ETV Bharat / state

ಕರಾವಳಿಯಲ್ಲಿ ಜೋರಾದ ಬಿಸಿಲು.. ಬದಲಾದ ವಾತಾವರಣಕ್ಕೆ ಬಳಲಿ ಬೆಂಡಾದ ಜನ - cool drinks for hot season

ಈ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಅವಧಿಗೂ ಮುನ್ನವೇ ಬಿಸಿಲಿನ ಅಬ್ಬರ ತನ್ನ ಪ್ರತಾಪ ತೋರಿಸುತ್ತಿದೆ. ಬೇಸಿಗೆ ಆರಂಭಕ್ಕೂ ಮೊದಲು ಕಡಿಮೆಯಿದ್ದ ತಂಪುಪಾನೀಯಗಳ ಬೆಲೆ ಇದೀಗ ಜಾಸ್ತಿಯಾಗಿದೆ.

heat-incresed-in-coastal-area
ಕರಾವಳಿಯಲ್ಲಿ ಜೋರಾದ ಬಿಸಿಲು
author img

By

Published : Apr 14, 2022, 9:14 AM IST

ಕಾರವಾರ: ರಾಜ್ಯದ ಕರಾವಳಿಯಲ್ಲಿ ಸಾಮಾನ್ಯ ದಿನಗಳಲ್ಲೇ ತಡೆದುಕೊಳ್ಳಲಾಗದಷ್ಟು ಸೆಕೆ ಇರುತ್ತದೆ. ಬೇಸಿಗೆ ಕಾಲದಲ್ಲಂತೂ ಇಲ್ಲಿನ ಬಿಸಿಲಿನ ಧಗೆಯನ್ನು ಸಹಿಸಿಕೊಳ್ಳೋದು ಸಾಧ್ಯವೇ ಇಲ್ಲ. ಅಷ್ಟು ಪ್ರಮಾಣದಲ್ಲಿ ಸೂರ್ಯನ ಝಳ ಹೆಚ್ಚಾಗಿರುತ್ತದೆ. ಅದರಲ್ಲೂ ಈ ಬಾರಿಯಂತೂ ಮಾರ್ಚ್‌ ಅಂತ್ಯದಿಂದಲೇ ಬೇಸಿಗೆ ಅಬ್ಬರ ಆರಂಭವಾಗಿದ್ದು, ಕರಾವಳಿ ಜನತೆ ತತ್ತರಿಸುವಂತಾಗಿದೆ.

ಕರಾವಳಿಯಲ್ಲಿ ಜೋರಾದ ಬಿಸಿಲು

ಬಗೆ ಬಗೆಯ ಫ್ಲೇವರ್‌ನ ಐಸ್ ಕ್ರೀಂಗಳು, ರಾಶಿ ಹಾಕಲಾಗಿರುವ ಎಳನೀರು, ನಿಂಬೆಹಣ್ಣಿನ ಶರಬತ್. ಅಬ್ಬಾ ಇದೆಲ್ಲ, ನೋಡ್ತಿದ್ರೆ ಯಾರಿಗೇ ಆಗ್ಲಿ ಒಂದು ಕ್ಷಣ ನಿಂತು ದೇಹ ತಂಪು ಮಾಡಿಕೊಳ್ಳೋಣ ಅಂತಾ ಅನ್ನಿಸದೇ ಇರೋದಿಲ್ಲ. ಸದ್ಯ ಉತ್ತರಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭವಾದಾಗಿನಿಂದ ಸೂರ್ಯನ ತಾಪ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಸಮುದ್ರತೀರಕ್ಕೆ ಹೊಂದಿಕೊಂಡಿರುವ ಕರಾವಳಿಯ ತಾಲೂಕುಗಳಲ್ಲಂತೂ ಸೆಕೆಯ ಅಬ್ಬರ ಹೇಳತೀರದಾಗಿದೆ.

ಪರಿಣಾಮ ಜನರು ಸೂರ್ಯನ ಝಳದಿಂದ ತಪ್ಪಿಸಿಕೊಳ್ಳುವ ಉಪಾಯಗಳತ್ತ ಮುಖಮಾಡುತ್ತಿದ್ದಾರೆ. ಸದ್ಯ ಜಿಲ್ಲೆಯ ಕರಾವಳಿ ಭಾಗದಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಜನ ಸೂರ್ಯನ ತಾಪ ತಾಳಲಾರದೇ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಎಳನೀರು, ಲಿಂಬು ಶರಬತ್, ಲಸ್ಸಿಯಂತಹ ತಂಪು ಪಾನೀಯಗಳಿಗೆ ಹೆಚ್ಚು ಬೇಡಿಕೆಯಿದ್ದು ಜನರು ಐಸ್‌ಕ್ರೀಂ ಅಂಗಡಿಗಳಿಗೂ ಮುಗಿಬೀಳುತ್ತಿದ್ದಾರೆ.

ಮನೆಯಿಂದ ಹೊರ ಬಂದರೆ ಬಿಸಿಗಾಳಿ, ನೆತ್ತಿಸುಡುವ ಬಿಸಿಲು, ರಸ್ತೆಯಲ್ಲಿ ಓಡಾಡೋಣವೆಂದರೆ ಬಿಸಿಲಿನ ಧಗೆ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೂ ಕನಿಷ್ಠ 36 ರಿಂದ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲಿನ ತಾಪ ಇರುತ್ತದೆ. ಹೀಗಾಗಿ ಈ ಉಷ್ಣತೆಯನ್ನು ತಾಳಲಾರದೇ ಮಧ್ಯಾಹ್ನದ ಹೊತ್ತಿಗೆ ಜನರು ಮನೆಯಿಂದ ಹೊರಗಡೆ ಬರುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಏನೇ ಕೆಲಸ ಕಾರ್ಯಗಳಿದ್ದರೂ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಮುಗಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದಾರೆ.

ಮಾರ್ಚ್ ತಿಂಗಳ ಆರಂಭದಿಂದಲೇ ನಗರದಲ್ಲಿ ಹಲವೆಡೆ ಹಣ್ಣಿನ ಜ್ಯೂಸ್ ಸೆಂಟರ್‌ಗಳು ತಲೆಯೆತ್ತಿವೆ. ಸೇಬು, ಮಾವು, ಕರಬೂಜ, ಕಲ್ಲಂಗಡಿಯಂತಹ ವಿವಿಧ ರೀತಿಯ ಹಣ್ಣುಗಳ ಜ್ಯೂಸ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಇವುಗಳನ್ನ ಸವಿಯಲು ಜನ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕಳೆದವರ್ಷ ಉತ್ತಮ ಮಳೆಯಾಗಿದ್ದರಿಂದ ಈ ಬಾರಿ ಬಿಸಿಲು ಹಚ್ಚಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ನೆಚ್ಚರಿಕೆಯನ್ನ ಸಹ ನೀಡಿತ್ತು.

ಈ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಅವಧಿಗೂ ಮುನ್ನವೇ ಬಿಸಿಲಿನ ಅಬ್ಬರ ತನ್ನ ಪ್ರಭಾವ ತೋರಿಸುತ್ತಿದೆ. ಬೇಸಿಗೆ ಆರಂಭಕ್ಕೂ ಮೊದಲು ಕಡಿಮೆಯಿದ್ದ ತಂಪುಪಾನೀಯಗಳ ಬೆಲೆ ಇದೀಗ ಜಾಸ್ತಿಯಾಗಿದೆ. ಸದ್ಯ ಎಳನೀರು 45 ರೂ, ನಿಂಬು ಶರಬತ್ 30, ಹಣ್ಣಿನ ಜ್ಯೂಸ್ 80, ಕಬ್ಬಿನ ಜ್ಯೂಸ್ 40 ರೂಪಾಯಿಯಂತೆ ತಂಪು ಪಾನೀಯಗಳ ಬೆಲೆ ಗಗನಕ್ಕೇರಿದೆ. ಆದರೂ ಡೀಸೆಲ್, ಪೆಟ್ರೋಲ್ ಬೆಲೆಯೇರಿಕೆಯಿಂದಾಗಿ ಲಾಭವಾಗುತ್ತಿಲ್ಲ ಅಂತಾರೆ ವ್ಯಾಪಾರಸ್ಥರು.

ಒಟ್ಟಾರೆ ಬೇಸಿಗೆ ಆರಂಭದಲ್ಲೇ ಉತ್ತರಕನ್ನಡದ ಜನಸಾಮಾನ್ಯರು ಬಿಸಿಲಿನ ತಾಪಕ್ಕೆ ತತ್ತರಿಸುವಂತಾಗಿದ್ದು ಏಪ್ರಿಲ್ ಅಂತ್ಯಕ್ಕೆ ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕೆಲ ತಿಂಗಳ ಹಿಂದಷ್ಟೇ ತೀವ್ರ ಚಳಿಯನ್ನ ಕಂಡಿದ್ದ ಜನತೆಗೆ ಇದೀಗ ಏಕಾಏಕಿ ಬಿಸಿಲಿನ ಬೇಗೆ ಹೆಚ್ಚಳವಾಗಿರೋದು ಪರದಾಡುವಂತೆ ಮಾಡಿರೋದಂತೂ ಸತ್ಯ.

ಇದನ್ನೂ ಓದಿ: ಬೇಸಿಗೆಯ ದಾಹ ತಣಿಸಲು ಯಾವ ಪಾನೀಯ ಉತ್ತಮ? ಇವುಗಳ ರುಚಿ ನೋಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.