ETV Bharat / state

ಅಂಕೋಲಾದಲ್ಲಿ ವಿಶೇಷ ಹೋಳಿ ಆಚರಣೆ : ನೈಜ ಘಟನೆಗಳ ಅಣಕು ಪ್ರದರ್ಶನ! - Performance of real incidents

ನೈಜ ಘಟನೆಗಳ ಅಣುಕು ಪ್ರದರ್ಶನಗಳ ಮೆರವಣಿಗೆ ಮೂಲಕ ಅಂಕೋಲಾದಲ್ಲಿ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಬೆಳಂಬಾರ ಗ್ರಾಮದ ಹಾಲಕ್ಕಿ ಸಮುದಾಯದವರು ಹೋಳಿಯ ಪ್ರಯುಕ್ತ ನಗರದಲ್ಲಿ ವೇಷಭೂಷಣಗಳನ್ನು ಹಾಕಿಕೊಂಡು ಪ್ರತಿನಿತ್ಯ ಸಮಾಜದಲ್ಲಿನ ಆಗುಹೋಗುಗಳನ್ನು ಅಣಕು ಪ್ರದರ್ಶನ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ..

Holi celebration in Ankola.
ಅಂಕೋಲಾದಲ್ಲಿ ವಿಶೇಷವಾಗಿ ಹೋಳಿ ಆಚರಿಸಲಾಯಿತು.
author img

By

Published : Mar 18, 2022, 3:18 PM IST

ಕಾರವಾರ : ಹೋಳಿ ಹಬ್ಬದ ಅಂಗವಾಗಿ ಅಂಕೋಲಾ ತಾಲೂಕಿನಲ್ಲಿ ವಿಶಿಷ್ಟವಾದ ನೈಜ ಘಟನೆಗಳ ಅಣಕು ಪ್ರದರ್ಶನ ಮೆರವಣಿಗೆ ನಡೆಯಿತು.

ತಾಲೂಕಿನ ಬೆಳಂಬಾರ ಗ್ರಾಮದ ಹಾಲಕ್ಕಿ ಸಮುದಾಯದವರು ಹೋಳಿಯ ಪ್ರಯುಕ್ತ ನಗರದಲ್ಲಿ ವೇಷ-ಭೂಷಣಗಳನ್ನು ಹಾಕಿಕೊಂಡು ನಿತ್ಯ ಸಮಾಜದಲ್ಲಿನ ಆಗುಹೋಗುಗಳನ್ನು ಅಣಕು ಪ್ರದರ್ಶನ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ.

ಈ ಒಂದು ದಿನ ಮಾತ್ರ ಇಲ್ಲಿ ಯಾರ ಕುರಿತು ಅಣಕು ಮಾಡಿದರೂ ಯಾವುದೇ ನಿರ್ಬಂಧ ಇರುವುದಿಲ್ಲ. ಸಮಾಜದಲ್ಲಿನ ಅನೇಕ ಘಟನೆಗಳನ್ನು ಇಲ್ಲಿನ ಹೋಳಿ ಆಚರಣೆ ವೇಳೆ ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರೆದುರು ತೆರೆದಿಡಲಾಯಿತು.

ಅಂಕೋಲಾದಲ್ಲಿ ವಿಶೇಷವಾಗಿ ಹೋಳಿ ಆಚರಿಸಲಾಯಿತು..

ಇನ್ನು ಈ ಬಾರಿಯ ಅಣಕು ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಿ ಉಯ್ಯಾಲೆಯಲ್ಲಿ ರಾಧಾಕೃಷ್ಣ, ವಿಜಯನಗರ ಸಾಮ್ರಾಜ್ಯ ವಶಕ್ಕೆ ಪಡೆಯುವ ಸನ್ನಿವೇಶ, ಮದುವೆ, ಆಪರೇಶನ್ ಗಂಗಾ, ಛತ್ರಪತಿ ಶಿವಾಜಿ, ಕೋವಿಡ್ ವ್ಯಾಕ್ಸಿನ್ ವಿತರಣೆ, ಕೇರಳದ ದೋಣಿ ಸ್ಪರ್ಧೆ, ಡ್ರ್ಯಾಗನ್ ಪ್ರಾಣಿ, ನರಭಕ್ಷಕ ಮೀನು, ರಾಘವೇಂದ್ರ ಸ್ವಾಮಿ, ಲಂಬಾಣಿ, ವಾಟಾಳ್ ನಾಗರಾಜ ಅವರ ಕನ್ನಡ ಗಡಿ ಉಳಿಸಿ ಹೋರಾಟ, ನಾಗಾಸಾಧುಗಳ ವೇಷಭೂಷಣ ತೊಟ್ಟವರು ಪ್ರದರ್ಶನಗಳು ನೆರೆದವರ ಗಮನ ಸೆಳೆದರು.

ಇದರ ಜೊತೆಗೆ ಮರಕಾಲು ವೇಷ, ನಾಡಿನ ಸುಪ್ರಸಿದ್ಧ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ ಆಕರ್ಷಣೀಯವಾಗಿತ್ತು. ಈ ಸಂದರ್ಭದಲ್ಲಿ ಈ ಸುಗ್ಗಿ ತಂಡಕ್ಕೆ ಬ್ರಿಟಿಷರ ಕಾಲದಲ್ಲಿ ಕೊಟ್ಟಿರುವ ತಾಮ್ರ ಪತ್ರವನ್ನು ತಹಶೀಲ್ದಾರ್​ ಪ್ರವೀಣ ಊರಗೌಡರ ಸಮ್ಮುಖದಲ್ಲಿ ತೆರೆದು ಗೌರವ ಸೂಚಿಸುವ ಮೂಲಕ ಈ ವರ್ಷದ ಸುಗ್ಗಿ ಆಚರಣೆ ಸಂಪನ್ನಗೊಂಡಿತು.

ಅಣಕು ಪ್ರದರ್ಶನ ನೋಡಲು ಅಂಕೋಲಾ ಪಟ್ಟಣದಲ್ಲಿ ನೂರಾರು ಜನ ಸೇರಿದ್ದರು‌. ಅಂಕೋಲಾದ ಈ ಹೋಳಿ ಅಣಕು ಪ್ರದರ್ಶನ ರಾಜ್ಯದಲ್ಲಿ ಮತ್ತೆಲ್ಲೂ ಕಾಣ ಸಿಗದ ವಿಶಿಷ್ಟ ಆಚರಣೆಯಾಗಿದ್ದು, ಇಂದಿಗೂ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.