗ ಪ್ರಚಾರ ಮಾಡಿ, ಹಳ್ಳಿ ಹಳ್ಳಿಗಳಲ್ಲಿ ಪಕ್ಷ ಬಲಿಷ್ಠವಾಗಿಸಿದೆ. ಆದರೆ ಈಗ ಮೂಲವಾಗಿ ಬಿಜೆಪಿಯಲ್ಲಿ ಇದ್ದವರನ್ನು ಹೊರಹಾಕಲಾಗುತ್ತಿದೆ. ನಮ್ಮ ಮನೆಯಿಂದ ನಮ್ಮನ್ನು ಹೊರಹಾಕಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿ ತೊರೆದ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ನಡೆದು ಬಂದ ಹಾದಿಯ ಹಿನ್ನೋಟ..
ಈ ಹಿಂದೆ ಯಡಿಯೂರಪ್ಪನವರನ್ನು ಯಾಕಾಗಿ ಪಕ್ಷ ಬಿಟ್ಟು ಹೋಗಿದ್ದರು ? ಕೆಜೆಪಿ ಕಟ್ಟಿದ್ದರು ? ಕಾರಣ ಈಗ ನನ್ನ ವಿರುದ್ಧ ಹೈಕಮಾಂಡ್ ಮಾತಿನಿಂದ ಹೇಳಿಕೆ ನೀಡಿದ ಬಹುದು ಎಂದ ಶೆಟ್ಟರ್. ಯಾರ ವಿರುದ್ಧವೂ ವೈಯಕ್ತಿಕವಾಗಿ ಹೇಳುವುದಿಲ್ಲ. ಆದರೆ ಕೆಲವರ ಸ್ವಾರ್ಥಕ್ಕಾಗಿ ಹೀಗೆ ಆಗುತ್ತಿದೆ. ನಾನು ಯಾರನ್ನೂ ಸಂಪರ್ಕ ಮಾಡಿಲ್ಲ. ಹುಬ್ಬಳ್ಳಿಗೆ ಹೋಗಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದರು. ಕಾಂಗ್ರೆಸ್ಗೆ ಹೋದಾಗ ಅಲ್ಲಿನ ವಿಚಾರ ತೀರ್ಮಾನ ಮಾಡುತ್ತೇನೆ ಎಂದರು.
ಇದಕ್ಕೂ ಮೊದಲು ರಾಜೀನಾಮೆಗೆ ನೀಡಲು ಆಗಮಿಸಿದ ಶೆಟ್ಟರ್ ಅವರೊಂದಿಗೆ ಸ್ಪೀಕರ್ ಕಾಗೇರಿ ಒಂದು ಗಂಟೆಗೂ ಅಧಿಕ ಕಾಲ ಸೀಕ್ರೆಟ್ ಸಭೆ ನಡೆಸಿದರು. ಈ ವೇಳೆ ಮನವೋಲೈಕೆಯ ಕೊನೆಯ ಪ್ರಯತ್ನ ನಡೆದಿದೆ ಎನ್ನಲಾಗಿದ್ದು, ಶೆಟ್ಟರ್ಗೆ ಸಮಕಾಲೀನವರಾದ ಕಾಗೇರಿ ಅವರು ಸಾಕಷ್ಟು ಪ್ರಯತ್ನ ಪಟ್ಟರು. ಆದರೂ ಸಹ ಪಟ್ಟು ಬದಲಿಸದ ಶೆಟ್ಟರ್ ಅಂತಿಮವಾಗಿ ಸ್ಪೀಕರ್ಗೆ ತಮ್ಮ ರಾಜೀನಾಮೆ ಸಲ್ಲಿಸಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಜಗದೀಶ್ ಶೆಟ್ಟರ್ ಬಂದ್ರೆ ಟಿಕೆಟ್ ಫಿಕ್ಸ್: ಶಾಮನೂರು ಶಿವಶಂಕರಪ್ಪ
ಇದನ್ನೂ ಓದಿ: ಬಿಜೆಪಿಗೆ ರಾಜೀನಾಮೆ ಶಾಕ್: ಯಡಿಯೂರಪ್ಪ ತುರ್ತು ಮಾಧ್ಯಮಗೋಷ್ಟಿ - LIVE