ETV Bharat / state

ವಾರದಲ್ಲಿ ಎರಡು ದಿನ ಮಾತ್ರ ಮಾರುಕಟ್ಟೆ ಓಪನ್: ಖರೀದಿಗೆ ಮುಗಿಬಿದ್ದ ಕಾರವಾರ ಮಂದಿ - Karwar lockdown

ವಾರದಲ್ಲಿ ಎರಡೇ ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು ಕಾರವಾರದ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂತು.

Heavy Crowd in the markets of Karwar
ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ
author img

By

Published : May 25, 2021, 12:33 PM IST

ಕಾರವಾರ: ಕೋವಿಡ್ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ಉತ್ತರ ಕನ್ನಡ ಜಿಲ್ಲಾಡಳಿತ ವಾರದಲ್ಲಿ 2 ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಹಾಗಾಗಿ, ಇಂದು ಮಾರುಕಟ್ಟೆಗಳಲ್ಲಿ ಜನಸ್ತೋಮ ಕಂಡುಬಂತು.

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಮಂಗಳವಾರ ಮತ್ತು ಶುಕ್ರವಾರ ಮಾತ್ರ ಮಾರುಕಟ್ಟೆಗೆ ಬಂದು ಅಗತ್ಯ ವಸ್ತುಗಳ ಖರೀದಿಸಬಹುದು. ಹೀಗಾಗಿ, ಕಾರವಾರ ನಗರದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಜನ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು. ತಳ್ಳುಗಾಡಿಗಳ ಮೂಲಕ ಮನೆ ಬಾಗಿಲಿಗೆ ತರಕಾರಿ, ಹಣ್ಣು ಇತರೆ ಸಾಮಗ್ರಿಗಳನ್ನು ಕೊಂಡೊಯ್ದು ಮಾರಾಟ ಮಾಡಲು ಪಾಸ್ ಹೊಂದಿದವರಿಗೆ ಅವಕಾಶವಿದೆ.

ಇದನ್ನೂ ಓದಿ: ಮದುವೆ, ಸಮಾರಂಭಗಳಿಲ್ಲದೆ ಹೂ ಕೇಳೋರಿಲ್ಲ: ಕೋವಿಡ್​ಗೆ ನಲುಗಿದ ರೈತರು, ವ್ಯಾಪಾರಸ್ಥರು

ವಸ್ತುಗಳ ಖರೀದಿ ಭರಾಟೆಯಲ್ಲಿ ಜನ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದು ಕಾಣಿಸಿತು. ಸಾಮಾಜಿಕ ಅಂತರ ಮಾಯವಾಗಿತ್ತು, ಕೆಲವರು ಮಾಸ್ಕ್​ ಕೂಡ ಧರಿಸಿದೆ ಆಗಮಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.