ETV Bharat / state

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಟ್ಕಳ ದೇವಸ್ಥಾನಕ್ಕೆ ಕಸದ ತೊಟ್ಟಿ (ಡಸ್ಟ್ ಬಿನ್) ವಿತರಣೆ

ಇಂದು ಆಸರಕೇರಿ ಶ್ರೀ ತಿರುಮಲ ವೆಂಕಟರಮಣ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ದೇವಾಲಯಗಳಿಗೆ ಕಸದ ತೊಟ್ಟಿ (ಡಸ್ಟ್ ಬಿನ್)ಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು,. ಉತ್ತರ ಕನ್ನಡ ಜಿಲ್ಲೆಯ 301 ದೇವಾಲಯಗಳಿಗೆ ಕಸದ ತೊಟ್ಟಿಯನ್ನು ವಿತರಿಸಲಾಯಿತು.

Dust bin distribution to Bhatkal Temple by Dharmasthala Rural Development Project
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಟ್ಕಳ ದೇವಸ್ಥಾನಕ್ಕೆ ಕಸದ ತೊಟ್ಟಿ (ಡಸ್ಟ್ ಬಿನ್) ವಿತರಣೆ
author img

By

Published : Feb 2, 2020, 4:17 PM IST

ಭಟ್ಕಳ: ಪುರಸಭೆ ವತಿಯಿಂದ ನಗರ ಸ್ವಚ್ಛತೆಯನ್ನು ಮಾಡುತ್ತಿದ್ದು, ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಪುರಸಭಾ ಆರೋಗ್ಯಾಧಿಕಾರಿ ಸುಜಯಾ ಸೋಮನ್ ಹೇಳಿದರು.

ಇಂದು ಆಸರಕೇರಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ದೇವಾಲಯಗಳಿಗೆ ಕಸದ ತೊಟ್ಟಿ (ಡಸ್ಟ್ ಬಿನ್)ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಜಯಾ ಸೋಮನ್, ಜನತೆಯಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ಹಾಗೂ ಅವುಗಳನ್ನು ಪ್ರತ್ಯೇಕವಾಗಿಟ್ಟು ಪುರಸಭಾ ವಾಹನಗಳಿಗೆ ನೀಡುವ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇವೆ. ಜೊತೆಗೆ ಮನೆಯಲ್ಲಿ ತಾಯಂದಿರು ಚಿಕ್ಕ ಮಕ್ಕಳಿಗೆ ಸ್ವಚ್ಛತೆಯ ಕುರಿತು ತಿಳಿ ಹೇಳಬೇಕಾಗುತ್ತದೆಯೆಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಟ್ಕಳ ದೇವಸ್ಥಾನಕ್ಕೆ ಕಸದ ತೊಟ್ಟಿ (ಡಸ್ಟ್ ಬಿನ್) ವಿತರಣೆ

ಈಗಾಗಲೇ ಭಟ್ಕಳ ನಗರದಾದ್ಯಂತ 5 ವಾಹನಗಳನ್ನು ಕಸ ಸಂಗ್ರಹಣೆಗೆ ಮೀಸಲಿಡಲಾಗಿದ್ದು, ಕಸವನ್ನು ಎಸೆಯದೇ ಪುರಸಭೆಯ ವಾಹನಕ್ಕೆ ನೀಡಬೇಕು. ನಾವು ಸ್ವಚ್ಛತೆಯನ್ನು ಕಾಪಾಡುವ ಮೂಲಕ ನಮ್ಮ ಯುವ ಪೀಳಿಗೆಗೆ ಅದನ್ನು ಕಲಿಸುವುದು ಅಗತ್ಯ ಎಂದರು. ದೇವಾಲಯಗಳಲ್ಲಿ ಸಂಗ್ರಹವಾಗುವ ಕಸಗಳನ್ನು ಪುರಸಭೆ, ಪಂಚಾಯತ್‍ಗಳು ಸಂಗ್ರಹ ಮಾಡಲು ಬದ್ಧ ಎಂದ ಅವರು ಹಸಿ ಮತ್ತು ಒಣ ಕಸಗಳನ್ನು ಬೇರೆ ಬೇರೆ ಮಾಡುವುದರಿಂದ ಪರಿಸರವನ್ನು ಕಾಪಾಡಿದಂತಾಗುತ್ತದೆಯೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯೋಜನಾಧಿಕಾರಿ ಎಂ.ಎಸ್ ಈಶ್ವರ ಅವರು ಮಾತನಾಡಿ, ಯೋಜನೆಯ ವತಿಯಿಂದ ಒಂದು ಸಾವಿರ ದೇವಸ್ಥಾನಗಳಿಗೆ ತಲಾ ಎರಡರಂತೆ ಕಸದ ತೊಟ್ಟಿಯನ್ನು ನೀಡಲಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ 301 ದೇವಾಲಯಗಳಿಗೆ ಕಸದ ತೊಟ್ಟಿಯನ್ನು ನೀಡಲಾಗುತ್ತಿದೆ. ಭಟ್ಕಳ-ಹೊನ್ನಾವರ ಕಾರ್ಯಕ್ಷೇತ್ರದ 51 ದೇವಾಲಯಗಳಿಗೆ ನೀಡಲಾಗಿದ್ದು, ಇದು ಸದುಪಯೋಗವಾಗಲಿ ಎಂದರು. ಪ್ರತೀ ವರ್ಷ ರಾಜ್ಯದ ಸುಮಾರು 7277 ಶ್ರದ್ಧಾ ಕೇಂದ್ರಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು 2.54 ಲಕ್ಷ ಸ್ವಚ್ಛ ಸೇನಾನಿಗಳು ಸೇರಿ ಮಾಡುತ್ತಿದ್ದಾರೆ ಎಂದರು.

Intro:ಭಟ್ಕಳ: ಪುರಸಭೆಯ ವತಿಯಿಂದ ನಗರ ಸ್ವಚ್ಛತೆಯನ್ನು ಆದ್ಯತೆಯ ಮೇರೆಗೆ ಮಾಡುತ್ತಿದ್ದು ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಪುರಸಭಾ ಆರೋಗ್ಯಾಧಿಕಾರಿ ಸುಜಯಾ ಸೋಮನ್ ಹೇಳಿದರು.
Body:ಅವರು ಭಾನುವಾರದಂದು ಇಲ್ಲಿನ ಆಸರಕೇರಿ ಶ್ರೀ ತಿರುಮಲ ವೆಂಕಟರಮಣ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ದೇವಾಲಯಗಳಿಗೆ ಕಸದ ತೊಟ್ಟಿ (ಡಸ್ಟ್ ಬಿನ್)ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

‘ಜನತೆಯಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ಹಾಗೂ ಅವುಗಳನ್ನು ಪ್ರತ್ಯೇಕವಾಗಿಟ್ಟು ಪುರಸಭಾ ವಾಹನಗಳಿಗೆ ನೀಡುವ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇವೆ. ಮನೆಯಲ್ಲಿ ತಾಯಂದಿರು ಚಿಕ್ಕ ಮಕ್ಕಳಿಗೆ ಸ್ವಚ್ಚತೆಯ ಕುರಿತು ತಿಳಿ ಹೇಳಬೇಕಾಗುತ್ತದೆ. ಈಗಾಗಲೇ ಭಟ್ಕಳದ ನಗರದಾದ್ಯಂತ 5 ವಾಹನಗಳನ್ನು ಕಸ ಸಂಗ್ರಹಣೆಗೆ ಮೀಸಲಿಡಲಾಗಿದೆ. ಕಸವನ್ನು ಎಸೆಯದೇ ಪುರಸಭೆಯ ವಾಹನಕ್ಕೆ ನೀಡಬೇಕು. ನಾವು ಸ್ವಚ್ಚತೆಯನ್ನು ಕಾಪಾಡುವ ಮೂಲಕ ನಮ್ಮ ಯುವ ಪೀಳಿಗೆಗೆ ಅದನ್ನು ಕಲಿಸುವುದು ಅಗತ್ಯ ಎಂದರು. ದೇವಾಲಯಗಳಲ್ಲಿ ಸಂಗ್ರಹವಾಗುವ ಕಸಗಳನ್ನು ಪುರಸಭೆ, ಪಂಚಾಯತ್‍ಗಳು ಸಂಗ್ರಹ ಮಾಡಲು ಬದ್ಧ ಎಂದ ಅವರು ಹಸಿ ಮತ್ತು ಒಣ ಕಸಗಳನ್ನು ಬೇರೆ ಬೇರೆ ಮಾಡುವುದರಿಂದ ಪರಿಸರವನ್ನು ಕಾಪಾಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯೋಜನಾಧಿಕಾರಿ ಎಂ.ಎಸ್.ಈಶ್ವರ ಅವರು ಮಾತನಾಡಿ ಯೋಜನೆಯ ವತಿಯಿಂದ ಒಂದು ಸಾವಿರ ದೇವಸ್ಥಾನಗಳಿಗೆ ತಲಾ ಎರಡರಂತೆ ಕಸದ ತೊಟ್ಟಿಯನ್ನು ನೀಡಲಾಗುತ್ತಿದ್ದು ಉತ್ತರ ಕನ್ನಡ ಜಿಲ್ಲೆಯ 301 ದೇವಾಲಯಗಳಿಗೆ ನೀಡಲಾಗುತ್ತಿದೆ. ಭಟ್ಕಳ-ಹೊನ್ನಾವರ ಕಾರ್ಯಕ್ಷೇತ್ರದ 51 ದೇವಾಲಯಗಳಿಗೆ ನೀಡಲಾಗಿದ್ದು ಇದರ ಸದುಪಯೋಗವಾಗಲಿ ಎಂದರು. ಪ್ರತಿ ವರ್ಷ ರಾಜ್ಯದ ಸುಮಾರು 7277 ಶೃದ್ಧಾ ಕೇಂದ್ರಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು 2.54 ಲಕ್ಷ ಸ್ವಚ್ಛ ಸೇನಾನಿಗಳು ಸೇರಿ ಮಾಡುತ್ತಿದ್ದಾರೆ ಎಂದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತೀಶ್ ಶೇಟ್, ತಿರುಮಲ ವೆಂಕಟರಮಣ ದೇವಾಲಯದ ಸದಸ್ಯ ಶ್ರೀಧರ ನಾಯ್ಕ ಆಸರಕೇರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿದರು. 

ವೇದಿಕೆಯಲ್ಲಿ ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಎಚ್.ಬಿ.ಕುಡಗುಂಟಿ, ಶಿವರಾಮ ನಾಯ್ಕ, ಶ್ರೀಕಾಂತ ನಾಯ್ಕ, ದಿನೇಶ ನಾಯ್ಕ ಮುಂಡಳ್ಳಿ ಮುಂತಾದವರು ಉಪಸ್ಥಿತರಿದ್ದರು.

ನಂತರ ಆಗಮಿಸಿದ್ದ ದೇವಾಲಯಗಳ ಧರ್ಮದರ್ಶಿಗಳಿಗೆ ಕಸದ ಬುಟ್ಟಿಗಳನ್ನು ಹಸ್ತಾಂತರಿಸಲಾಯಿತು. ರಾಧಾ ಮೊಗೇರ ಪ್ರಾರ್ಥಿಸಿದರು. ಯೋಜನೆಯ ಭರತ್ ನಿರೂಪಿಸಿದರು. ದೀಪಾ ವಂದಿಸಿದರು.

ಬೈಟ್: ಸುಜಯಾ ಸೋಮನ್ ಪುರಸಭಾ ಆರೋಗ್ಯಾಧಿಕಾರಿ

ಬೈಟ್: ಎಂ.ಎಸ್.ಈಶ್ವರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ
Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.