ಕಾರವಾರ/ಉತ್ತರ ಕನ್ನಡ: ಕಡವೆಯೊಂದು ಮನೆಯ ಅಂಗಳಕ್ಕೆ ಬಂದು ಸಾಕು ಪ್ರಾಣಿಗಳಂತೆ ಯಾವುದೇ ಭಯವಿಲ್ಲದೆ ಓಡಾಟ ನಡೆಸಿದ ಅಪರೂಪದ ಘಟನೆ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಇಂದು ನಡೆದಿದೆ.
ಗ್ರಾಮದಲ್ಲಿ ಬೆಳಗ್ಗೆ ಇದ್ದಕ್ಕಿದ್ದಂತೆ ಪತ್ತೆಯಾದ ಕಡವೆ ಮನೆಯ ಅಂಗಳದಲ್ಲಿ ಸ್ವಚ್ಚಂದವಾಗಿ ಓಡಾಡತೊಡಗಿದೆ. ಒಮ್ಮೆ ಕಡವೆಯನ್ನು ನೋಡಿದ ಗ್ರಾಮದ ಜನರು ಆಶ್ಚರ್ಯಗೊಂಡಿದ್ದು, ಅಪರೂಪಕ್ಕೆ ನೋಡಲು ಸಿಕ್ಕ ಕಡವೆ ನೋಡಿ ಖುಷಿಪಟ್ಟಿದ್ದಾರೆ.
ಇನ್ನು ಕೆಲವರು ಮನೆಯಲ್ಲಿರುವ ತಿಂಡಿ ನೀಡಿದ್ದಾರೆ. ಸಾಕು ಪ್ರಾಣಿಗಳಂತೆ ಮನೆಯ ಸುತ್ತಮುತ್ತ ನಿರ್ಭಯವಾಗಿ ಕಡವೆ ಕೆಲ ಹೊತ್ತು ತಿರುಗಾಟ ನಡೆಸಿದೆ. ಬಳಿಕ ಮತ್ತೆ ಕಾಡಿನತ್ತ ಹೋಗಿದೆ.