ETV Bharat / state

24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ: ಉತ್ತರಕನ್ನಡ ಜನತೆ ಹೇಳೋದೇನು? - 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ

ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಬೆನ್ನಲ್ಲೇ ಸಿದ್ದು ಸರ್ಕಾರದ ಮೇಲೆ ಉತ್ತರಕನ್ನಡ ಜಿಲ್ಲೆಯ ಜನರ ನಿರೀಕ್ಷೆಗಳೇನು? ಎಂದು ನೋಡಿ.

siddaramaiah
ಸಿದ್ದರಾಮಯ್ಯ
author img

By

Published : May 20, 2023, 12:54 PM IST

ಸಿದ್ದರಾಮಯ್ಯ ಸರ್ಕಾರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಉತ್ತರ ಕನ್ನಡ ಜಿಲ್ಲೆ ಜನ

ಕಾರವಾರ (ಉತ್ತರ ಕನ್ನಡ): ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಹಿಂದ ನಾಯಕ ಸಿದ್ದರಾಮಯ್ಯನವರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿಂದೆ 2013 ರಿಂದ 2018ರ ವರೆಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ 5 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದ ಸಿದ್ದರಾಮಯ್ಯ ಅವರು ಇದೀಗ 2ನೇ ಬಾರಿಗೆ ಆಡಳಿತ ನಡೆಸಲು ಮುಂದಾದ ಸಿದ್ದರಾಮಯ್ಯನವರ ಮೇಲೆ ಉತ್ತರಕನ್ನಡ ಜಿಲ್ಲೆಯ ಜನರ ನಿರೀಕ್ಷೆಗಳೇನು?, ಇಲ್ಲಿನ ಮಂದಿ ಏನಂತಾರೆ ? ಇಲ್ಲಿದೆ ನೋಡಿ.

"ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ಮತ್ತು ಎಲ್ಲಾ ವರ್ಗಗಳನ್ನ ಸೇರಿಸಿಕೊಂಡು ಆಡಳಿತ ನೀಡುವ ಅರ್ಹತೆ ಇರುವ ರಾಜಕಾರಣಿ ಅಂದ್ರೆ ಅದು ಸಿದ್ದರಾಮಯ್ಯ. 12 ನೇ ಶತಮಾನದ ಆಶಯಗಳನ್ನು ಇಂದಿನ ಕಾಲಮಾನದಲ್ಲಿ ಅನುಷ್ಠಾನಗೊಳಿಸಬಲ್ಲ ಹಾಗೂ ಅಂಬೇಡ್ಕರ್​ ಸಂವಿಧಾನದಂತೆ ಆಡಳಿತ ನಡೆಸುವಂತಹ ವ್ಯಕ್ತಿ. ಇವರು ಕರ್ನಾಟಕಕ್ಕೆ ದೊಡ್ಡ ಆಶಾಕಿರಣ. ಕಾಂಗ್ರೆಸ್​ ಪಕ್ಷ ನೀಡಿದ ಎಲ್ಲಾ ಭರವಸೆಗಳನ್ನು ಅವರು ಹಂತ ಹಂತವಾಗಿ ಈಡೇರಿಸುತ್ತಾರೆ ಎನ್ನುವ ಭರವಸೆ ಇದೆ. ರಾಜ್ಯದ ಆರ್ಥಿಕ ಸ್ಥಿತಿ ಮತ್ತು ಹಿಂದಿನ ಸರ್ಕಾರ ಮಾಡಿರುವ ಸಾಲವನ್ನು ನಿಭಾಯಿಸಲು ಕೆಲವು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಬೇಕಾಗುತ್ತದೆ. ಈ ಆರ್ಥಿಕ ಸುಧಾರಣೆಗಳನ್ನು ಕ್ರೋಢಿಕರಿಸಿಕೊಂಡು ಜನಸಾಮನ್ಯರಿಗೆ ಹೊರೆಯಾಗದ ರೀತಿಯಲ್ಲಿ ಸರ್ಕಾರ ನಡೆಸುತ್ತಾರೆ" ಎನ್ನುತ್ತಾರೆ ಸಾಹಿತಿ ನಾಗರಾಜ ಹರಪನಹಳ್ಳಿ.

ಇದನ್ನೂ ಓದಿ : 8 ಮಂದಿ ಸಚಿವರೊಂದಿಗೆ ಇಂದು ಸಿಎಂ, ಡಿಸಿಎಂ ಪದಗ್ರಹಣ: ಮತ್ತೆ ದೆಹಲಿಗೆ ತೆರಳಲಿರುವ ನಾಯಕರು

ಕಾರವಾರ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಕೂಡ ಅಭಿಪ್ರಾಯ ವ್ಯಕ್ತಪಡಿಸಿ, "ಸಿದ್ದರಾಮಯ್ಯನವರು ಸಿಎಂ ಆಗುತ್ತಿರುವುದು ಖುಷಿಯ ವಿಚಾರ. ಅವರ ಆಡಳಿತವನ್ನ ನಾವು ಕಂಡಿದ್ದೇವೆ. ಬಹಳ ಅದ್ಭುತವಾಗಿ ಆಡಳಿತ ನಡೆಸಿ ಐದು ವರ್ಷಗಳನ್ನು ಪೂರ್ಣಗೊಳಿಸಿರುವ ಒಬ್ಬ ಯಶಸ್ವಿ ಮುಖ್ಯಮಂತ್ರಿ. ಅವರ ಆಡಳಿತದಲ್ಲಿ ಅವರ ಮೇಲೆ ಯಾವುದೇ ಕಪ್ಪು ಚುಕ್ಕೆಗಳಿರಲಿಲ್ಲ. ಯಾವುದೇ ಭ್ರಷ್ಟಾಚಾರದ ಆರೋಪಗಳೂ ಇಲ್ಲ. ಬಡವರ, ಅಹಿಂದರ, ದೀನ - ದಲಿತರ ಪರವಾಗಿ ಇದ್ದಂಥವರು ಅವರು" ಎಂದರು.

ಇದನ್ನೂ ಓದಿ : ಪ್ರಮಾಣ ವಚನ ಕಾರ್ಯಕ್ರಮ.. ಪ್ರವೇಶ ದ್ವಾರದಲ್ಲಿ ನೂಕುನುಗ್ಗಲು, ಲಘು ಲಾಠಿ ಚಾರ್ಜ್, ಇನ್ಸ್​ಪೆಕ್ಟರ್​ ಸೇರಿ ಮೂವರಿಗೆ ಗಾಯ

ಇನ್ನು ಕಾರವಾರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, "ಸಿದ್ದರಾಮಯ್ಯನವರು ಈ ಹಿಂದೆ ಸಿಎಂ ಆಗಿದ್ದಾಗ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳಿಗೆ ಉತ್ತಮ ಯೋಜನೆಗಳನ್ನು ನೀಡಿದ್ದರು. ಆದ್ರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಎಲ್ಲಾ ಸೌಲಭ್ಯಗಳನ್ನು ರದ್ದು ಮಾಡಿತು. ಇಂತಹ ರಾಜಕಾರಣಿ ರಾಜ್ಯಕ್ಕೆ ಬೇಕು. ಸಿದ್ದರಾಮಯ್ಯನವರ ಮೇಲೆ ಭಾರೀ ನಿರೀಕ್ಷೆ ಇದೆ. ಕಾಂಗ್ರೆಸ್​ ಪಕ್ಷ ನೀಡಿದ ಐದು ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ನೀಡುತ್ತಾರೆ. ಒಂದು ವರ್ಷದದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ, ಈ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್​ ಬಹುಮತದಿಂದ ಗೆಲ್ಲಲಿದೆ. ಮಹಿಳೆಯರು, ಯುವಕರು ಎಲ್ಲರೂ ಸಿದ್ದರಾಮಯ್ಯನವರಿಗೆ ಬೆಂಬಲ ನೀಡುತ್ತಾರೆ." ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.