ETV Bharat / state

ನಿಷ್ಕ್ರಿಯವಾಗಿರುವ ಉತ್ತರ ಕನ್ನಡ ಜಿಲ್ಲೆಯ ಸಾಂಬಾರ ಮಂಡಳಿ: ಇಲ್ಲಿ ಕೊರತೆಗಳೇ ಹೆಚ್ಚು - ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವೈಜ್ಞಾನಿಕವಾಗಿ ರೈತರನ್ನು ಹೇಗೆ ಪ್ರೋತ್ಸಾಹಿಸಬಹುದು, ರೈತರು ಬೆಳೆಯುತ್ತಿರುವ ಬೆಳೆಯಲ್ಲೇ ಯಾವುದಕ್ಕೆ ಸಹಾಯಧನ ನೀಡಬಹುದು ಎಂಬುದನ್ನು ಸಮರ್ಪಕವಾಗಿ ಅವಲೋಕಿಸದೇ ಇರುವುದು ಸಂಬಾರ ಮಂಡಳಿ ಕಾರ್ಯ ಚಟುವಟಿಕೆ ಮರೆಯಾಗುತ್ತಿರುವುದಕ್ಕೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Sambaru Board of Uttara Kannada District
ಉತ್ತರ ಕನ್ನಡ ಜಿಲ್ಲೆಯ ಸಾಂಬಾರು ಮಂಡಳಿ
author img

By

Published : Jul 4, 2022, 7:17 AM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಬಾರ ಬೆಳೆಗಳನ್ನು ಉತ್ತೇಜಿಸಲು ಇರುವ ಸಂಬಾರ ಮಂಡಳಿಗೆ ಸರ್ಕಾರದಿಂದ ಕನಿಷ್ಠ ಅನುದಾನ ಲಭ್ಯವಾಗುತ್ತಿದೆ. ಇದು ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಒಂದೆಡೆ ಕೇಂದ್ರ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ ಸಂಬಾರ ಪದಾರ್ಥಗಳಿಗೆ ಉತ್ತೇಜನ ನೀಡುತ್ತಿದೆ. ಆದರೆ ಇನ್ನೊಂದೆಡೆ ಅನುದಾನದ ಕೊರತೆ, ಸಾಂಬಾರ ಮಂಡಳಿಯ ನಿಷ್ಕ್ರಿಯತೆ, ಸಿಬ್ಬಂದಿ ಕೊರತೆಯಿಂದ ಬೆಳೆಗಾರರು ಸೌಲಭ್ಯ ವಂಚಿತರಾಗುತ್ತಿದ್ದಾರೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಂಬಾರ ಮಂಡಳಿಯ ಜಿಲ್ಲೆಯ ವ್ಯಾಪ್ತಿಯ ಕ್ಷೇತ್ರಾಧಿಕಾರಿಗಳ ಕಚೇರಿ ನಗರದ ಹುಬ್ಬಳ್ಳಿ ಮಾರ್ಗದಂಚಿನಲ್ಲಿದೆ. ಸಿಬ್ಬಂದಿ ಕೊರತೆ, ಸೀಮಿತ ಅನುದಾನ, ಯೋಜನೆಗಳ ವ್ಯಾಪಕ ಪ್ರಚಾರ ಇಲ್ಲದಿರುವುದರಿಂದ ಸಾಕಷ್ಟು ರೈತರಿಗೆ ಜಿಲ್ಲೆಯಲ್ಲಿ ಸಂಬಾರ ಮಂಡಳಿ ಇದೆ ಎನ್ನುವುದೇ ಗೊತ್ತಿಲ್ಲ.

ಸಂಬಾರ ಬೆಳೆ ಬೆಳೆಯುವುದಕ್ಕೆ ರೈತರು ಆಸಕ್ತಿ ತೋರಿಸುತ್ತಿಲ್ಲ ಎನ್ನುವುದಕ್ಕಿಂತ ವೈಜ್ಞಾನಿಕವಾಗಿ ರೈತರನ್ನು ಹೇಗೆ ಪ್ರೋತ್ಸಾಹಿಸಬಹುದು, ರೈತರು ಬೆಳೆಯುತ್ತಿರುವ ಬೆಳೆಯಲ್ಲೇ ಯಾವುದಕ್ಕೆ ಸಹಾಯಧನ ನೀಡಬಹುದು ಎಂಬುದನ್ನು ಸಮರ್ಪಕವಾಗಿ ಅವಲೋಕಿಸದೇ ಇರುವುದು ಸಂಬಾರ ಮಂಡಳಿ ಕಾರ್ಯ ಚಟುವಟಿಕೆ ಮರೆಯಾಗುತ್ತಿರುವುದಕ್ಕೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೇಂದ್ರ ಸಂಬಾರ ಮಂಡಳಿ ವ್ಯಾಪ್ತಿಯಲ್ಲಿ 52 ಬೆಳೆಗಳಿದ್ದರೂ ಜಿಲ್ಲೆಯಮಟ್ಟಿಗೆ ಏಲಕ್ಕಿ ಮತ್ತು ಕಾಳುಮೆಣಸು ಬೆಳೆಯನ್ನು ಮಾತ್ರ ಇದು ಒಳಗೊಂಡಿದೆ. ಏಲಕ್ಕಿ ಮರುನಾಟಿ ಯೋಜನೆ ಹಾಗೂ ಕಾಳುಮೆಣಸು ಬಿಡಿಸುವ ಯಂತ್ರಕ್ಕೆ ಸಬ್ಸಿಡಿ ಸೌಲಭ್ಯ ದೊರೆಯುತ್ತಿದೆ. ಮರುನಾಟಿಯಲ್ಲಿ ಹೆಕ್ಟೇರ್​ಗೆ ಎರಡು ವರ್ಷ ತಲಾ 25 ಸಾವಿರ ರೂ. ನೀಡಲಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 20 ಹೆಕ್ಟೇರ್ ಪ್ರದೇಶದ ಮರುನಾಟಿಗೆ 56 ರೈತರಿಗೆ ಸಬ್ಸಿಡಿ ನೀಡಲಾಗಿತ್ತು.

ಆದರೆ ಈ ಬಾರಿ ಕೇವಲ 5 ಹೆಕ್ಟೇರ್​ಗೆ ಅನುದಾನ ಬಂದಿದೆಯಂತೆ. ಅಲ್ಲದೇ ಭೌಗೋಳಿಕವಾಗಿ ಮಲೆನಾಡು, ಅರೆಬಯಲುಸೀಮೆ, ಕರಾವಳಿ ವ್ಯಾಪ್ತಿಯ ವಿಸ್ತಾರ ಜಿಲ್ಲೆಯಲ್ಲಿ ಸಂಬಾರ ಬೆಳೆ ಕೃಷಿಗೆ ಉತ್ತೇಜಿಸಲು ಕ್ಷೇತ್ರಾಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಕ್ಷೇತ್ರಾಧಿಕಾರಿ ಸೊರಬ, ಸಾಗರ ಜವಾಬ್ದಾರಿಯನ್ನು ಹೊಂದಿದ್ದಾರೆ. ಇನ್ನೆರಡು ಸಿಬ್ಬಂದಿ ಮಾತ್ರ ಇದ್ದಾರೆ. ಇಷ್ಟೊಂದು ದೊಡ್ಡ ಜಿಲ್ಲೆಗೆ ಈ ಸಂಖ್ಯೆ ಯಾವುದಕ್ಕೂ ಸಾಲದು ಎಂಬ ಅಭಿಪ್ರಾಯವಿದೆ.

ಜಿಲ್ಲೆಯಲ್ಲಿ ಕೇಂದ್ರಿಯ ಸಂಬಾರ ಮಂಡಳಿ ಕಾರ್ಯಚಟುವಟಿಕೆ ಅಷ್ಟಕ್ಕಷ್ಟೇ ಎನ್ನುವಂತಿದೆ. ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳನ್ನು ಒಳಗೊಂಡು ಯೋಜನೆಯನ್ನು ರೈತರಿಗೆ ತಲುಪಲು ಅವಕಾಶವಿತ್ತು. ಆದರೆ ಜಿಲ್ಲೆಯ ಮಟ್ಟಿಗೆ ಮಂಡಳಿಗೆ ಅನುದಾನ, ಯೋಜನೆಯೇ ಬರುತ್ತಿಲ್ಲ. ಹೀಗಾದರೆ ಕೇಂದ್ರ ಸರ್ಕಾರದ ಒಂದು ಬೆಳೆ ಒಂದು ಉತ್ಪನ್ನ ಯೋಜನೆ ಹೇಗೆ ಯಶಸ್ವಿಯಾಗಲು ಸಾಧ್ಯ. ಸರ್ಕಾರಗಳು ಇದನ್ನು ಅರ್ಥ ಮಾಡಿಕೊಂಡು ಹೆಚ್ಚಿನ ಅನುದಾನ ಒದಗಿಸಿ ಮಂಡಳಿಯ ಕಾರ್ಯಚಟುವಟಿಕೆ ಕ್ರಿಯಾಶೀಲವಾಗುವಂತೆ ಮಾಡಬೇಕು ಎನ್ನುವುದು ಬೆಳೆಗಾರರ ಮಾತು.

ಇದನ್ನೂ ಓದಿ: ಮೊದಲ ತ್ರೈಮಾಸಿಕದಲ್ಲಿ ಗುರಿ ಮೀರಿ ಭರ್ಜರಿ ಆದಾಯ ಸಂಗ್ರಹ.. ಮುಂದಿನ ತ್ರೈಮಾಸಿಕದಲ್ಲೂ ಸಾಲ ಮಾಡದಿರಲು ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.