ಭಟ್ಕಳ: ಕ್ರೇನ್ ರಿಪೇರಿ ಮಾಡುತ್ತಿದ್ದ ಆಪರೇಟರ್ನ ತಲೆ ಮೇಲೆ ಕ್ರೇನ್ ನ ಬಿಡಿಭಾಗ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಮೃತ ಕ್ರೇನ್ ಆಪರೇಟರ್ ತಮಿಳುನಾಡು ಮೂಲದ ಗೋವಿಂದರಾಜ್ ಮುತ್ತುಸ್ವಾಮಿ (24) ಎಂದು ತಿಳಿದು ಬಂದಿದೆ.
ಮೃತ ಕಾರ್ಮಿಕ ತೆಂಗಿನಗುಂಡಿ ಬಂದರ್ ಧಕ್ಕೆಯಲ್ಲಿ ಸ್ಟೋನ್ ಲಿಫ್ಟಿಂಗ್ ಅಂಡ್ ಶಿಫ್ಟಿಂಗ್ ಲಿಮಾ ಕ್ರೇನ್ ಆಪರೇಟರ್ ಆಗಿದ್ದ. ಕ್ರೇನ್ ರಿಪೇರಿ ಮಾಡುವಾಗ ತಲೆಯ ಮೇಲೆ ಕ್ರೇನ್ ಬಿಡಿಭಾಗ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.