ETV Bharat / state

ಭಾರಿ ಮಳೆ: ಸಿಮೆಂಟ್​​​​​ ಜಾಲರಿ ಹಾಕಿದರೂ ನಿಲ್ಲದ ಗುಡ್ಡ ಕುಸಿತ! - undefined

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗಾಗಿ ಗುಡ್ಡಗಳು ಕುಸಿಯದಂತೆ ಐಆರ್​ಬಿ ಕಂಪನಿ ಕಬ್ಬಿಣದ ಜಾಲರಿಯನ್ನು ಹೊದಿಸಿ, ಅದರ ಮೇಲೆ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿತ್ತು. ಆದರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕುಮಟಾ ತಾಲೂಕಿನ  ಖೈರೆ ಕ್ರಾಸ್ ಬಳಿಯ ಗುಡ್ಡಕ್ಕೆ ಲೇಪಿಸಿದ್ದ ಜಾಲರಿ ಜತೆಗೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದೆ.

ಕಾರವಾರ
author img

By

Published : Jul 25, 2019, 5:15 AM IST

ಕಾರವಾರ: ಹೆದ್ದಾರಿ ನಿರ್ಮಾಣಕ್ಕಾಗಿ ತೆರವುಗೊಳಿಸಿದ ಗುಡ್ಡಗಳು ಮತ್ತೆ ಕುಸಿಯದಂತೆ ಹಾಕಲಾಗಿದ್ದ ಸಿಮೆಂಟ್​ ಜಾಲರಿ ಮಳೆಯಿಂದಾಗಿ ಹಾಳಾಗಿದೆ. ಈ ಅವೈಜ್ಞಾನಿಕ ಕ್ರಮದಿಂದ ಗುಡ್ಡಗಳು ಕುಸಿಯುವುದು ಮಾತ್ರ ನಿಂತಿಲ್ಲ.

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಬೃಹತ್ ಗುಡ್ಡಗಳನ್ನು ಕೊರೆಯಲಾಗಿತ್ತು. ಈ ಗುಡ್ಡಗಳು ಕುಸಿಯದಂತೆ ಐಆರ್​ಬಿ ಕಂಪನಿ ಕಬ್ಬಿಣದ ಜಾಲರಿಯನ್ನು ಹೊದಿಸಿ, ಅದರ ಮೇಲೆ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿತ್ತು.

ಕಾರವಾರದಲ್ಲಿ ಗುಡ್ಡ ಕುಸಿತ

ಆದರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕುಮಟಾ ತಾಲೂಕಿನ ಖೈರೆ ಕ್ರಾಸ್ ಬಳಿಯ ಗುಡ್ಡಕ್ಕೆ ಲೇಪಿಸಿದ್ದ ಜಾಲರಿ ಜತೆಗೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಖೈರೆ ಕ್ರಾಸ್​ನಿಂದ ಶಿರಸಿ ಒಳ ಮಾರ್ಗದ ಗುಡ್ಡಕ್ಕೆ 50 ಅಡಿ ಎತ್ತರದವರೆಗೂ ಸಿಮೆಂಟ್ ಪ್ಲಾಸ್ಟಿಂಗ್​ ಮಾಡಲಾಗಿತ್ತು. ಈ ವಿಧಾನದಿಂದ ಗುಡ್ಡ ಕುಸಿತ ತಡೆಯಬಹುದೆಂಬ ಗುತ್ತಿಗೆದಾರ, ಎಂಜಿನಿಯರ್​​ಗಳ ಚಿಂತನೆ ತಲೆಕೆಳಗಾಗಿದೆ.

ಮಳೆಗಾಲಕ್ಕೂ ಮುನ್ನವೇ ಹಲವೆಡೆ ಲೇಪಿಸಿದ್ದ ಸಿಮೆಂಟ್ ಬಿರುಕು ಬಿಟ್ಟಿತ್ತು. ತಾತ್ಕಾಲಿಕ ದುರಸ್ತಿ ಮಾಡಿ ತೇಪೆ ಹಾಕಲಾಗಿದ್ದರೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಸಿಮೆಂಟ್ ಪ್ಲಾಸ್ಟಿಂಗ್​ ಕೊಚ್ಚಿಹೊಂಡು ಹೋಗ್ತಿದೆ.

ಮಳೆ ಹೀಗೆಯೇ ಮುಂದುವರೆದರೆ ಇತರ ಭಾಗಗಳಲ್ಲಿಯೂ ಕುಸಿಯುವ ಆತಂಕ ಎದುರಾಗಿದೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Intro:ಸಿಮೆಂಟ್ ತೇಪೆ ಬಳಿಕವೂ ಕುಸಿದ ಗುಡ್ಡ... ನೀರಲ್ಲಿ ಹೋಮವಾದ ಅವೈಜ್ಞಾನಿಕ ಕಾಮಗಾರಿ

ಕಾರವಾರ: ಹೆದ್ದಾರಿಗಾಗಿ ತೆರವುಗೊಳಿಸಿದ ಗುಡ್ಡಗಳು ಮತ್ತೆ ಕುಸಿಯದಂತೆ ಐಆರ್ ಬಿ ಕಂಪನಿ ಲೇಪಿಸಿದ್ದ ಸಿಮೆಂಟ್ ತೇಪೆ ಮಳೆಗೆ ನೆಲಕಚ್ಚಿದ್ದು, ಅವೈಜ್ಞಾನಿಕ ಕ್ರಮದಿಂದ ವೆಚ್ಚಮಾಡಿದ ಹಣ ನೀರಲ್ಲಿ ಹೋಮ ಮಾಡಿದಂತಗಾಗಿದೆ.
ಹೌದು, ಉತ್ತರಕನ್ನಡ ಜಿಲ್ಲೆಯ ಕರಾವಳಿಯುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ೬೬ ರ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ವಿಸ್ತರಣೆಗಾಗಿ ಬೃಹತ್ ಗುಡ್ಡಗಳನ್ನು ಕೊರೆಯಲಾಗಿದೆ. ಆದರೆ ಈ ಗುಡ್ಡಗಳು ಕುಸಿಯದಂತೆ ಐಆರ್ ಬಿ ಕಂಪನಿ ಕಬ್ಬಿಣದ ಜಾಲರಿ ಹಾಕಿ ಅದರ ಮೇಲೆ ಸಿಮೆಂಟ್ ಪ್ಲಾಸ್ಟರ್ ಮಾಡಿತ್ತಿದೆ.
ಆದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕುಮಟಾ ತಾಲೂಕಿನ ಮಿರ್ಜಾನ್ ಸಮೀಪದ ಖೈರೆ ಕ್ರಾಸ್ ಬಳಿಯ ಗುಡ್ಡಕ್ಕೆ ಲೆಪಿಸಿದ್ದ ಸಿಮೆಂಟ್ ಪ್ಲಾಸ್ಟರ್ ಸಹಿತ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಖೈರೆ ಕ್ರಾಸ್ನಿಂದ ಶಿರಸಿ ಒಳಮಾರ್ಗದ ಗುಡ್ಡಕ್ಕೆ ೫೦ ಅಡಿ ಎತ್ತರದವರೆಗೂ ಸಿಮೆಂಟ್ ಪ್ಲಾಸ್ಟರ್ ಮಾಡಿದ್ದು, ಈ ವಿಧಾನದಿಂದ ಗುಡ್ಡಕುಸಿತ ತಡೆಯಬಹುದೆಂದು ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಎಂಜಿನಿಯರ್ ಗಳ ವಿಚಾರವಾಗಿತ್ತು.
ಆದರೆ ಮಳೆಗಾಲಕ್ಕೂ ಮುನ್ನವೇ ಕರಾವಳಿಯುದ್ದಕ್ಕೂ ಹಲವೆಡೆ ಲೇಪಿಸಿದ್ದ ಸಿಮೆಂಟ್ ಬಿರುಕುಬಿಟ್ಟಿತ್ತು. ಅದನ್ನು ತಾತ್ಕಾಲಿಕ ದುರಸ್ತಿ ಮಾಡಿದ್ದರರಾದರೂ ಕರಾವಳಿಯಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಸಿಮೆಂಟ್ ತೇಪೆಯ ಅಸಲು ಸಾಮರ್ಥ್ಯ ಬಹಿರಂಗಗೊಳತೊಡಗಿದೆ.
ಅಲ್ಲದೆ ಮಳೆ ಹೀಗೆ ಮುಂದುವರಿದಲ್ಲಿ ಖೈರೆ ಕ್ರಾಸ್ ಬಳಿಯ ಗುಡ್ಡ ಸೇರಿದಂತೆ ಇತರಭಾಗಗಳಲ್ಲಿಯೂ ಕುಸಿಯುವ ಆತಂಕ ಇದೆ ಎನ್ನುವುದು ಈ ಭಾಗದ ಸ್ಥಳೀಯರ ಆತಂಕವಾಗಿದೆ.
ಆದ್ದರಿಂದ ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಐಆರ್ ಬಿ ಕಂಪನಿಗೆ ಕುಸಿಯುವ ಹಂತದಲ್ಲಿರುವ ಗುಡ್ಡಗಳ ತೆರವುಗೊಳಿಸಲು ಸೂಚಿಸಬೇಕಿದೆ.
Body:ಕConclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.