ETV Bharat / state

ಕಾರವಾರದಲ್ಲಿ ತ್ಯಾಜ್ಯ ತಿಂದು ಸಾವನ್ನಪ್ಪುತ್ತಿರುವ ಹಸುಗಳು - ಕಾರವಾರ ತ್ಯಾಜ್ಯ ತಿಂದು ಹಸುಗಳ ಸಾವು

ಗುರುವಾರವೂ ಸಹ 4 ದನಗಳು ಸಾವನ್ನಪ್ಪಿವೆ. ಉಸಿರುಗಟ್ಟಿ ನರಳಾಡುತ್ತ ದನಗಳು ಸಾವನಪ್ಪುತ್ತಿರುವ ಬಗ್ಗೆ ಸ್ಥಳೀಯರು ನಗರಸಭೆಗೆ ಮಾಹಿತಿ ನೀಡಿದರು. ಬಳಿಕ ಆಗಮಿಸಿದ ನಗರಸಭೆ ಕಾರ್ಮಿಕರು ದನಗಳ ಕಳೆಬರ ಮುಚ್ಚಿದ್ದಾರೆ. ಅಲ್ಲದೆ ತ್ಯಾಜ್ಯ ವಿಲೇವಾರಿ ಘಟಕದ ಅವ್ಯವಸ್ಥೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

cows-dying-after-eating-wastage-in-karwar
ಕಾರವಾರ ಹಸುಗಳ ಸಾವು
author img

By

Published : Jan 8, 2021, 9:18 PM IST

ಕಾರವಾರ : ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಪ್ಲಾಸ್ಟಿಕ್​​ ತಿಂದು ನಾಲ್ಕು ದನಗಳು ಸಾವನ್ನಪ್ಪಿರುವ ಘಟನೆ ಕಾರವಾರದ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ನಡೆದಿದೆ.

ಕಾರವಾರದಲ್ಲಿ ತ್ಯಾಜ್ಯ ತಿಂದು ಸಾವನ್ನಪ್ಪುತ್ತಿರುವ ಹಸುಗಳು..

ನಗರಸಭೆ ವ್ಯಾಪ್ತಿಯ ತ್ಯಾಜ್ಯವನ್ನು ಶಿರವಾಡದ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಇಲ್ಲಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಕ್ತ ಕಾಂಪೌಂಡ ಗೋಡೆ ಇಲ್ಲ. ಇದರಿಂದ ಬೀದಿನಾಯಿಗಳು, ದನಕರುಗಳು ಒಳ ಹೋಗುತ್ತವೆ.

ಅಲ್ಲದೆ ರಾಶಿ ಹಾಕಲಾಗಿರುವ ತ್ಯಾಜ್ಯ ತಿನ್ನುತ್ತವೆ. ಒಣ ಮತ್ತು ಹಸಿ ತ್ಯಾಜ್ಯವನ್ನು ವಿಂಗಡಿಸುವ ಘಟಕಕ್ಕೆ ಕೆಲ ತ್ಯಾಜ್ಯವನ್ನು ಮಾತ್ರ ಹಾಕಿ ಇನ್ನುಳಿದ ತ್ಯಾಜ್ಯವನ್ನು ಪಕ್ಕದಲ್ಲಿರುವ ಪ್ರದೇಶದಲ್ಲಿ ರಾಶಿ ಹಾಕಲಾಗುತ್ತದೆ.

ಓದಿ-ಗಂಡನನ್ನ ಕೊಂದು ನನ್ನ ಹತ್ತಿರ ಬಾ ಅಂದಿದ್ಲಂತೆ ಆಂಟಿ.. ಕೊಲೆಗೆ ಸುಪಾರಿ ಕೊಟ್ಟ ತಾಟಗಿತ್ತಿ ಖಾಕಿ ಅತಿಥಿ

ಹೀಗಾಗಿ ಈ ಪ್ರದೇಶದಲ್ಲಿ ಪ್ರತಿದಿನ ನೂರಾರು ಬೀಡಾಡಿ ದನಗಳು ಮತ್ತು ಸಾಕು ದನಕರುಗಳು ಸೇರುತ್ತವೆ. ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಅಥವಾ ಇನ್ನಿತರ ರಾಸಾಯನಿಕ‌ ವಸ್ತುಗಳೊಂದಿಗೆ ಆಹಾರ ಪದಾರ್ಥಗಳು, ತರಕಾರಿಗಳು ಇರುತ್ತಿರುವುದರಿಂದ ದನಕರುಗಳು ಇವುಗಳನ್ನು ತಿನ್ನುತ್ತವೆ. ಅದರಂತೆ ಇತ್ತೀಚೆಗೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ತಿಂದ ಹಲವು ದನಗಳು ಸಾವನ್ನಪ್ಪಿದ್ದವು.

ಗುರುವಾರವೂ ಸಹ 4 ದನಗಳು ಸಾವನ್ನಪ್ಪಿವೆ. ಉಸಿರುಗಟ್ಟಿ ನರಳಾಡುತ್ತ ದನಗಳು ಸಾವನಪ್ಪುತ್ತಿರುವ ಬಗ್ಗೆ ಸ್ಥಳೀಯರು ನಗರಸಭೆಗೆ ಮಾಹಿತಿ ನೀಡಿದರು. ಬಳಿಕ ಆಗಮಿಸಿದ ನಗರಸಭೆ ಕಾರ್ಮಿಕರು ದನಗಳ ಕಳೆಬರ ಮುಚ್ಚಿದ್ದಾರೆ. ಅಲ್ಲದೆ ತ್ಯಾಜ್ಯ ವಿಲೇವಾರಿ ಘಟಕದ ಅವ್ಯವಸ್ಥೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಾಣಿಗಳು ತೆರಳದಂತೆ ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.