ಶಿರಸಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾಧ್ಯಕ್ಷರಾದ ಮೇಲೆ ಅವರ ಸ್ವಕ್ಷೇತ್ರ ಶಿರಸಿ-ಸಿದ್ದಾಪುರಕ್ಕೆ ಬಂಪರ್ ಲಾಟರಿ ಹೊಡೆದಿದೆ. ವಿಧಾನಸಭಾಧ್ಯಕ್ಷರ ಸೂಚನೆಯ ಮೇರೆಗೆ ವಿವಿಧ ಇಲಾಖೆಗಳಿಂದ ಒಟ್ಟು 25ಕೋಟಿ ರೂಪಾಯಿ ಅಭಿವೃದ್ಧಿ ಅನುದಾನ ಬಿಡುಗಡೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿರುವ ಕಾರಣ ಅವರ ಶಿಫಾರಸಿನ ಮೇರೆಗೆ ಲೊಕೊಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಯಾಗಿದೆ.
ಮೊದಲನೇ ಹಂತದಲ್ಲಿ 17 ಕೋಟಿ, ಎರಡನೇ ಹಂತದಲ್ಲಿ 5 ಕೋಟಿ ಸೇರಿದಂತೆ ಒಟ್ಟು 22 ಕೋಟಿ ಗ್ರಾಮೀಣ ಭಾಗಕ್ಕೆ ಬಿಡುಗಡೆಯಾಗಿದೆ. ಜೊತೆಗೆ ನಗರ ಪ್ರದೇಶಕ್ಕೆ 3 ಕೋಟಿ ರೂಪಾಯಿ ಎಸ್.ಎಫ್.ಸಿ. ಅನುದಾನ ಬಿಡುಗಡೆ ಹಂತದಲ್ಲಿದೆ. ಶಿರಸಿ ತಾಲೂಕಿನ ಗ್ರಾಮೀಣ ಭಾಗದ 30ಕ್ಕೂ ಅಧಿಕ ಹಾಗೂ ಸಿದ್ದಾಪುರ ತಾಲೂಕಿನ 20ಕ್ಕೂ ಅಧಿಕ ಗ್ರಾಮೀಣ ರಸ್ತೆಗಳಿಗೆ ಅನುದಾನ ನೀಡಲಾಗಿದೆ.