ಭಟ್ಕಳ (ಉತ್ತರಕನ್ನಡ): ಗೋ ಕಳ್ಳರು ಬುಧವಾರ ರಾತ್ರಿ ದನವನ್ನು ಸಾಗಿಸುತ್ತಿದ್ದಾಗ, ಪೊಲೀಸರು ಕಾರನ್ನು ಹಿಡಿದಿದ್ದಾರೆ. ಆದ್ರೆ ಕಾರು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಕಳೆದ ಒಂದು ವಾರದ ಹಿಂದೆಯಷ್ಟೇ ತಾಲೂಕಿನ ವಿ.ವಿ. ರಸ್ತೆಯಲಿ ರಾತ್ರಿ ವೇಳೆ ಇದೇ ನೋಂದಣಿ ಇಲ್ಲದ ಕಾರಿನಲ್ಲಿ ಜಾನುವಾರಗಳನ್ನು ತುಂಬಿಕೊಂಡು ಹೋಗಿದ್ದರು. ಆ.28 ರ ಮುಂಜಾನೆ 4.15 ರಿಂದ 5 ಗಂಟೆಯ ಸುಮಾರಿಗೆ ನಂಬರ್ ಪ್ಲೇಟ್ ಇಲ್ಲದ ಬಿಳಿ ಬಣ್ಣದ ಕಾರಿನಲ್ಲಿ ನಾಲ್ವರು ಗೋ ಕಳ್ಳರು, ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಾನುವಾರನ್ನು ಕೈಕಾಲು ಕಟ್ಟಿ ಕಾರಿನ ಹಿಂಬದಿಯಲ್ಲಿ ತುಂಬುತ್ತಿರುವ ದೃಶ್ಯ ಇಲ್ಲಿನ ವಡೇರ ಮಠ ದೇವಸ್ಥಾನದ ಸಿ.ಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಕಳ್ಳತನವಾದ ಜಾನುವಾರು ಮಾಲೀಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
![ಕಾರಿನ ಹಿಂಭಾಗದಲ್ಲಿರುವ ದನ](https://etvbharatimages.akamaized.net/etvbharat/prod-images/kn-bkl-01-cattle-theft-accused-fled-kac-10002_03092020174226_0309f_1599135146_1047.jpg)
ಆದರೆ ನಿನ್ನೆ ಮತ್ತೆ ಅದೇ ಕಾರಿನಲ್ಲಿ ಜಾನುವಾರು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ವೇಳೆ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದು, ಸ್ವಲ್ಪ ದೂರ ಪೊಲೀಸರು ಕಾರನ್ನು ಬೆನ್ನತ್ತಿದ್ದಾರೆ. ನಂತರ ಆರೋಪಿಗಳು ಕಾರನ್ನು ತಾಲೂಕಿನ ಮಗ್ದಮ್ ಕಾಲೋನಿಯ ಸಮೀಪ ಬಿಟ್ಟು ಪರಾರಿಯಾಗಿದ್ದಾರೆ. ಕಾರನ್ನು ಪರಿಶೀಲಿಸಿ ನೋಡಿದಾಗ ಕಾರಿನ ಹಿಂಬದಿಯಲ್ಲಿ ಒಂದು ಜಾನುಮಾರು ಮತ್ತು ಒಂದು ಲಾಂಗ್ (ಮಾರಕಾಸ್ತ್ರ ) ಪತ್ತೆಯಾಗಿದೆ.
![ಗೋ ಕಳ್ಳತನಕ್ಕೆ ಬಳಸಿದ ಕಾರು](https://etvbharatimages.akamaized.net/etvbharat/prod-images/kn-bkl-01-cattle-theft-accused-fled-kac-10002_03092020174226_0309f_1599135146_895.jpg)