ETV Bharat / state

ಬೆಳಕಿನ ಹಬ್ಬ ದೀಪಾವಳಿಯಂದು ಹೊಂಡೆಕಾಯಿ ಹೊಡೆದಾಟ: ಅಂಕೋಲಾದಲ್ಲೊಂದು ವಿಭಿನ್ನ ಆಚರಣೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಕೋಮಾರಪಂಥ ಸಮಾಜದವರು ಪಾರಂಪರಿಕವಾಗಿ ಆಚರಿಸಿಕೊಂಡು ಬಂದಿರುವ ಹೊಂಡೆಕಾಯಿ (ಕಹಿ ಹಿಂಡ್ಲೆಕಾಯಿ) ಹೊಡೆದಾಟ ಆಟವಾಡಿ, ತಮ್ಮ ಸಂಪ್ರದಾಯವನ್ನ ಮುಂದುವರಿಸಿದರು.

hondekayi hodedata
ಅಂಕೋಲಾ ಪಟ್ಟಣದಲ್ಲಿ ಹೊಂಡೆಕಾಯಿ ಹೊಡೆದಾಟ
author img

By

Published : Oct 28, 2022, 7:28 AM IST

ಕಾರವಾರ: ದೀಪಾವಳಿ ಹಬ್ಬದ ಪ್ರಯಕ್ತ ನಾನಾ ಕಡೆ ಸಾಂಪ್ರದಾಯಿಕ ಕ್ರೀಡೆ ಹಾಗೂ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಕೋಮಾರಪಂಥ ಸಮಾಜದವರು ತಮ್ಮದೇ ಸಮಾಜದವರೊಂದಿಗೆ ಪರಸ್ಪರ ಹೊಡೆದಾಡಿಕೊಳ್ಳುವ ಹೊಂಡೆಯಾಟವೊಂದನ್ನು ಆಡಿದ್ದು, ಹಲವು ವರ್ಷಗಳಿಂದ ನಡೆದುಕೊಂಡು ಬಂದಂತ ಸಂಪ್ರದಾಯ ಮುಂದುವರಿಸಿದ್ದಾರೆ.

ಹೌದು, ಒಂದೆಡೆ ಚಾವಟಿಯಲ್ಲಿ ಹೊಂಡೆಕಾಯಿ ಹಾಕಿಕೊಂಡು ಎದುರಾಳಿಯ ಜೊತೆ ಕಾದಾಟ ನಡೆಸುತ್ತಿರುವ ಯುವಕರ ತಂಡ. ಎದುರಾಳಿಗೆ ಪ್ರತಿಯಾಗಿ ರೋಷಾವೇಶವಾಗಿ ಚಾವಟಿಯಲ್ಲಿ ಕಾದಾಡುತ್ತಿರುವ ಮತ್ತೊಂದು ತಂಡ. ಇನ್ನೊಂದೆಡೆ, ಇವರಿಬ್ಬರ ಹೊಡೆದಾಟವನ್ನ ನೋಡುತ್ತಾ ರಸ್ತೆ ಪಕ್ಕದಲ್ಲಿ ನಿಂತು ಸಂಭ್ರಮಿಸುತ್ತಿರುವ ಜನರು. ಇದೆಲ್ಲ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣ.

ಅಂಕೋಲಾ ಪಟ್ಟಣದಲ್ಲಿ ಹೊಂಡೆಕಾಯಿ ಹೊಡೆದಾಟ

ಅಂಕೋಲಾ ಪಟ್ಟಣದಲ್ಲಿ ಕಳೆದ ಹಲವಾರು ವರ್ಷದಿಂದ ಕೋಮಾರಪಂಥ ಸಮಾಜದವರು ದೀಪಾವಳಿಯ ಬಲಿಪಾಡ್ಯಮಿ ದಿನ ಹೊಂಡೆ ಆಟವನ್ನ ಆಡಿಕೊಂಡು ಬರುತ್ತಿದ್ದಾರೆ. ಕೋಮಾರಪಂಥ ಸಮಾಜದವರು ಮೂಲತಃ ಕ್ಷತ್ರಿಯ ಸಮಾಜಕ್ಕೆ ಸೇರಿದವರು. ಸೈನಿಕರಾಗಿದ್ದ ಸಮಾಜದವರು ಅಂದು ಯುದ್ದ ಭೂಮಿಯಲ್ಲಿ ನಾಡಿನ ರಕ್ಷಣೆಗಾಗಿ ತೋರಿದ ಸಾಹಸದ ಪ್ರತಿಯಾಗಿ ಈ ಹೊಂಡೆ ಆಟವನ್ನ ಆಡುವ ಮೂಲಕ ತಮ್ಮ ಸಂಪ್ರದಾಯವನ್ನ ಅನಾವರಣಮಾಡಿಕೊಳ್ಳುತ್ತಾ ಬಂದಿದ್ದಾರೆ.

ಚಾವಟಿಯೊಂದನ್ನ ಸಿದ್ಧಮಾಡಿಕೊಳ್ಳುವ ಸಮಾಜದ ಯುವಕರ ತಂಡ, ಎರಡು ತಂಡಗಳನ್ನಾಗಿ ಮಾಡಿ ಹೊಂಡೆಕಾಯಿಯಲ್ಲಿ ಕಾದಾಡುವುದೇ ಈ ಆಟದ ವಿಶೇಷ. ಅದರಂತೆ ಈ ಬಾರಿ ಸಹ ಹೊಂಡೆ ಆಟವನ್ನ ಸಮಾಜದವರು ಆಡುವ ಮೂಲಕ ಸಂಭ್ರಮಿಸಿದರು.

ಇದನ್ನೂ ಓದಿ: ಹೊಂಡೆಕಾಯಿ ಹೊಡೆದಾಟ: ಬೆಳಕಿನ ಹಬ್ಬದಂದು ಅಂಕೋಲಾದಲ್ಲೊಂದು ವಿಭಿನ್ನ ಆಚರಣೆ

ದೀಪಾವಳಿಯ ಬಲಿಪಾಡ್ಯಮಿ ದಿನದಂದು ಹೊಂಡೆ ಆಟವನ್ನ ಕೋಮಾರಪಂಥ ಸಮಾಜದವರು ಮಾತ್ರ ಆಡುತ್ತಾರೆ. ಅಂಕೋಲಾ ಮತ್ತು ಕುಮಟಾ ಪಟ್ಟಣದಲ್ಲಿ ಮಾತ್ರ ಈ ವಿಶಿಷ್ಟ ಸಂಪ್ರದಾಯ ನಡೆಯುತ್ತದೆ. ಅಂಕೋಲಾ ಪಟ್ಟಣದಲ್ಲಿ ನಡೆಯುವ ಹೊಂಡೆ ಆಟದಲ್ಲಿ ಎರಡು ತಂಡವನ್ನು ಮಾಡಿಕೊಂಡು ಆಟವನ್ನ ಪಟ್ಟಣದುದ್ದಕ್ಕೂ ಆಡಲಾಗುತ್ತದೆ. ಒಂದು ತಂಡ ಶಾಂತದುರ್ಗಾ ದೇವಸ್ಥಾನದಿಂದ ಆಟವನ್ನ ಆಡಿಕೊಂಡು ಬಂದರೆ ಮತ್ತೊಂದು ತಂಡ ಕಳಸ ದೇವಸ್ಥಾನದಿಂದ ಬಂದು ಇಬ್ಬರು ಒಂದೆಡೆ ಸೇರಿ ಕಾದಟಕ್ಕೆ ಇಳಿಯುತ್ತಾರೆ.

ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನದಂದು ಆಡುವ ಈ ಹೊಂಡೆ ಆಟಕ್ಕೆ ಸಮಾಜದ ಯುವಕರು ಚಾವಟಿಯನ್ನ ತಯಾರಿಸಿ ಹೊಂಡೆಕಾಯಿಯನ್ನ ತಂದು ಅದರೊಳಗೆ ಹಾಕಿ ಹೊಡೆದಾಟಕಕ್ಕೆ ಇಳಿಯುತ್ತಾರೆ. ಚಾವಟಿಯಲ್ಲಿ ಹೊಂಡೆಕಾಯಿಯಿಂದ ಹೊಡೆಯುವಾಗ ಕೇವಲ ಮೊಣಕಾಲಿನಿಂದ ಕೆಳಗೆ ಮಾತ್ರ ಹೊಡೆಯಬೇಕು.

ಯಾರು ಮೊಣಕಾಲಿನಿಂದ ಮೇಲೆ ಹೊಡೆಯುತ್ತಾರೋ ಅಂತವರನ್ನ ಆಟದಿಂದ ತೆಗೆದು ಹಾಕುತ್ತಾರೆ. ಕೆಲವೊಮ್ಮೆ ಅನಾಹುತಗಳು ಸಂಭವಿಸಿದರೂ ಈ ಆಟ ನಮ್ಮ ಸಂಪ್ರದಾಯವೆಂದು ನಂತರ ಎಲ್ಲರೂ ಒಂದಾಗಿ ಹಬ್ಬ ಆಚರಿಸುತ್ತಾರೆ.

ಇದನ್ನೂ ಓದಿ: ದೀಪಾವಳಿಯಂದು ಹೊಂಡೆಕಾಯಿ ಹೊಡೆದಾಟ: ವಿಭಿನ್ನ ಆಚರಣೆ ಎಂಜಾಯ್​ ಮಾಡಿದ ಅಂಕೋಲಾ ಮಂದಿ

ಸುಮಾರು ನಾಲ್ಕೈದು ಗಂಟೆಗಳ ಕಾಲ ಅಂಕೋಲಾ ಪಟ್ಟಣದಲ್ಲಿ ಚಾವಟಿಯಲ್ಲಿ ಹಿಡಿದು ಹೊಂಡೆಕಾಯಿಗಳ ಮೂಲಕ ಕಾದಾಟ ನಡೆಸುವ ಕೋಮಾರಪಂಥ ಸಮಾಜದವರು ಅಂತಿಮವಾಗಿ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಆ ವರ್ಷದ ಹೊಂಡೆ ಆಟಕ್ಕೆ ತೆರೆ ಎಳೆಯುತ್ತಾರೆ.

ಆಧುನಿಕತೆಯ ನಡುವೆ ಸಂಪ್ರದಾಯಗಳು ನಶಿಸುತ್ತಿದೆ ಎನ್ನುವ ಕಾಲದಲ್ಲಿ ಕೋಮಾರಪಂಥ ಸಮಾಜದವರು ಇಂದಿಗೂ ತಮ್ಮ ಸಂಪ್ರದಾಯವನ್ನ ಮೆಲಕು ಹಾಕಲು ಹೊಂಡೆ ಆಟ ಆಡುತ್ತಾ ಬಂದಿರೋದು ನಿಜಕ್ಕೂ ವಿಶೇಷವೇ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.