ಕಾರವಾರ(ಉತ್ತರ ಕನ್ನಡ): ಕಾಡು ಪ್ರಾಣಿಗಳ ಕಾಟ ತಪ್ಪಿಸಲು ಅನ್ನಕ್ಕೆ ವಿಷ ಬೆರೆಸಿ ಇಟ್ಟಿದ್ದನ್ನು ಜಾನುವಾರುಗಳು ತಿಂದು ಸಾವನ್ನಪ್ಪಿರುವ ಘಟನೆ ಜೋಯಿಡಾ ತಾಲೂಕಿನ ನಾಗೋಡಾದಲ್ಲಿ ನಡೆದಿದೆ. ವಿಷಪ್ರಾಷನದಿಂದ ಒಟ್ಟು ನಾಲ್ಕು ಎತ್ತು ಮತ್ತು ಒಂದು ಆಕಳುಗಳ ಸಾವು ಕಂಡಿದ್ದು, ಇನ್ನೂ ಏಳು ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ.
ಅನಂತ ನರಸಿಂಹ ಭಾಗ್ವತ್ ಎಂಬುವವರ ತೋಟದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾಡು ಪ್ರಾಣಿಗಳ ಕಾಟ ತಡೆಯಲು ಅನ್ನದ ಜೊತೆ ವಿಷ ಬೆರೆಸಿರುವುದು ಬೆಳಕಿಗೆ ಬಂದಿದೆ. ಗೋವಿನ ಮಾಲೀಕರಾದ ಮಮತಾ ಮಹಾಬಲೇಶ್ವರ ಗಾಳಕರ ಎಂಬುವವರು ಠಾಣೆಯಲ್ಲಿ ದೂರು ನೀಡಿದ್ದು ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳ ಭೇಟಿ ನೀಡಿದ್ದಾರೆ. ರಾಸುಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು ಜೊಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಕೃಷ್ಣಾ ನದಿಯಲ್ಲಿ ಸಾಹಸ... ಬೋಟ್ಗಳಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಕಬ್ಬು ಸಾಗಿಸಿದ ರೈತರು!