ETV Bharat / state

ಮಾರ್ಚ್​ ಅಂತ್ಯದವರೆಗೂ ಶಿಕ್ಷಕರಿಗೆ ಯಾವುದೇ ತರಬೇತಿ ಇಲ್ಲ: ಸಚಿವ ಸುರೇಶ್​​​​ ಕುಮಾರ್​​​​​​​​ - ಶಿಕ್ಷಣ ಸಚಿವ ಸುರೇಶ್​ ಕುಮಾರ್

ತರಬೇತಿಗಳಿಂದಾಗಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಮಾರ್ಚ್ ಅಂತ್ಯದವರೆಗೂ ಶಿಕ್ಷಕರಿಗೆ ಯಾವುದೇ ತರಬೇತಿ ನಡೆಸುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಹೇಳಿದ್ದಾರೆ.

suresh kumar
ಸುರೇಶ್​ ಕುಮಾರ್
author img

By

Published : Dec 28, 2019, 10:05 PM IST

ಕಾರವಾರ: ಶಾಲಾ ಮಕ್ಕಳ ಬೋಧನಾ ಹಿತದೃಷ್ಟಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಮಾರ್ಚ್​ವರೆಗೆ ಯಾವುದೇ ರೀತಿಯ ತರಬೇತಿ ಆಯೋಜಿಸದೆ ಕೇವಲ ಶಾಲೆಗಳಲ್ಲಿ ಪಾಠ ಹೇಳಲು ಮಾತ್ರ ಸೀಮಿತಗೊಳಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಹೇಳಿದರು.

ಸಚಿವ ಸುರೇಶ್​ ಕುಮಾರ್

ಹೊನ್ನಾವರದ ನ್ಯೂ ಇಂಗ್ಲಿಷ್​​​ ಶಾಲೆಗೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಯನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದು ಅವರು ಹೇಳುವುದರಲ್ಲಿ ಅರ್ಥವಿದೆ. ತರಬೇತಿಗಳಿಂದಾಗಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಮಾರ್ಚ್ ಅಂತ್ಯದವರೆಗೂ ಶಿಕ್ಷಕರಿಗೆ ಯಾವುದೇ ತರಬೇತಿ ನಡೆಸುವುದಿಲ್ಲ. ಈ ಸಮಯವನ್ನು ಕೇವಲ ಮಕ್ಕಳ ಪಾಠಕ್ಕಾಗಿ ಸೀಮಿತವಾಗಿಸುವಂತೆ ನಮ್ಮ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಓದಿನೆಡೆಗೆ ಪ್ರೇರೆಪಿಸಲಾಗುತ್ತಿದೆ. ಕ್ವಿಜ್​, ಕೌನ್ ಬನೆಗಾ ಕರೋಡ್​ಪತಿ ಮಾದರಿಯಲ್ಲಿ ಕೌನ್ ಬನೆಗಾ ಗಣಿತಾಧಿಪತಿ ಎಂಬ ವಿಶಿಷ್ಟ ಚಟುವಟಿಕೆಗಳ ಮೂಲಕ ಮಕ್ಕಳು ಉತ್ತಮ ಅಂಕ ಪಡೆಯುವಂತಾಗಲು ಪ್ರಯೋಗ ನಡೆಸಲಾಗಿದ್ದು, ಕಲಿಕೆಯಲ್ಲಿ ಆಸಕ್ತಿ ತಂದು ಫಲಿತಾಂಶ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ಈಗಾಗಲೇ ಎಲ್ಲ ಖಾಸಗಿ ಶಾಲೆಗಳಿಗೆ ತಮ್ಮ ವೆಬ್​ಸೈಟ್​ಗಳಲ್ಲಿ ಪಡೆಯುವ ಶುಲ್ಕಗಳನ್ನು ಪ್ರಕಟಿಸಲು ಸೂಚಿಸಲಾಗಿದೆ. ಯಾರು ಹೆಚ್ಚುವರಿ ಶುಲ್ಕ ಪಡೆಯುತ್ತಾರೋ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಕಮೀಷನರ್ ಕ್ರಮ ಕೈಗೊಳ್ಳುವ ಬಗ್ಗೆ ಎಲ್ಲ ಶಾಲೆಗಳಿಗೂ ಸೂಚಿಸಿದ್ದಾರೆ ಎಂದು ಹೇಳಿದರು.

ಏಳನೇ ತರಗತಿ ಪಬ್ಲಿಕ್ ಪರೀಕ್ಷೆ ಬಗ್ಗೆ ಯಾವುದೇ ಆತಂಕ ಬೇಡ. ಇತ್ತೀಚೆಗೆ ಎಸ್ಎಸ್ಎಲ್​ಸಿವರೆಗೆ ಯಾವುದೇ ಕಟ್ಟುನಿಟ್ಟಾದ ಪರೀಕ್ಷೆ ಇಲ್ಲದ ಕಾರಣ ಮಕ್ಕಳು ಪರಿಕ್ಷೆಗೆ ಕೂರದೆಯೂ ನೇರವಾಗಿ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯುತ್ತಾರೆ. ಇಂತವರಿಗೆ ಪರೀಕ್ಷೆಯ ಅನುಭವವೇ ಇರುವುದಿಲ್ಲ. ಇಂತವರ ಶಿಕ್ಷಣಮಟ್ಟವನ್ನು ಉತ್ತಮಪಡಿಸಲು ಈ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇನ್ನು ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಮಕ್ಕಳಿಗೆ ಪಾಠ ಮಾಡಿದ ಅವರು, ಟ್ಯೂಷನ್ ತೆರಳುವ ಬಗ್ಗೆ, ಎಸ್ಎಸ್ಎಲ್​ಸಿ ಪರೀಕ್ಷೆಯ ಸಿದ್ಧತೆ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿ ತಿಳಿದುಕೊಂಡರು.

Intro:

Body:kn_kwr_03_minister_sureshkumar_statement_7202800

ಕಾರವಾರ: ಶಾಲಾ ಮಕ್ಕಳ ಭೋದನಾ ಹಿತದೃಷ್ಠಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಮಾರ್ಚ್ ವರೆಗೆ ಯಾವುದೇ ರಿತಿಯ ತರಬೇತಿ ಆಯೋಜಿಸದೇ ಕೇವಲ ಶಾಲೆಗಳಲ್ಲಿ ಪಾಠ ಹೇಳಲು ಮಾತ್ರ ಸೀಮಿತಗೊಳಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶಕುಮಾರ್ ಹೇಳಿದರು.
ಹೊನ್ನಾವರದ ನ್ಯೂ ಇಂಗ್ಲೀಷ್ ಶಾಲೆಗೆ ಭೇಟಿ ನೀಡಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಶಿಕ್ಷಕರ ಸಮಸ್ಯೆಯನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದು, ಅವರು ಹೇಳುವುದರಲ್ಲಿ ಅರ್ಥವಿದೆ. ತರಬೇತಿಗಳಿಂದಾಗಿ ಮಕ್ಕಳಿಗೆ ಸರಿಯಾಗಿ ಪಾಠಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಮಾರ್ಚ್ ಅಂತ್ಯದವರೆಗೂ ಶಿಕ್ಷಕರಿಗೆ ಯಾವುದೇ ತರಬೇತಿ ನಡೆಸುವುದಿಲ್ಲ. ಈ ಸಮಯವನ್ನು ಕೇವಲ ಮಕ್ಕಳ ಪಾಠಕ್ಕಾಗಿ ಸೀಮಿತವಾಗಿಸುವಂತೆ ನಮ್ಮ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಓದಿನೆಡೆಗೆ ಪ್ರೇರೆಪಿಸಲಾಗುತ್ತಿದೆ. ಕ್ವೀಜ್, ಕೌನ್ ಬನೆಗಾ ಕರೋಡಪತಿ ಮಾದರಿಯಲ್ಲಿ ಕೌನ್ ಬನೆಗಾ ಗಣಿತಾದಪತಿ ಎಂಬ ವಿಶಿಷ್ಟ ಚಟುವಟಿಕೆಗಳ ಮೂಲಕ ಮಕ್ಕಳು ಉತ್ತಮ ಅಂಕಪಡೆಯುವಂತಾಗಲು ಪ್ರಯೋಗ ನಡೆಸಲಾಗಿದ್ದು, ಕಲಿಕೆಯಲ್ಲಿ ಆಸಕ್ತಿ ತಂದು ಫಲಿತಾಂಶ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ಈಗಾಗಲೇ ಎಲ್ಲ ಖಾಸಗಿ ಶಾಲೆಗಳಿಗೆ ತಮ್ಮ ವೆಬ್ ಸೈಟ್ ಗಳಲ್ಲಿ ಒಡೆಯುವ ಶುಲ್ಕಗಳನ್ನು ಪ್ರಕಟಿಸಲು ಸೂಚಿಸಲಾಗಿದೆ. ಯಾರು ಹೆಚ್ಚುವರಿ ಶುಲ್ಕ ಪಡೆಯುತ್ತಾರೊ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಕಮೀಷನರ್ ಕ್ರಮ ಕೈಗೊಳ್ಳುವ ಬಗ್ಗೆ ಎಲ್ಲ ಶಾಲೆಗಳಿಗೂ ಸೂಚಿಸಿದ್ದಾರೆ ಎಂದು ಹೇಳಿದರು.
ಏಳನೇ ತರಗತಿ ಪಬ್ಲಿಕ್ ಪರೀಕ್ಷೆ ಬಗ್ಗೆ ಯಾವುದೇ ಆತಂಕ ಬೇಡ. ಇತ್ತೀಚೆಗೆ ಎಸ್ಎಸ್ಎಲ್ಸಿ ವರೆಗೆ ಯಾವುದೇ ಕಟ್ಟುನಿಟ್ಟಾದ ಪರೀಕ್ಷೆ ಇಲ್ಲದ ಕಾರಣ ಮಕ್ಕಳು ಪರಿಕ್ಷೆಗೆ ಕುಳ್ಳದೆಯೂ ನೆರವಾಗಿ ಎಸ್ಎಸ್ ಎಲ್ ಸಿ ಪರೀಕ್ಷೆಗೆ ಬರೆಯುತ್ತಾರೆ. ಇಂತವರಿಗೆ ಪರೀಕ್ಷೆಯ ಅನುಭವವೇ ಇರುವುದಿಲ್ಲ. ಇಂತವರ ಶಿಕ್ಷಣಮಟ್ಟವನ್ನು ಉತ್ತಮಪಡಿಸಲು ಈ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಇನ್ನು ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಮಕ್ಕಳಿಗೆ ಪಾಠ ಮಾಡಿದ ಅವರು, ಟ್ಯೂಷನ್ ತೆರಳುವ ಬಗ್ಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಿದ್ದತೆ ಬಗ್ಗೆ ಹಲವು ಪ್ರಶ್ನಿಗಳನ್ನು ಕೇಳಿ ತಿಳಿದುಕೊಂಡರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.