ETV Bharat / state

ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಧಾನಿ ಮೋದಿ, ಸೇನೆಯ ಕೊಡುಗೆ ಅಪಾರ: ರಾಜನಾಥ್‌ ಸಿಂಗ್‌ - ಸೇನೆ ಬಗ್ಗೆ ರಾಜನಾಥ್ ಸಿಂಗ್ ಹೇಳಿಕೆ

ಈಗ ಭಾರತ ಜಗತ್ತಿನಲ್ಲಿಯೇ ಶಕ್ತಿಶಾಲಿ ರಾಷ್ಟ್ರ. ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಧಾನಿ ನರೇಂದ್ರ ಮೋದಿ ಹಾಗು ನಮ್ಮ ಸೇನೆಯ ಕೊಡುಗೆ ಅಪಾರ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು.

Rajnath Singh in karawara
ಕಾರವಾರ ಕದಂಬ ನೌಕಾನೆಲೆಗೆ ರಾಜನಾಥ್ ಸಿಂಗ್ ಭೇಟಿ
author img

By

Published : May 27, 2022, 7:40 AM IST

ಕಾರವಾರ(ಉತ್ತರಕನ್ನಡ): ಭಾರತ ಜಗತ್ತಿನಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗಿದ್ದು ಅಮೆರಿಕ ನೌಕಾಪಡೆ ಕೂಡ ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಗೆ ಎರಡು ದಿನಗಳ ಭೇಟಿಗಾಗಿ ಗುರುವಾರ ಆಗಮಿಸಿದ ಸಚಿವರು, ನೌಕಾನೆಲೆ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದ ಜೊತೆ ಮಾತನಾಡಿದರು.

ದೇಶಕ್ಕಾಗಿ ತ್ಯಾಗ ಮಾಡುವ ಸೈನಿಕರನ್ನು ಸದಾ ಗೌರವಿಸಬೇಕು. ಹಿಂದೊಮ್ಮೆ ನನಗೆ ಜಲಾಂತರ್ಗಾಮಿಯಲ್ಲಿ ಹೋಗುವ ಅವಕಾಶ ಒದಗಿಬಂದಿತ್ತು. ಅಲ್ಲಿ ಜೀವನ ನಡೆಸುವುದು ಅತ್ಯಂತ ಕಠಿಣವಾಗಿತ್ತು. ನೀರನ್ನು ಮಿತವಾಗಿ ಅಳೆದು ಬಳಸಬೇಕು. ಇಂತಹ ಸ್ಥಿತಿಯಲ್ಲಿ ಸೈನಿಕರು ತಿಂಗಳುಗಟ್ಟಲೆ ಕುಟುಂಬದಿಂದ ದೂರವಿರುತ್ತಾರೆ. ಸುತ್ತಮುತ್ತ ಎಲ್ಲಿ ನೋಡಿದರಲ್ಲಿ ನೀರು. ಮಾತನಾಡಲು ಬೇರಾರೂ ಇಲ್ಲ. ಸಮುದ್ರದ ಅಲೆಗಳ ಶಬ್ದವನ್ನಷ್ಟೇ ಕೇಳಿಸಿಕೊಂಡು ಅವರು ದೇಶ ರಕ್ಷಣೆಯಲ್ಲಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ನಮ್ಮ ಸೈನ್ಯದ ಕೊಡುಗೆ ಅಪಾರ. ಪ್ರಧಾನಿ ಮೋದಿ ಅವರು ಬಂದ ನಂತರ ಭಾರತವನ್ನು ಇತರೆ ದೇಶಗಳು ನೋಡುವ ರೀತಿ ಬದಲಾಗಿದೆ. ಈ ಹಿಂದೆ ಭಾರತದ ವಿಚಾರಗಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿರಲ್ಲಿಲ್ಲ. ಈಗ ಗಂಭೀರವಾಗಿ ಕೇಳುತ್ತಾರೆ. ಪ್ರಧಾನಿ ಮೋದಿ ನಾಯಕತ್ವದಿಂದ ಇದು ಸಾಧ್ಯವಾಗಿದೆ ಎಂದು ಸಿಂಗ್ ತಿಳಿಸಿದರು.

ಇದನ್ನೂ ಓದಿ: ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಿಗೇ ಪ್ರೂವ್​ ಆಗಿದೆ : ಶಿವರಾಜ್​ ಕುಮಾರ್

ಭಾರತದ ಸುರಕ್ಷತೆಯಲ್ಲಿ ಸೈನಿಕರ ಪಾತ್ರ ಮಹತ್ವದ್ದಾಗಿದೆ. ನಿಮ್ಮಿಂದ ಭಾರತದ ಹೆಸರು ಸುವರ್ಣಾಕ್ಷರದಲ್ಲಿ ಬರೆದಿಡುವ ಸಂದರ್ಭ ಬರಲಿದೆ. ದೇಶ ಸೇವೆ ಮಾಡುವ ಸೈನಿಕರ ತಾಯಿ, ಪತ್ನಿಯರ ತ್ಯಾಗವೂ ಹಿರಿದು. ಸೈನಿಕರ ಬಗ್ಗೆ ದೇಶದ ಜನರಲ್ಲಿ ಅಪಾರ ಗೌರವವಿದೆ. ಯುವಜನತೆಗೆ ಸೈನಿಕರು ಸ್ಫೂರ್ತಿಯಾಗಿದ್ದಾರೆ ಎಂದು ಸಚಿವರು ಹೇಳಿದರು.

  • Karnataka | The yoga session is underway at Karwar Naval Base with Defence Minister Rajnath Singh joining Indian Navy personnel for the same. pic.twitter.com/IL6oScUWAi

    — ANI (@ANI) May 27, 2022 " class="align-text-top noRightClick twitterSection" data=" ">

ಬೆಳಗ್ಗೆ ರಾಜನಾಥ್‌ ಸಿಂಗ್‌ ಯೋಗ: ನೌಕಾನೆಲೆಗೆ ಎರಡು ದಿನಗಳ ಪ್ರವಾಸದಲ್ಲಿರುವ ಸಚಿವರು ನೌಕಾಪಡೆಯ ಸಿಬ್ಬಂದಿಯೊಂದಿಗೆ ಇಂದು ಮುಂಜಾನೆ(ಶುಕ್ರವಾರ) ಯೋಗ ಸೆಷನ್​ನಲ್ಲಿ ಭಾಗವಹಿಸಿದರು. ತಾವೂ ಯೋಗ ಮಾಡಿ ಎಲ್ಲರಿಗೂ ಸ್ಫೂರ್ತಿ ತುಂಬಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.