ETV Bharat / state

ಭಟ್ಕಳದಲ್ಲಿ ಕ್ವಾರಂಟೈನ್​ ಕೇಂದ್ರದ ಸ್ವಲ್ಪ ದೂರದಲ್ಲೇ ಪಿಯು ಪರೀಕ್ಷೆ: ಪಾಲಕರ ಅಸಮಾಧಾನ - ದ್ವಿತೀಯ ಪಿಯುಸಿ ಇಂಗ್ಲಿಷ್​ ಪರೀಕ್ಷೆ

ಭಟ್ಕಳದಲ್ಲಿ ಇಂದು ದ್ವಿತೀಯ ಪಿಯುಸಿ ಇಂಗ್ಲಿಷ್​ ಪರೀಕ್ಷೆ ಹಿನ್ನೆಲೆ ತಮ್ಮ ಮಕ್ಕಳನ್ನು ಪಾಲಕರು ಬಿಡಲು ಬಂದಾಗ ಕಾಲೇಜಿನ ಮುಖ್ಯದ್ವಾರದಲ್ಲೇ ಪೊಲೀಸರು ತಡೆದು ನಿಲ್ಲಿಸಿದಕ್ಕೆ ಕೆಲ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

dwq
ಭಟ್ಕಳದಲ್ಲಿ ಕ್ವಾರಂಟೈನ್​ ಕೇಂದ್ರದ ಸ್ವಲ್ಪ ದೂರದಲ್ಲೇ ದ್ವೀತಿಯ ಪಿಯು ಪರೀಕ್ಷೆ
author img

By

Published : Jun 18, 2020, 10:01 PM IST

ಭಟ್ಕಳ: ದುಬೈನಿಂದ ಭಟ್ಕಳಕ್ಕೆ ಬಂದವರನ್ನು ಕ್ವಾರಂಟೈನನಲ್ಲಿರಿಸಿರುವ ಅಂಜುಮಾನ್ ಹಾಸ್ಟೆಲ್ ಕಟ್ಟಡದ ಸಮೀಪವಿರುವ ಅಂಜುಮಾನ್ ಪಿಯು ಕಾಲೇಜು ಹಾಗೂ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಕಟ್ಟಡದಲ್ಲಿ ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ನಡೆಸಿರುವ ಬಗ್ಗೆ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಟ್ಕಳದಲ್ಲಿ ಕ್ವಾರಂಟೈನ್​ ಕೇಂದ್ರದ ಸ್ವಲ್ಪ ದೂರದಲ್ಲೇ ದ್ವೀತಿಯ ಪಿಯು ಪರೀಕ್ಷೆ

ಜೂನ್ 13 ರಂದು ದುಬೈನಿಂದ ಭಟ್ಕಳಕ್ಕೆ ಬಂದಿರುವ 184 ಜನರಲ್ಲಿ 49 ಜನರನ್ನು ತಾಲೂಕಿನ ಅಂಜುಮನ್ ಕಾಲೇಜಿನ ಹಾಷ್ಟೆಲ್​ನಲ್ಲಿ ಕ್ವಾರಂಟೈನ್​ ಮಾಡಲಾಗಿದೆ. ಆದರೆ ಈ ಕಟ್ಟಡ ಸಮೀಪವಿರುವ ಅಂಜುಮನ್ ಪಿಯು ಕಾಲೇಜು ಹಾಗೂ ಅಂಜುಮನ್ಎಂಜಿನಿಯರಿಂಗ್ ಕಾಲೇಜಗಳ ನಡುವೆ ಇದ್ದು ಪಾಲಕರಲ್ಲಿ ಭಯವನ್ನುಂಟು ಮಾಡಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಶಿಲ್ದಾರ್​ ಎಸ್. ರವಿಚಂದ್ರ ಕ್ವಾರಂಟೈನ್​ ಮಾಡಲಾದ ಅಂಜುಮನ್​ ಹಾಸ್ಟೆಲ್​ಗೂ ಪರೀಕ್ಷಾ ಕೇಂದ್ರಗಳಿಗೂ ಯಾವುದೇ ಸಂಪರ್ಕ ಇಲ್ಲ. 600 ರಿಂದ 800 ಮೀಗಳಷ್ಟು ದೂರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಈ ಮೊದಲೇ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದರು. ತಾಲೂಕಿನಲ್ಲಿ ಒಟ್ಟು 4 ಪರೀಕ್ಷೆ ಕೇಂದ್ರಗಳಿದ್ದು, ಈ ಪೈಕಿ ವಿಶೇಷವಾಗಿ ಅಂಜುಮನ್ ಪರೀಕ್ಷಾ ಕೇಂದ್ರಕ್ಕೆ ಹೆಚ್ಚಿನ ಪೊಲೀಸ್​ ಭದ್ರತೆ ನೀಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.