ETV Bharat / state

ಯಾವ ಸಿಡಿ ಬಿಡುಗಡೆ ಮಾಡ್ತಾರೆ? ಸ್ಟೇ ತರುವಂತಹ ಯಾವುದೇ ಸಿಡಿಗಳಿಲ್ಲ: ಹೆಚ್‌.ಡಿ.ಕುಮಾರಸ್ವಾಮಿ - ಈಟಿವಿ ಭಾರತ ಕನ್ನಡ

ಒಡೆಯುವ ಕೆಲಸವನ್ನು ಬಿಜೆಪಿಗರು ಮಾಡಿದ್ದಾರೆ, ಕಟ್ಟುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಹೆಚ್​.ಡಿ ಕುಮಾರಸ್ವಾಮಿ
ಹೆಚ್​.ಡಿ ಕುಮಾರಸ್ವಾಮಿ
author img

By

Published : Feb 9, 2023, 4:58 PM IST

ಕಾರವಾರ: ಸಿಡಿ ಬಿಡುಗಡೆ ಕುರಿತ ಬಿಜೆಪಿ ಮುಖಂಡರ ಹೇಳಿಕೆಗೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, "ನನ್ನ ಯಾವ ಸಿಡಿ ಇದೆಯಂತೆ?, ಯಾವ ಸಿಡಿ ಬಿಡುಗಡೆ ಮಾಡ್ತಾರೆ? ಅವರಲ್ಲಿ ಸಿಡಿ ಇದ್ದರೆ ಬಿಡುಗಡೆ ಮಾಡಲಿ. ನನ್ನ ಸಿಡಿ ಬಿಡುಗಡೆ ಮಾಡೋದಾದ್ರೆ ರಾಜ್ಯದ ಬಡವರು ಕಣ್ಣೀರು ಹಾಕಿ ಮಾತನಾಡಿದ, ನಾನು ಸಹಾಯ ಮಾಡಿದ ಸಿಡಿ ಬಿಡುಗಡೆ ಮಾಡಬೇಕಷ್ಟೇ. ಅವರಂತೆ ಸ್ಟೇ ತರುವಂತಹ ಯಾವುದೇ ಸಿಡಿಗಳಿಲ್ಲ. ನನ್ನ ಸಿಡಿ ಬಿಡುಗಡೆ ಮಾಡಲು ಯಾವುದೇ ಪ್ರಕರಣಗಳೂ ಇಲ್ಲ" ಎಂದರು.

ಕುಮಾರಸ್ವಾಮಿ ಬ್ರಿಟೀಷರ ರೀತಿ ಒಡೆದಾಳುವ ನೀತಿ ಮಾಡುತ್ತಾರೆ ಎಂಬ ಆರ್​.ಅಶೋಕ್ ಹೇಳಿಕೆಯ ಬಗ್ಗೆ ಮಾತನಾಡಿ, "ನಾವು ಒಡೆದಾಳುವ ನೀತಿ ಮಾಡಿಲ್ಲ. ಒಡೆಯುವ ಕೆಲಸ ಬಿಜೆಪಿಗರು ಮಾಡಿದ್ದಾರೆ. ಕಟ್ಟುವ ಕೆಲಸ ನಾವು ಮಾಡುತ್ತಿದ್ದೇವೆ. ಬ್ರಾಹ್ಮಣರ ಮೇಲಿನ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವರವರೇ ಅರ್ಥ ಮಾಡಿಕೊಂಡು ಹೇಳಿಕೆ ಕೊಡುತ್ತಿದ್ದಾರೆ. ಇದಕ್ಕೆ ಶೀಘ್ರದಲ್ಲೇ ಟ್ವೀಟ್ ಮಾಡಿ ಉತ್ತರ ಕೊಟ್ಟು, ಗೊಂದಲಕ್ಕೆ ತೆರೆ ಎಳೆಯುತ್ತೇನೆ" ಎಂದು ಹೇಳಿದರು.

ಬಿ.ವೈ.ವಿಜಯೇಂದ್ರ ನೀಡಿರುವ ಹೇಳಿಕೆಗೆ, "ಅವರಿಗೆ ಮಾಹಿತಿ ಇಲ್ಲ. ನಾನು, ಯಡಿಯೂರಪ್ಪ ಜತೆ ಕೈ ಜೋಡಿಸದಿದ್ದರೆ ಅವರು ರಾಜಕೀಯವಾಗಿ ಅಂದೇ ಮುಗಿದು ಹೋಗುತ್ತಿದ್ದರು. ಆಗ ಈ ವಿಜಯೇಂದ್ರ ಎಲ್ಲಿದ್ದರು? ಒಂದು ದಿನ ಯಡಿಯೂರಪ್ಪ ಅವರ ಆಪ್ತ ಸಿದ್ದಲಿಂಗಸ್ವಾಮಿ ಎಂಬುವವರು ಜೊತೆ ನನಗೆ ಒಂದು ಚೀಟಿ ಕಳಿಸಿದ್ದರು. ಅದರಲ್ಲಿ ನನ್ನನ್ನು ಭೇಟಿ ಮಾಡಬೇಕು ಎಂದು ತಿಳಿಸಿದ್ದರು. ಆಗ ನಾನೇ ಬಿಎಸ್​ವೈ ಅವರನ್ನು ಹೋಗಿ ಭೇಟಿ ಮಾಡಿದೆ."

ಜೆಡಿಎಸ್ ಸೇರಲು ಮುಂದಾಗಿದ್ರು ಯಡಿಯೂರಪ್ಪ: "ಆಗ ಬಿಜೆಪಿಯಲ್ಲಿ ಬಿಎಸ್​ವೈಗೆ ಆಗಿರುವ ಹಿಂಸೆ ಮತ್ತು ಅವಮಾನಗಳ ಬಗ್ಗೆ ಹೇಳಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಜೆಡಿಎಸ್​ಗೆ ಸೇರುವೆ, ಅಲ್ಲಿ ನನಗೆ ಒಂದು ಮಂತ್ರಿ ಸ್ಥಾನ ಕೊಡಲು ಸಾಧ್ಯವಾ ಎಂಬ ಪ್ರಶ್ನೆಯನ್ನು ನನ್ನ ಮುಂದಿಟ್ಟಿದ್ದರು. ಆಗ ನಾನು ನಿಮ್ಮ ಪಕ್ಷದ ಶಾಸಕರಿಗೆ ನಿಮ್ಮ ನಾಯಕತ್ವ ಇರಲಿ. ಒಂದು ವೇಳೆ ನೀವು ಪಕ್ಷದಿಂದ ಆಚೆ ಬಂದರೆ ನಿಮ್ಮ ರಾಜಕೀಯ ಜೀವನ ಮುಗಿದು ಹೋಗುತ್ತದೆ ಎಂದು ಕಿವಿಮಾತು ಹೇಳಿದ್ದೆ" ಎಂದರು. "ವೀರಶೈವರಿಗೆ ನಾನು ಏನೆಲ್ಲಾ ಒಳ್ಳೆಯದು ಮಾಡಿದ್ದೇನೆ ಎನ್ನುವುದು ವಿಜಯೇಂದ್ರ ಅವರಿಗೆ ಗೊತ್ತಿಲ್ಲ" ಎಂದರು.

ಡಿಕೆಶಿಗೆ ಟಾಂಗ್ : ಕೆಪಿಸಿಸಿ‌‌ ಅಧ್ಯಕ್ಷ ಡಿ‌.ಕೆ‌.ಶಿವಕುಮಾರ್ ತೆನೆ ಹೊಲದಲ್ಲಿ ಇರಲಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, "ಹೊಲದಲ್ಲಿ ತೆನೆ ಇದ್ದರೆ ಕೈಗೆ ಕೆಲಸ ಸಿಗೋದು. ಕೈ ನಾಡಿನ ಜನತೆಗೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ರೇಖೆ ಅಳಿಸಿದ್ದಾರೆ. ಕಾಂಗ್ರೆಸ್ ವಿಫಲವಾಗಿದ್ದಕ್ಕೆ ಕೈ ಮೇಲೆ ಜನರು ರೇಖೆ ಎಳೆದಿದ್ದಾರೆ. ತೆನೆ‌‌ ಜನರನ್ನು ನೆಮ್ಮದಿಯಿಂದ ಬದುಕುವಂತೆ ಮಾಡುತ್ತದೆ" ಎಂದು ತಿರುಗೇಟು ನೀಡಿದರು.

"ಪಂಚರತ್ನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿದೆ. ಕಾರ್ಯಕ್ರಮಕ್ಕೆ 2.5 ಲಕ್ಷ ಕೋಟಿ ರೂ ಅಗತ್ಯವಿದೆ. ಅನುಭವದ ಮೇಲೆ ಲೆಕ್ಕಾಚಾರ ಮಾಡಿ ಹಣ ಸರಿದೂಗಿಸಲು ಈ ಕಾರ್ಯಕ್ರಮ ಜಾರಿ ಮಾಡಲು ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬೇಕಾಗಿದ್ದು, ಜನರು ಆಶೀರ್ವಾದ ಮಾಡಿದರೆ ನೆಮ್ಮದಿ‌ಯ ಜೀವನ ಮಾಡುವುದನ್ನು ಸಾಬೀತುಪಡಿಸಿ ತೋರಿಸುತ್ತೇನೆ" ಎಂದು ಹೆಚ್‌ಡಿಕೆ ಭರವಸೆ ಕೊಟ್ಟರು.

ಇದನ್ನೂ ಓದಿ: ಸಿಎಂ ಆಯ್ಕೆ ಪಕ್ಷದ ಹೈಕಮಾಂಡ್​ ನಿರ್ಧಾರ: ಬಿ ಎಸ್​ ಯಡಿಯೂರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.