ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿಂದು ಸೋಂಕಿನಿಂದ ಗುಣಮುಖರಾಗಿ ಏಳು ಮಂದಿ ಬಿಡುಗಡೆಯಾದ ಬೆನ್ನಲ್ಲೆ ಎಂಟು ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
4 ಪುರುಷರು ಮತ್ತು 4 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ದೆಹಲಿಯಿಂದ ಆಗಮಿಸಿದ 17 ವರ್ಷದ ಯುವಕ, 43 ವರ್ಷದ ಮಹಿಳೆ, ಮಹರಾಷ್ಟ್ರದಿಂದ ಆಗಮಿಸಿದ್ದ 69 ಹಾಗೂ 42 ವರ್ಷದ ಮಹಿಳೆ, 14 ವರ್ಷದ ಬಾಲಕ, 19 ವರ್ಷದ ಯುವತಿ, 45 ವರ್ಷದ ಪುರುಷ ಮತ್ತು ಉತ್ತರ ಪ್ರದೇಶದಿಂದ ಹಿಂತಿರುಗಿದ 50 ವರ್ಷದ ಪುರುಷನಲ್ಲಿ ಸೊಂಕು ಇರುವುದು ಧೃಡಪಟ್ಟಿದೆ.
ಇದೀಗ ಸೊಂಕಿತರನ್ನು ಕಾರವಾರದ ಕಿಮ್ಸ್ ಅಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 138 ಸೊಂಕಿತರು ಪತ್ತೆಯಾಗಿದ್ದು, 106 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 32 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.