ETV Bharat / state

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಮಹಾದೇವ ವೇಳಿಪ ನಿಧನ - mahadeva velipa passed away

2021ರಲ್ಲಿ ಜಾನಪದ ರಾಜ್ಯ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಮಹಾದೇವ ವೇಳಿಪ ಅವರು ಇಂದು ನಿಧನರಾಗಿದ್ದಾರೆ.

karwar
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾದೇವ ವೇಳಿಪ ನಿಧನ
author img

By

Published : Feb 10, 2022, 12:39 PM IST

ಕಾರವಾರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ, ಜನಪದ ಕಲಾವಿದ ಮಹಾದೇವ ವೇಳಿಪ (90) ಇಂದು ಮುಂಜಾನೆ ನಿಧನ ಹೊಂದಿದ್ದಾರೆ.

ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಟೋಳಿ ಗ್ರಾಮದ ಮಹಾದೇವ ವೇಳಿಪ ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಜನಪದ ಕಲೆ ಹಾಗೂ ಪರಿಸರ ರಕ್ಷಣೆಗೆ ಜಾನಪದ ರಾಜ್ಯ ಪ್ರಶಸ್ತಿ ಹಾಗೂ 2021ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ವೇಳಿಪ, ನೂರಾರು ಬಗೆಯ ಗೆಡ್ಡೆ-ಗೆಣಸುಗಳನ್ನು ಉಳಿಸಿ ಬೆಳೆಸುವ ಜೊತೆಗೆ ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಬುಡಕಟ್ಟು ಕುಣುಬಿ ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಅವರು ಈ ಬಗ್ಗೆ ಸಾವಿರಾರು ಜನಪದ ಹಾಡುಗಳನ್ನು ರಚಿಸಿ ಹಾಡುತ್ತಿದ್ದರು.

ಪರಿಸರ ಸಮತೋಲನೆಯಲ್ಲಿ ಒಣಗು ಹಾಗೂ ಉಂಬಳಗಳ ಪಾತ್ರ ಮಹತ್ವದ್ದಾಗಿದೆ ಎಂದು ನಂಬಿದ್ದ ವೇಳಿಪ ಅವರು ಕಾಡುಗಳಿಂದ ತರಗೆಲೆಗಳನ್ನು ತರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಜೇನುನೊಣಗಳ ರಕ್ಷಣೆ ಮಾಡುತ್ತಿದ್ದು, ಹಕ್ಕಿಗಳ ಕೂಗು ಕೇಳಿಯೇ ನಿಖರ ಸಮಯ ಹೇಳುವ ಕಲೆಯೂ ಇವರಿಗೆ ಕರಗತವಾಗಿತ್ತು.

ಇದನ್ನೂ ಓದಿ: ಹಿಜಾಬ್ ವಿವಾದ: ಶಾಲಾ, ಕಾಲೇಜು ರಜೆ ವಿಸ್ತರಣೆ ಬಗ್ಗೆ ಸಂಜೆ ಸಭೆಯಲ್ಲಿ ತೀರ್ಮಾನ- ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.