ETV Bharat / state

ನಿಷೇಧ ಹೇರಿದ್ದರೂ ಅವಕಾಶ ಕೋರಿ ಮೋದಿಗೆ ಪತ್ರ ಬರೆದ ಗೋವಾ ಕ್ರಿಶ್ಚಿಯನ್ನರು! - ಅಂಜುದುರ್ಗಾ ದೇವಿ

ಗೋವಾದ ಕ್ರಿಶ್ಚಿಯನ್ನರು ಅಂಜುದೀವ್ ದ್ವೀಪದ ಪ್ರವೇಶಕ್ಕೆ ಅವಕಾಶ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿರುವುದು ಹಿಂದೂ ಸಮುದಾಯದವರ ಆಕ್ರೋಶಕ್ಕೆ ಗುರಿಯಾಗಿದೆ.

goa-christians-who-wrote-a-letter-to-modi
author img

By

Published : Oct 14, 2019, 11:08 PM IST

ಕಾರವಾರ: ಅದು ನೌಕಾನೆಲೆ ವ್ಯಾಪ್ತಿಯ ಸಮುದ್ರ ಮಧ್ಯದ ದ್ವೀಪ. ಒಂದು ಕಾಲದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ನರು ಇಲ್ಲಿನ ದೇವಸ್ಥಾನ ಹಾಗೂ ಚರ್ಚ್​​ಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ನೌಕಾನೆಲೆ ಸ್ಥಾಪನೆಯಾದ ಬಳಿಕ ಭದ್ರತಾ ದೃಷ್ಟಿಯಿಂದ ಅಲ್ಲಿ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ಹೇರಲಾಗಿದೆ. ಇದೀಗ ಗೋವಾದ ಕ್ರಿಶ್ಚಿಯನ್ನರು ಅಂಜುದೀವ್ ದ್ವೀಪದ ಪ್ರವೇಶಕ್ಕೆ ಅವಕಾಶ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿರುವುದು ಹಿಂದೂ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದೆ.

ಕಾರವಾರದ ಬಿಣಗಾ ಬಳಿ ಅರಬ್ಬಿ ಸಮುದ್ರದಲ್ಲಿರುವ ಅಂಜುದೀವ್ ದ್ವೀಪ ಕದಂಬ ನೌಕಾನೆಲೆ ಪ್ರಾರಂಭವಾದ ಬಳಿಕ ನಿಷೇಧಕ್ಕೊಳಗಾಗಿದೆ. ವಿಚಿತ್ರ ಅಂದ್ರೆ ಈ ದ್ವೀಪ ಕಾರವಾರಕ್ಕೆ ಸಮೀಪವಿದ್ರು ಗೋವಾ ವ್ಯಾಪ್ತಿಗೆ ಬರುತ್ತದೆ. ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೂ ಆಗಿತ್ತು.

ಮೋದಿ ಪತ್ರ ಬರೆದ ಕ್ರಿಶ್ಚಿಯನ್ನರ ವಿರುದ್ಧ ಸ್ಥಳೀಯರ ಆಕ್ರೋಶ

ಪೊರ್ಚುಗೀಸರು ಈ ಪ್ರದೇಶದಲ್ಲಿ ನಿರ್ಮಿಸಿದ ಚರ್ಚ್​ನಲ್ಲಿ ಪ್ರತಿ ವರ್ಷ ಧಾರ್ಮಿಕ ಆಚರಣೆ ನಡೆಸುತ್ತಿದ್ದರೆ, ಹಿಂದೂಗಳು ಅಂಜದುರ್ಗಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು. 1991ರಲ್ಲಿ ಕದಂಬ ನೌಕಾನೆಲೆ ಯೋಜನೆ ವ್ಯಾಪ್ತಿಗೆ ದ್ವೀಪವನ್ನು ಹಸ್ತಾಂತರಿಸಲಾಯ್ತು. ಭದ್ರತೆ ದೃಷ್ಟಿಯಿಂದ 2000ರ ನಂತರ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿತ್ತು. ಅದರಂತೆ ಚರ್ಚ್ ಹಾಗೂ ದೇವಸ್ಥಾನಗಳಿಗೂ ಪ್ರವೇಶ ನಿಷೇಧಿಸಲಾಗಿತ್ತು.

ದ್ವೀಪ ಪ್ರವೇಶಕ್ಕೆ ಕ್ರಿಶ್ಚಿಯನ್ನರು ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಅವಕಾಶ ನೀಡಿರಲಿಲ್ಲ. ಈಗ ಅವಕಾಶಕ್ಕಾಗಿ ಕ್ರಿಶ್ಚಿಯನ್ನರು ಪ್ರಧಾನಿ ಕಾರ್ಯಾಲಯಕ್ಕೆ ಮತ್ತೆ ಪತ್ರ ಬರೆದಿದ್ದಾರೆ. ಇದು ಹಿಂದೂ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ. ದೇಶದ ಹಿತದೃಷ್ಟಿಯಿಂದ ನಾವೂ ಇಲ್ಲಿನ ಧಾರ್ಮಿಕ ಕೇಂದ್ರಗಳಿಗೆ ತೆರಳುತ್ತಿರಲಿಲ್ಲ. ಒಂದು ವೇಳೆ ಕ್ರಿಶ್ಚಿಯನ್ನರಿಗೆ ಕೊಟ್ಟರೆ ನಮಗೂ ಅವಕಾಶ ಕೊಡಿ ಎನ್ನುತ್ತಾರೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಬಿಎಸ್.ಪೈ.

ಅಂಜದುರ್ಗಾ ದೇವಿ ದೇವಸ್ಥಾನ ಇದ್ದಿದ್ದರಿಂದಲೇ ದ್ವೀಪಕ್ಕೆ ಅಂಜುದೀವ್ ಎಂಬ ಹೆಸರು ಬಂದಿದೆ. ಈಗಲೂ ಮೊದಲಿನಂತೆಯೇ ನಿಷೇಧ ಮುಂದುವರೆಸಬೇಕು. ಎರಡೂ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಅಂಜದುರ್ಗಾ ದೇವಿ ಮೀನುಗಾರರ ಆರಾಧ್ಯ ದೈವವಾಗಿದ್ದು, ದೇವಿಗೆ ಪೂಜೆ ಸಲ್ಲಿಸಿದ ಬಳಿಕವೇ ಅವರು ಮೀನುಗಾರಿಕೆಗೆ ತೆರಳುತ್ತಿದ್ದರು. ನೌಕಾನೆಲೆ ಪ್ರಾರಂಭವಾದ ಬಳಿಕ ಮೀನುಗಾರರೂ ದ್ವೀಪಕ್ಕೆ ತೆರಳುತ್ತಿಲ್ಲ. ಕ್ರಿಶ್ಚಿಯನ್ನರು ದ್ವೀಪ ಪ್ರವೇಶಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಲು ಮುಂದಾಗಿರೋದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

Intro:Body:ನಿಷೇಧಿತ ಅಂಜುದೀವ್ ದ್ವೀಪಕ್ಕೆ ಪ್ರವೇಶ ಕೋರಿ ಪ್ರಧಾನಿಗೆ ಪತ್ರ... ಕೊಟ್ಟರೇ ನಮಗೂ ಕೊಡಿ ಎನ್ನುತ್ತಿವೆ ಹಿಂದೂ ಸಂಘಟನೆಗಳು

ಕಾರವಾರ: ಅದು ನೌಕಾನೆಲೆ ವ್ಯಾಪ್ತಿಯ ಸಮುದ್ರ ಮಧ್ಯದ ದ್ವೀಪ. ಒಂದು ಕಾಲದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಇಲ್ಲಿನ ದೇವಸ್ಥಾನ ಹಾಗೂ ಚರ್ಚ್ ಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಯಾವಾಗ ನೌಕಾನೆಲೆ ಸ್ಥಾಪನೆಯಾಯ್ತೊ ಆಗ ಭದ್ರತಾ ದೃಷ್ಟಿಯಿಂದ ಈ ಭಾಗದಲ್ಲಿ ಸಾರ್ವಜನಿಕ ಸಂಪರ್ಕಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ ಇದೀಗ ಗೋವಾದ ಕೆಲ ಕ್ರಿಶ್ಚಿಯನ್ ಸಮುದಾಯದವರು ದ್ವೀಪದ ಪ್ರವೇಶಕ್ಕೆ ಅವಕಾಶ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಇತರ ಸಮುದಾಯದವರು ಸೇರಿದಂತೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು, ಒಂದು ಕಾಲದಲ್ಲಿ ಪ್ರವಾಸಿಗರ ಸ್ವರ್ಗವಾಗಿದ್ದ ಕಾರವಾರದ ಬಿಣಗಾ ಬಳಿ ಅರಬ್ಬಿ ಸಮುದ್ರದಲ್ಲಿರುವ ಅಂಜುದೀವ್ ದ್ವೀಪ ಕದಂಬ ನೌಕಾನೆಲೆ ಪ್ರಾರಂಭವಾದ ಬಳಿಕ ನಿಷೇಧಿತ ಪ್ರದೇಶವಾಗಿದೆ. ಇನ್ನೊಂದು ವಿಚಿತ್ರ ಅಂದ್ರೆ ಈ ದ್ವೀಪ ಕಾರವಾರಕ್ಕೆ ಸಮೀಪ ಇದ್ರು ಗೋವಾ ರಾಜ್ಯದ ವ್ಯಾಪ್ತಿಯಲ್ಲಿದೆ. ಈ ಹಿಂದಿನಿಂದಲೂ ಇಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ದೇವಸ್ಥಾನ ಹಾಗೂ ಚರ್ಚ್ ಗಳಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಲ್ಲದೆ ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೂ ಆಗಿತ್ತು.
ಪೊರ್ಚುಗಿಸರು ಈ ಪ್ರದೇಶಲ್ಲಿ ನಿರ್ಮಿಸಿದ ಚರ್ಚ್ ನಲ್ಲಿ ಪ್ರತಿ ವರ್ಷ ಧಾರ್ಮಿಕ ಆಚರಣೆ ನಡೆಸುತ್ತಿದ್ದರೆ, ಸ್ಥಳೀಯ ಮೀನುಗಾರರು ಸೇರಿದಂತೆ ಇತರೆ ಸಮುದಾಯದವರು ಅಂಜದುರ್ಗಾ ದೇವಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದರು. ಆದರೆ 1991ರಲ್ಲಿ ಕದಂಬ ನೌಕಾನೆಲೆ ಯೋಜನೆ ವ್ಯಾಪ್ತಿಗೆ ದ್ವೀಪನ್ನು ಹಸ್ತಾಂತರಿಸಿದ್ದು, ಭದ್ರತೆ ದೃಷ್ಟಿಯಿಂದ 2000ರ ನಂತರ ಸಾರ್ವಜನಿಕರಿಗೆ ನಿರ್ಭಂದವನ್ನು ವಿಧಿಸಿತ್ತು. ಅದರಂತೆ ಅಲ್ಲಿನ ಚರ್ಚ್ ಹಾಗೂ ದೇವಸ್ಥಾನಗಳಿಗೂ ಸಾರ್ವಜನಿಕರು ಆಗಮಿಸದಂತೆ ನಿಷೇಧವನ್ನು ಹೇರಿತ್ತು.
ಬಳಿಕ ಸಾಕಷ್ಟು ಬಾರಿ ಗೋವಾ ಮೂಲಕ ಕ್ರಿಶ್ಚಿಯನ್ ಸಮುದಾಯದವರು ದ್ವೀಪಕ್ಕೆ ಭೇಟಿ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದರೂ ಅವಕಾಶ ನೀಡಿರಲಿಲ್ಲ. ಆದರೆ ಇದೀಗ ಮತ್ತೆ ಗೋವಾದ ಕೆಲ ಕ್ರಿಶ್ಚಿಯನ್ ಸಂಘಟನೆಗಳು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದು ಅಂಜುದೀವ್ ದ್ವೀಪದಲ್ಲಿರುವ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದ್ದು, ಇದು ಕಾರವಾರದ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ದೇಶದ ಹಿತದೃಷ್ಟಿಯನ್ನಿಟ್ಟುಕೊಂಡು ನಾವು ಕೂಡ ಈ ಹಿಂದೆ ಈ ಸ್ಥಳದಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ತೆರಳುವುದನ್ನು ನಿಲ್ಲಿಸಿದ್ದೇವು.‌ ಆದರೆ ಇದೀಗ ಕ್ರಿಶ್ಚಿಯನ್ನರಿಗೆ ಅಂಜುದೀವ್ ದ್ವೀಪಕ್ಕೆ ತೆರಳಲು ಅವಕಾಶ ನೀಡಿದಲ್ಲಿ ಹಿಂದೂಗಳಿಗೂ ದ್ವೀಪದಲ್ಲಿನ ದೇವಸ್ಥಾನಕ್ಕೆ ತೆರಳಲು ಅವಕಾಶ ನೀಡಬೇಕು ಎನ್ನುತ್ತಾರೆ ಹಿಂದೂ ಜಾಗರಣ ವೇದಿಕೆಯ ಬಿ.ಎಸ್.ಪೈ
ಇನ್ನು ಅಂಜುದೀವ್ ದ್ವೀಪದಲ್ಲಿ ಮೊದಲು ಅಂಜದುರ್ಗಾ ದೇವಿ ದೇವಸ್ಥಾನ ಇದ್ದಿದ್ದರಿಂದಲೇ ದ್ವೀಪಕ್ಕೆ ಅಂಜುದೀವ್ ಎನ್ನುವ ಹೆಸರು ಬಂದಿದೆ. ಆದರೆ ದ್ವೀಪದಿಂದ ನೌಕಾನೆಲೆ ಸಂಪೂರ್ಣವಾಗಿ ಕಾಣುವುದರಿಂದ ಭದ್ರತೆಯ ದೃಷ್ಟಿಯಿಂದಲೇ ದ್ವೀಪಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. ಈಗಲೂ ಸಹ ಮೊದಲಿನಂತೆಯೇ ನಿಷೇಧವನ್ನು ಮುಂದುವರೆಸಬೇಕು. ಒಂದು ಸಮುದಾಯದವರಿಗೆ ನೀಡುವುದರಿಂದ ಇನ್ನೊಂದು ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗಲಿದ್ದು, ಭದ್ರತಾ ದೃಷ್ಟಿಯಿಂದ ಯಾರಿಗೂ ದ್ವೀಪಕ್ಕೆ ಪ್ರವೇಶ ನೀಡಬಾರದು ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇನ್ನು ಅಂಜದುರ್ಗಾ ದೇವಿ ಮೀನುಗಾರರ ಆರಾಧ್ಯ ದೈವವಾಗಿದ್ದು ಈ ಹಿಂದೆ ದ್ವೀಪದಲ್ಲಿನ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮೀನುಗಾರಿಕೆಗೆ ತೆರಳುತ್ತಿದ್ದರು. ಆದರೆ ನೌಕಾನೆಲೆ ಪ್ರಾರಂಭವಾದ ಬಳಿಕ ದ್ವೀಪಕ್ಕೆ ಪ್ರವೇಶ ನಿಷೇಧಗೊಂಡ ಹಿನ್ನಲೆ ದೇಶದ ರಕ್ಷಣೆಯ ದೃಷ್ಟಿಯಿಂದ ಮೀನುಗಾರರೂ ಸಹ ದ್ವೀಪಕ್ಕೆ ತೆರಳುತ್ತಿಲ್ಲ. ಆದರೆ ಧಾರ್ಮಿಕ ವಿಚಾರವನ್ನು ಇಟ್ಟುಕೊಂಡು ಗೋವಾ ರಾಜ್ಯದ ಕೆಲ ಕ್ರಿಶ್ಚಿಯನ್ ಸಂಘಗಳು ದ್ವೀಪಕ್ಕೆ ಭೇಟಿಗೆ ಅವಕಾಶ ನೀಡುವಂತೆ ಒತ್ತಾಯಿಸಲು ಮುಂದಾಗಿರೋದು ಸಾರ್ವಜನಿಕರಿಂದ ಸಾಕಷ್ಟು ವಿರೋಧಕ್ಕೆ ಗುರಿಯಾಗಿದೆ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.