ETV Bharat / state

ಭಟ್ಕಳ ಕಡಲತೀರಕ್ಕೆ ಬರುತ್ತಿವೆ ರಾಶಿ ರಾಶಿ ಗೊಬ್ರ ಮೀನುಗಳು - ಗೊಬ್ರ

ಗಾಳಿ, ಮಳೆಯಿಂದಾಗಿ ಬೋಟುಗಳು ಮೀನುಗಾರಿಕೆಗೆ ಇಳಿಯದೆ ಬಂದರುಗಳಲ್ಲಿಯೇ ಇವೆ. ಹೀಗಿರುವಾಗ ಭಟ್ಕಳ ಭಾಗದ ಕಡಲತೀರಗಳಲ್ಲಿ ರಾಶಿ ರಾಶಿ ಗೊಬ್ರ ಮೀನು ದೊರೆಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

Gobra fishes are coming to the beach in bhatkal
ರಾಶಿ ರಾಶಿ ಗೊಬ್ರ ಮೀನುಗಳು
author img

By

Published : Aug 8, 2022, 4:49 PM IST

ಭಟ್ಕಳ (ಉತ್ತರ ಕನ್ನಡ): ಮಳೆಯಿಂದಾಗಿ ಮೀನುಗಾರರು ಕಡಲಿಗೆ ಇಳಿಯದೆ, ತಮ್ಮ ಬೋಟುಗಳನ್ನ ಬಂದರುಗಳಲ್ಲೇ ಲಂಗರು ಹಾಕಿ ಮಳೆ-ಗಾಳಿ ಕಡಿಮೆಯಾಗುವುದನ್ನ ಕಾದು ಕುಳಿತಿದ್ದಾರೆ. ಈ ನಡುವೆ ಭಟ್ಕಳ ತಾಲೂಕಿನ ಮುರುಡೇಶ್ವರ, ಮಾವಿನಕುರ್ವಾ ಬಂದರು ಸೇರಿದಂತೆ ವಿವಿಧೆಡೆ ಗೊಬ್ರ ಮೀನುಗಳು ರಾಶಿ ರಾಶಿಯಾಗಿ ದಡಕ್ಕೆ ಬಂದಿವೆ.

ಕಡಲತೀರಕ್ಕೆ ಬರುತ್ತಿವೆ ರಾಶಿ ರಾಶಿ ಗೊಬ್ರ ಮೀನುಗಳು

ಸಣ್ಣ ಮರಿ ಮೀನುಗಳು ಇವಾಗಿದ್ದು, ಈ ಭಾಗದಲ್ಲಿ ಮುರಿಯ ಅಂತಲೂ ಇದಕ್ಕೆ ಕರೆಯುತ್ತಾರೆ. ಈ ಮೀನುಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಡಲಿನ ಆಳದಲ್ಲಿ, ಕಲ್ಲುಗಳ ನಡುವೆ ಜೀವಿಸುತ್ತಿರುತ್ತವೆ. ಆದರೆ ಈ ರೀತಿ ದಡಕ್ಕೆ ಬಂದು ಬೀಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಮೀನುಗಳನ್ನು ಹಿಡಿಯಲು ಕಡಲತೀರದಲ್ಲಿ ಜನರ ದಂಡೇ‌ ನೆರೆದಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.