ETV Bharat / state

ಮನೆ ಮುರುಕು ರಾಜಕಾರಣ ಮಾಡುವ ಕಾಂಗ್ರೆಸ್​ ಯಶಸ್ಸು ಕಾಣೋದಿಲ್ಲ.. ಶಿವರಾಮ್ ಹೆಬ್ಬಾರ್

author img

By

Published : Nov 20, 2019, 10:14 PM IST

ಇಂದು ಬನವಾಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು. ಕುಟುಂಬ ಒಡೆಯುವ, ಮನೆ ಮುರುಕು ರಾಜಕಾರಣ ಮಾಡುವ ಕಾಂಗ್ರೆಸ್ ಖಂಡಿತ ಯಶಸ್ಸು ಕಾಣುವುದಿಲ್ಲ ಎಂದು ಗುಡುಗಿದ್ದಾರೆ.

ಶಿವರಾಮ್ ಹೆಬ್ಬಾರ್ , Shivaram hebbar

ಶಿರಸಿ : ಕುಟುಂಬ ಒಡೆಯುವ, ಮನೆ ಮುರುಕು ರಾಜಕಾರಣ ಮಾಡುವ ಕಾಂಗ್ರೆಸ್ ಖಂಡಿತ ಯಶಸ್ಸು ಕಾಣುವುದಿಲ್ಲ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಹೇಳಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್..

ಬನವಾಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ ಎಸ್ ಪಾಟೀಲ್ ಮಗ ಬಾಪುಗೌಡ ಪಾಟೀಲ್ ಮಾಜಿ ಶಾಸಕ ಪುತ್ರ ಎನ್ನುವುದನ್ನು ಹೊರತು ಬಾಪುಗೌಡ ಅವರಿಗೆ ಯಾವುದೇ ಅರ್ಹತೆಯಿಲ್ಲ. ಅವರು ಮಾಜಿ ಶಾಸಕರಲ್ಲ. ಅವರ ಕಾಂಗ್ರೆಸ್ ಸೇರ್ಪಡೆಯಿಂದ ಏನೂ ತೊಂದರೆಯಿಲ್ಲ. ಮನೆ ಮುರುಕು ರಾಜಕಾರಣ ಮಾಡುವ ಕಾಂಗ್ರೆಸ್ ಏನ್​ ಬೇಕಾದರೂ ಮಾಡುತ್ತೆ. ಕುಟುಂಬವನ್ನೇ ಒಡೆಯುತ್ತಾರೆ. ಯಾವ ಕಾಲಕ್ಕೆ ಏನು ಮಾಡಬೇಕೆಂಬುದನ್ನು ಮಾಡಿ ಯಶಸ್ಸು ಸಾಧಿಸುತ್ತೇವೆ ಎಂದು ಅಂದುಕೊಂಡಿದ್ದಾರೆ. ಅದು ಸತ್ಯಕ್ಕೆ ದೂರವಾದ ಸಂಗತಿ ಎಂದರು.

ಮಾಜಿ ಶಾಸಕ ವಿ.ಎಸ್.ಪಾಟೀಲ್ ನಮ್ಮ ಜೊತೆಯಲ್ಲಿಯೇ ಇದ್ದು, ವಿವಿಧ ಸಭೆಯಲ್ಲೂ ನಮ್ಮ ಜೊತೆ ತೊಡಗಿಕೊಂಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿದ್ದು, ಒಂದಾಗಿ ಸಂಘಟನೆ ಮಾಡಿ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.

ಮಾಜಿ ಸಚಿವ ಆರ್.ವಿ‌.ದೇಶಪಾಂಡೆಯವರು ಪ್ರಚಾರಕ್ಕೆ ಬರುತ್ತಿರುವುದು ಸಂತೋಷ. ನನ್ನನ್ನು ಎದುರಿಸಲು ದೇಶಪಾಂಡೆ 10 ದಿನಗಳ ಕಾಲ ಉಳಿಯುತ್ತಾರೆ ಎಂದರೆ ನನಗೆ ಹೆಮ್ಮೆಯಿದೆ. ನನ್ನ ಸಾಮರ್ಥ್ಯ ಎದುರಿಸಲು ಸಿದ್ದರಾಮಯ್ಯನವರು ಮತ್ತೊಮ್ಮೆ ಕ್ಷೇತ್ರಕ್ಕೆ ಬರುತ್ತಾರೆ ಎಂದರು. ದೇಶಪಾಂಡೆಯವರು ಉಸ್ತುವಾರಿ ಸಚಿವರಿದ್ದಾಗ ಪಂಚಾಯತ್ ಮಟ್ಟಕ್ಕೆ ಹೋಗಲು ಆಗಿಲ್ಲ. ಈಗ ಪ್ರಚಾರಕ್ಕೆ ಹೋಗಿ ನನ್ನ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂದು ತಿಳಿಯಲಿ ಎಂದು ಟಾಂಗ್ ನೀಡಿದರು.

Intro:ಶಿರಸಿ :
ಕಾಂಗ್ರೆಸ್ ನದು ಕುಟುಂಬ ಒಡೆಯುವ ರಾಜಕಾರಣ. ಮನೆಮುರುಕು ರಾಜಕಾರಣ ಮಾಡುವ ಕಾಂಗ್ರೆಸ್ ಖಂಡಿತ ಯಶಸ್ಸು ಕಾಣುವುದಿಲ್ಲ ಎಂದು ಯಲ್ಲಾಪರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಹೇಳಿದರು.

ಬನವಾಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ.ಎಸ್.ಪಾಟೀಲ್ ಮಗ ಬಾಪುಗೌಡ ಪಾಟೀಲ್ ಕಾಂಗ್ರೆಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದರು. ಮಾಜಿ ಶಾಸಕ ಪುತ್ರ ಎನ್ನುವುದನ್ನು ಹೊರತು ಬಾಪುಗೌಡ ಅವರಿಗೆ ಯಾವುದೇ ಅನರ್ಹತೆಯಿಲ್ಲ. ಅವರು ಮಾಜಿ ಶಾಸಕರಲ್ಲ. ಅವರ ಕಾಂಗ್ರೆಸ್ ಸೇರ್ಪಡೆಯಿಂದ ಏನೂ ತೊಂದರೆಯಿಲ್ಲ ಎಂದರು.

ಮಾಜಿ ಶಾಸಕ ವಿ.ಎಸ್.ಪಾಟೀಲ್ ನಮ್ಮ ಜೊತೆಯಲ್ಲಿಯೇ ಇದ್ದು, ವಿವಿಧ ಸಭೆಯಲ್ಲೂ ನಮ್ಮ ಜೊತೆ ತೊಡಗಿಕೊಂಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿದ್ದು, ಒಂದಾಗಿ ಸಂಘಟನೆ ಮಾಡಿ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.

Body:ಮಾಜಿ ಸಚಿವ ಆರ್.ವಿ‌.ದೇಶಪಾಂಡೆಯವರು ಪ್ರಚಾರಕ್ಕೆ ಬರುತ್ತಿರುವುದು ಸಂತೋಷ. ನನ್ನನ್ನು ಎದುರಿಸಲು ದೇಶಪಾಂಡೆ ೧೦ ದಿನಗಳ ಕಾಲ ಉಳಿಯುತ್ತಾರೆ ಎಂದರೆ ನನಗೆ ಹೆಮ್ಮೆಯಿದೆ. ನನ್ನ ಸಾಮರ್ಥ್ಯ ಎದುರಿಸಲು ಸಿದ್ದರಾಮಯ್ಯ ನವರು ಮತ್ತೊಮ್ಮೆ ಕ್ಷೇತ್ರಕ್ಕೆ ಬರುತ್ತಾರೆ. ದೇಶಪಾಂಡೆಯವರು ಉಸ್ತುವಾರಿ ಸಚಿವರಿದ್ದಾಗ ಪಂಚಾಯತ ಮಟ್ಟಕ್ಕೆ ಹೋಗಲು ಆಗಿಲ್ಲ. ಈಗ ಪ್ರಚಾರಕ್ಕೆ ಹೋಗಿ ನನ್ನ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂದು ತಿಳಿಯಲಿ ಎಂದು ಟಾಂಗ್ ನೀಡಿದರು. ಇದೇ ವೇಳೆ ಸ್ಥಳೀಯ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿ ಸಮ್ಮಾನ ಸ್ವೀಕರಿಸಿದರು. ಮಾಜಿ ಶಾಸಕ ವಿ.ಎಸ್.ಪಾಟೀಲ್ ಸಾಥ್ ನೀಡಿದರು.

..........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.