ETV Bharat / state

ಲಾರಿ-ಬೈಕ್ ನಡುವೆ ಡಿಕ್ಕಿ : ಅಂಕೋಲಾ ಬಳಿ ನ್ಯಾಯಾಲಯದ ಸಿಬ್ಬಂದಿ ಸಾವು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ನಡೆದ ಅಪಘಾತದಲ್ಲಿ ನ್ಯಾಯಾಲಯ ಸಿಬ್ಬಂದಿ ಮೃತಪಟ್ಟಿದ್ದಾರೆ.

accident Near Karwar
ಲಾರಿ-ಬೈಕ್ ನಡುವೆ ಡಿಕ್ಕಿ
author img

By

Published : Jul 31, 2021, 8:13 AM IST

ಕಾರವಾರ : ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಂಕೋಲಾ ತಾಲೂಕು ಹಾರವಾಡದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.

ಕಾರವಾರ ನ್ಯಾಯಾಲಯದಿಂದ ಕರ್ತವ್ಯ ಮುಗಿಸಿ ಬೈಕ್​ ಸವಾರರು ಅಂಕೋಲಾಕ್ಕೆ ತೆರಳುತ್ತಿರುವಾಗ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್​​ಬಿ ಕಂಪನಿಯ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ರವಿ ಲೋಕು ಗೌಡ (27) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಹಿಂಬದಿ ಸವಾರ ಹರೀಶ್ ಓಮು ಗೌಡ (33) ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Court Staff dies in accident Near Karwar
ಮೃತ ಬೈಕ್ ಸವಾರ

ಓದಿ : ಟ್ರ್ಯಾಕ್ಟರ್​​ಗೆ ಹಿಂಬದಿಯಿಂದ ಬೊಲೆರೋ ವಾಹನ ಡಿಕ್ಕಿ: ಕೋಲಾರದಲ್ಲಿ ತಂದೆ, ಮಗ ಸಾವು

ಮೃತ ಬೈಕ್ ಸವಾರ ಕಾರವಾರ ನ್ಯಾಯಾಲಯದ (ಆದೇಶ ಜಾರಿಕಾರ) ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಂಕೋಲಾ ನ್ಯಾಯಾಲಯದ ನ್ಯಾಯಾಧೀಶರಾದ ರಂಗಸ್ವಾಮಿ ಜೆ ಮತ್ತು ದಿನೇಶ್ ಬಿ.ಜಿ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.