ETV Bharat / state

3 ದಿನಗಳಾದ್ರೂ ಸ್ನಾನ ಇಲ್ಲ, ಸುರಿವ ಮಳೆಯಲ್ಲೇ ನೆಲದ ಮೇಲೆ ನಿದ್ರೆ... ಕಾಳಿ ನದಿ ಸಂತ್ರಸ್ತರ ಬವಣೆ - ಗಂಜಿ ಕೇಂದ್ರ

ಕಾಳಿ ನದಿ ಪ್ರವಾಹದಿಂದ ತೊಂದರೆಗೊಳಗಾದ ಸಂತ್ರಸ್ತರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ನೀರು, ಬಟ್ಟೆ, ಯಾವುದೇ ಸೌಕರ್ಯಗಳು ಇಲ್ಲದೇ ನಾವು ಪರದಾಡುವಂತಹ ಪರಿಸ್ಥಿತಿ ನಿಮಾರ್ಣವಾಗಿದೆ ಎಂದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್.ವಿ ದೇಶಪಾಂಡೆ ಭೇಟಿ
author img

By

Published : Aug 8, 2019, 3:45 AM IST

ಕಾರವಾರ: ಕಾಳಿ ನದಿ ಪ್ರವಾಹದಿಂದ ತೊಂದರೆಗೊಳಗಾದ ಸಂತ್ರಸ್ತರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ನೀರು, ಬಟ್ಟೆ, ಯಾವುದೇ ಸೌಕರ್ಯಗಳು ಇಲ್ಲದೇ ನಾವು ಪರದಾಡುವಂತಹ ಪರಿಸ್ಥಿತಿ ನಿಮಾರ್ಣವಾಗಿದೆ ಎಂದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಾದ್ಯಂತ ಒಟ್ಟು 49 ಗಂಜಿ ಕೇಂದ್ರಗಳನ್ನು ತೆರೆದಿದ್ದು, 5407 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಆದರೆ ಕಾರವಾರದ ಮಲ್ಲಾಪುರ, ಕದ್ರಾ, ಸಿದ್ದರ ವ್ಯಾಪ್ತಿಯಲ್ಲಿ ಸಂತ್ರಸ್ಥರಿಗೆ ಮೂರು ‌ದಿನದಿಂದ‌ ಸರಿಯಾಗಿ ಕುಡಿಯಲು ನೀರು, ಊಟ, ವಸತಿ, ಬಟ್ಟೆ ಸಿಗುತ್ತಿಲ್ಲ. ಸ್ನಾನ ಮಾಡಿ ಮೂರು ದಿನಗಳು ಕಳೆದಿದ್ದು, ಎಲ್ಲರೂ ಈ ಮಳೆಯಲ್ಲಿ ನೆಲದ ಮೇಲೆ‌ ಮಲಗುತ್ತಿದ್ದೇವೆ. ಕೆಪಿಸಿಎಲ್​ನಲ್ಲಿ ಮಳೆಯಾಗುತ್ತಿದೆ ಎಂಬ ಮುನ್ಸೂಚನೆ ಇದ್ದರೂ ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಇದೀಗ ಕಾಟಾಚಾರಕ್ಕೆ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಮಹಿಳೆಯೋರ್ವರು ಆಕ್ರೋಶ ವ್ಯಕ್ತಪಡಿಸಿದರು.

ಆರ್.ವಿ ದೇಶಪಾಂಡೆ ಭೇಟಿ:

ಇನ್ನು ಗಂಜಿ ಕೇಂದ್ರಕ್ಕೆ ಪ್ರಭಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಭೇಟಿ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಇಲ್ಲಿನ ಅಧಿಕಾರಿಗಳು ಮಕ್ಕಳಿಗೆ ಬಿಸ್ಕತ್​ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ನಿರಾಶ್ರಿತರು ಅಧಿಕಾರಿಗಳನ್ನು ತರಾಟೆ ತೆಗಡದುಕೊಂಡರು. ಈ ವೇಳೆ ನಿರಾಶ್ರಿತರಿಗೂ, ಅಧಿಕಾರಿಗಳಿಗೂ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಮಧ್ಯ ಪ್ರವೇಶಿಸಿದ ಪ್ರಭಾರ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ ದೇಶಪಾಂಡೆ ಅಧಿಕಾರಿಗಳ ನಿರ್ಲಕ್ಷಕ್ಕೆ ಗರಂ ಆಗಿ, ತಮ್ಮ ಸ್ವಂತ ಖರ್ಚಿನಿಂದ ಗಂಜಿ ಕೇಂದ್ರಕ್ಕೆ ಮಹಿಳೆಯರಿಗೆ ಸೀರೆ, ಚಾಪೆ, ಪಂಚೆ ತರಿಸಿ ಕೊಡುವ ಭರವಸೆ ನೀಡಿದರು.

Intro:Body:ನೆರೆಸಂತ್ರಸ್ತರಿಗೆ ಸಿಗದ ಮೂಲಭೂತ ಸೌಕರ್ಯ... ಅಧಿಕಾರಿಗಳ ನಿರ್ಲಕ್ಷ್ಯ ಆಕ್ರೋಶ

ಕಾರವಾರ: ಹರಿಯೋ ನೀರನ್ನು ತಡಿಯೋಕೆ ಆಗಲ್ಲ ಅದು ನಮಗೂ ಗೊತ್ತು... ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಕೆಪಿಸಿಎಲ್ ಅವರು ನೀರು ಬಿಟ್ಟಿದ್ದು ಇಷ್ಟೊಂದು ನೇರೆ ಹಾವಳಿಗೆ ಕಾರಣವಾಗಿದೆ. ನಮ್ಮನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನೀರು, ಬಟ್ಟೆ, ಯಾವುದೇ ಇಲ್ಲದೇ ಭಿಕ್ಷುಕರಿಗಿಂತಲೂ ಕಡೆಯಾಗಿದ್ದೇವೆ..!
ಹೌದು, ಇದು ಕಾಳಿ ನದಿ ಪ್ರವಾಹದಿಂದ ತೊಂದರೆಗೊಳಗಾದ ಸಂತ್ರಸ್ತರ ನೋವಿನ ಮಾತುಗಳು. ಕಳೆದ ಮೂರು ದಿನಗಳಿಂದ ಗಂಜಿ ಕೇಂದ್ರಗಳಿಗೆ ಸ್ಥಳಾಂತರಗೊಂಡವರಿಗೆ ಸರಿಯಾಗಿ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ.
ಜಿಲ್ಲೆಯಾದ್ಯಂತ ಒಟ್ಟು ೪೯ ಗಂಜಿಕೇಂದ್ರಗಳನ್ನು ತೆರೆದಿದ್ದು, ೩೪೦೭ ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ. ಆದರೆ ಕಾರವಾರದ ಮಲ್ಲಾಪುರ, ಕದ್ರಾ, ಸಿದ್ದರ ವ್ಯಾಪ್ತಿಯಲ್ಲಿ ಸಂತ್ರಸ್ಥರಿಗೆ ಮೂರು ‌ದಿನದಿಂದ‌ ಸರಿಯಾಗಿ ಕುಡಿಯಲು ನೀರು, ಊಟ, ವಸತಿ, ಬಟ್ಟೆ ಸಿಗುತ್ತಿಲ್ಲ. ಸ್ನಾನ ಮಾಡಿ ಮೂರು ದಿನವಾಗಿದೆ. ಎಲ್ಲರು ಈ ಮಳೆಯಲ್ಲಿ ನೆಲದ ಮೇಲೆ‌ ಮಲಗುತ್ತಿದ್ದೇವೆ ಎಂದು ಆಕ್ರೋಶ‌‌ ವ್ಯಕ್ತಪಡಿಸಿದ್ದಾರೆ.
ಗಂಜಿ ಕೆಂದ್ರ ಹೆಸರಿಗೆ ಮಾತ್ರ ತೆರೆಯಲಾಗಿದೆ. ಕೆಪಿಸಿಎಲ್ ಮಳೆಯಾಗುತ್ತಿದೆ ಎಂಬ ಮುನ್ಸೂಚನೆ ಇದ್ದರೂ ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಇದೀಗ ಕಾಟಾಚಾರಕ್ಕೆಂಬಂತೆ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಮಹಿಳೆಯೋರ್ವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಗಂಜಿ ಕೇಂದ್ರಕ್ಕೆ ಪ್ರಭಾರ ಜಿಲ್ಲಾ ಉಸ್ತುವಾರಿ ಸಚಿವ ಆರ್ .ವಿ ದೇಶಪಾಂಡೆ ಭೇಟಿ ನೀಡುತಿದ್ದಾರೆ ಎಂಬ ಕಾರಣಕ್ಕೆ ಇಲ್ಲಿನ ಅಧಿಕಾರಿಗಳು ಮಕ್ಕಳಿಗೆ ಬಿಸ್ಕೇಟ್ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ನಿರಾಶ್ರಿತರು ಅಧಿಕಾರಿಗಳನ್ನು ತರಾಟೆ ತೆಗಡದುಕೊಂಡರು. ಈ ವೇಳೆ ನಿರಾಶ್ರಿತರಿಗೂ ಅಧಿಕಾರಿಗಳಿಗೂ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಬಳಿಕ ಮಧ್ಯ ಪ್ರವೇಶಿಸಿದ ಪ್ರಭಾರ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ ದೇಶಪಾಂಡೆ
ಅಧಿಕಾರಿಗಳ ನಿರ್ಲಕ್ಷಕ್ಕೆ ಗರಂ ಆಗಿ ತಮ್ಮ ಸ್ವಂತ ಕರ್ಚಿನಿಂದ ಗಂಜಿ ಕೇಂದ್ರಕ್ಕೆ ಮಹಿಳೆಯರಿಗೆ ಸೀರೆ, ಚಾಪೆ, ಪಂಚೆ ತರಿಸಿ ಕೊಡುವ ಭರವಸೆ ನೀಡಿದರು. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.