ETV Bharat / state

ಸ್ವಾತಂತ್ರ್ಯೋತ್ಸವ ಸ್ಮರಣೀಯವಾಗಿಸಿದ ಅಶ್ವಥ ವೃಕ್ಷ.. ಸ್ವಾತಂತ್ರ್ಯ ಸಿಕ್ಕ ಮಧ್ಯ ರಾತ್ರಿ ನೆಟ್ಟ ಗಿಡ ಇದೀಗ ವಿಶ್ರಾಂತಿ ತಾಣ - ಕಾರವಾರದ ಸ್ವಾತಂತ್ರ್ಯ ಹೋರಾಟಗಾರರು

ಮಧ್ಯ ರಾತ್ರಿ ಸ್ವಾತಂತ್ರ್ಯ ಸಿಕ್ಕ ಸುದ್ದಿ ಸಿಕ್ಕ ಕೂಡಲೇ ಪಟಾಕಿ ಸಿಡಿಸಿ ಸಂಭ್ರಮಿಸಿ, ಆ ದಿನದ ನೆನಪಿಗಾಗಿ ಕಾರವಾರದ ಸ್ವಾತಂತ್ರ್ಯ ಹೋರಾಟಗಾರರು ನೆಟ್ಟ ಗಿಡ ಇಂದು ದೊಡ್ಡ ಮರವಾಗಿ ಬೆಳೆದು ವಿಶ್ರಾಂತಿ ಕಟ್ಟೆಯಾಗಿದೆ.

ಸ್ವಾತಂತ್ರ್ಯ ಸಿಕ್ಕ ಮಧ್ಯ ರಾತ್ರಿ ನೆಟ್ಟ ಗಿಡ ಇದೀಗ ವಿಶ್ರಾಂತಿ ತಾಣ
independence-day-tree-in-karwar
author img

By

Published : Aug 14, 2022, 6:14 PM IST

ಕಾರವಾರ(ಉತ್ತರ ಕನ್ನಡ) : ಎಲ್ಲೆಡೆ 75 ನೇ ಸ್ವಾಂತ್ರ್ಯತ್ಸೋವದ ಸಂಭ್ರಮ ಮುಗಿಲುಮುಟ್ಟಿದೆ. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಅವರ ಹೋರಾಟಗಳನ್ನು ಸ್ಮರಣೆ ಮಾಡಲಾಗುತ್ತಿದೆ. ಅದರಂತೆ ಕಾರವಾರದ ಸುಂಕೇರಿಯ ಸ್ವಾತಂತ್ರ್ಯ ಹೋರಾಟಗಾರ ಹನುಮಂತರಾವ್​ ಮಾಂಜ್ರೇಕರ್​ ಸೇರಿದಂತೆ ಹಲವರು ಸೇರಿ ಸ್ವಾತಂತ್ರ್ಯ ಸಿಕ್ಕ ಸವಿನೆನಪಿಗಾಗಿ ಆಗಸ್ಟ್ 14ರ ಮಧ್ಯ ರಾತ್ರಿ ನೆಟ್ಟ ಅಶ್ವಥ ವೃಕ್ಷವೊಂದು ಇದೀಗ ಬೃಹದಾಕಾರವಾಗಿ ಬೆಳೆದು ಸುತ್ತಮುತ್ತಲಿನ‌ ಜನರಿಗೆ ವಿಶ್ರಾಂತಿ ತಾಣವಾಗಿದೆ.

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ದೇಶಾಭಿಮಾನ ಮೆರೆದಿದ್ದ ಉತ್ತರ ಕನ್ನಡದ ಜನ ಜಿಲ್ಲೆಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಕರಬಂಧಿ ಚಳವಳಿ, ಚಲೇ ಜಾವ್ ಚಳವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದರಂತೆ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರ ಪೈಕಿ ಕಾರವಾರದ ಸುಂಕೇರಿಯ ದಿ. ಹನುಮಂತರಾವ್​ ಮಾಂಜ್ರೇಕರ್​ ಕೂಡ ಒಬ್ಬರು.

independence day tree in Karwar
ಸ್ವಾತಂತ್ರ್ಯೋತ್ಸವವನ್ನು ಸ್ಮರಣೀಯವಾಗಿಸಿದ ಅಶ್ವಥ ವೃಕ್ಷ

ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸವನ್ನು ಅನುಭವಿಸಿದ್ದ ಅವರು, ಸ್ವಾತಂತ್ರ್ಯ ಸಿಕ್ಕ ಹಿನ್ನೆಲೆಯಲ್ಲಿ ಆಗಸ್ಟ್ 14ರ ರಾತ್ರಿಯೇ ಕಾರವಾರದಲ್ಲಿ ಬೃಹತ್ ಗಾತ್ರದ ಪಟಾಕಿ ಸಿಡಿಸಲಾಗಿತ್ತು. ಈ ಮೂಲಕವೇ ಸ್ವಾತಂತ್ರ್ಯಗೊಂಡಿರುವುದನ್ನು ತಿಳಿದುಕೊಂಡು ದಿ.ಹನುಮಂತರಾವ್ ಮಾಂಜ್ರೇಕರ್, ಗೋವಿಂದರಾವ್ ಮಾಂಜ್ರೇಕರ್ ಸೇರಿದಂತೆ ನಾವೆಲ್ಲರೂ ಸೇರಿ ನಮ್ಮದೇ ಜಾಗದಲ್ಲಿ ಸ್ವಾತಂತ್ರ್ಯೊತ್ಸವದ ಸವಿ ನೆನಪಿಗಾಗಿ ಅಶ್ವಥ ವೃಕ್ಷ ನೆಟ್ಟಿದ್ದೆವು. ಅದು ಈಗ ದೊಡ್ಡದಾಗಿದೆ ಎನ್ನುತ್ತಾರೆ ದಿ. ಹನುಮಂತರಾಯ್​ ಹಿರಿಯ ಮಗ ನಿವೃತ್ತ ಶಿಕ್ಷಕ ಕಮಲಾಕ್ಷ ಮಾಂಜ್ರೇಕರ್.

ಸ್ವಾತಂತ್ರ್ಯ ಸಿಕ್ಕ ಮಧ್ಯ ರಾತ್ರಿ ನೆಟ್ಟ ಗಿಡ ಇದೀಗ ವಿಶ್ರಾಂತಿ ತಾಣ

ಈ ವೃಕ್ಷ ಇದೀಗ ಬೃಹದಾಕಾರವಾಗಿ ಬೆಳೆದಿದ್ದು, ಸುತ್ತಮುತ್ತಲಿನ ಜನರಿಗೆ ನೆರಳಾಗಿದೆ. ಮಾತ್ರವಲ್ಲದೆ ಜನರು ವಿಶ್ರಾಂತಿ ಪಡೆಯುತ್ತಿದ್ದ ಕಾರಣ ಕಳೆದ ಕೆಲ‌ ವರ್ಷದ ಹಿಂದೆ ವಿಶ್ರಾಂತಿಗಾಗಿ ಕಟ್ಟಡ ಕೂಡ ನಿರ್ಮಿಸಲಾಗಿದೆ. ಅದೆಲ್ಲದಕ್ಕೂ ಹೆಚ್ಚಾಗಿ ಸ್ವಾತಂತ್ರ್ಯ ಬಂದ ಸವಿನೆನಪಿಗಾಗಿ ನೆಟ್ಟ ವೃಕ್ಷ ಇದೀಗ ದೊಡ್ಡ ಮರವಾಗಿ ನೆರಳಾಗಿರುವುದು ಖುಷಿ ತಂದಿದೆ ಎನ್ನುತ್ತಾರೆ ದಿ. ಹನುಮಂತರಾವ್ ಇನ್ನೋರ್ವ ಮಗ ಶ್ರೀರಂಗ ಮಾಂಜ್ರೇಕರ್.

ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ದಿ. ಹನುಮಂತರಾವ್ ಮಾಂಜ್ರೇಕರ್ ಅವರು ಗಾಂಧೀಜಿ ಅನುಯಾಯಿಯಾಗಿದ್ದರು. ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಖಾದಿ ಪ್ರಸಾರದಲ್ಲಿ ಪಾಲ್ಗೊಂಡಿದ್ದ ಅವರು 1930 ರ ವೇಳೆ 15 ತಿಂಗಳ ಜೈಲು ಶಿಕ್ಷೆಗೂ ಗುರಿಯಾದರೂ ಅಪ್ರತಿಮ ದೇಶಭಕ್ತಿ ಮೈಗೂಡಿಸಿಕೊಂಡಿದ್ದರು ಸ್ವಾತಂತ್ರ್ಯಾ ನಂತರ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿರುವ ಅವರು ಸಂಯುಕ್ತ ಕರ್ನಾಟಕದಲ್ಲಿಯೂ ಕೆಲ ಕಾಲ ಬಿಡಿ ಸುದ್ದಿ ವರದಿಗಾರರು ಆಗಿದ್ದರು. ಹೋರಾಟವನ್ನು ನಡೆಸಿದ್ದ ಅವರು 1925ರಲ್ಲಿ ರಹಿಂ ಖಾನ್ ಯುನಿಟಿ ಹೈಸ್ಕೂಲ್ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಾನ ನಿಷೇಧ ಪ್ರಚಾರಾಧಿಕಾರಿ ಹಾಗೂ ಕಾರವಾರದ ಜಿಲ್ಲಾ ವಾರ್ತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ : 75 ವರ್ಷಗಳಲ್ಲಿ ಜಾಗತಿಕ ಶಕ್ತಿಯಾಗಿ ಬದಲಾದ ಭವ್ಯ ಭಾರತದ ಸಾಧನೆಯ ಹೆಜ್ಜೆಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.