ETV Bharat / state

ದೇವರ ಆಶೀರ್ವಾದವಿದ್ರೆ ಮುಖ್ಯಮಂತ್ರಿಯಾಗೋ ಬಗ್ಗೆ ನೋಡೋಣ: ಹೆಚ್.ಕೆ.ಪಾಟೀಲ್ - ಕಾಂಗ್ರೆಸ್​ ನಾಯಕ ಹೆಚ್​​.ಕೆ ಪಾಟೀಲ್ ಸುದ್ದಿಗೋಷ್ಠಿ

ಜನ ಹಾಗೂ ಶಾಸಕರು ಕಾಂಗ್ರೆಸ್ ಪಕ್ಷವನ್ನು ಚೆನ್ನಾಗಿ ಬಲ್ಲರು. ಈಗ ಮುಖ್ಯಮಂತ್ರಿ ಸ್ಥಾನದ ವಿಷಯ ಪ್ರಸ್ತುತ ಅಲ್ಲ. ಚುನಾವಣೆ ಸಂದರ್ಭ ಬಂದಾಗ ಪಕ್ಷದ ನಾಯಕರು ಹಾಗೂ ವರಿಷ್ಠರು ಈ ಕುರಿತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.

Cong leader Statement about election
ಕಾಂಗ್ರೆಸ್ ನಾಯಕ ಹೆಚ್.ಕೆ ಪಾಟೀಲ್
author img

By

Published : Oct 25, 2020, 5:20 PM IST

ಶಿರಸಿ: ದೇವರ ಆಶೀರ್ವಾದವಿದ್ರೆ ಮುಖ್ಯಮಂತ್ರಿಯಾಗೋ ಬಗ್ಗೆ ನೋಡೋಣ ಎಂದು ಕಾಂಗ್ರೆಸ್ ನಾಯಕ ಹೆಚ್.ಕೆ.ಪಾಟೀಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಸಿದ್ದಾಪುರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ, ಜೆಡಿಎಸ್​ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿದೆ. ಪಕ್ಷದವರನ್ನು ಬಿಟ್ಟು ಪಕ್ಷೇತರರನ್ನು ಬೆಂಬಲಿಸುವ ಪಕ್ಷಗಳನ್ನು ಎಲ್ಲಾದ್ರು ನೋಡಿದ್ದೀರಾ..?. ಸ್ಪರ್ಧೆಯಲ್ಲಿ ಮುಂದುವರಿಯುವ ಆಸಕ್ತಿ ಅವರಲ್ಲಿ ಇಲ್ಲ. ಇದು ನಮ್ಮ ಪಕ್ಷದ ಅಭ್ಯರ್ಥಿ ಕುಬೇರಪ್ಪಗೆ ನೆರವಾಗಲಿದೆ ಎಂದರು.

ಕಾಂಗ್ರೆಸ್ ನಾಯಕ ಹೆಚ್.ಕೆ ಪಾಟೀಲ್

ಜನ ಹಾಗೂ ಶಾಸಕರು ಕಾಂಗ್ರೆಸ್ ಪಕ್ಷವನ್ನು ಚೆನ್ನಾಗಿ ಬಲ್ಲರು. ಈಗ ಮುಖ್ಯಮಂತ್ರಿ ಸ್ಥಾನದ ವಿಷಯ ಪ್ರಸ್ತುತ ಅಲ್ಲ. ಚುನಾವಣೆ ಸಂದರ್ಭ ಬಂದಾಗ ಪಕ್ಷದ ನಾಯಕರು ಹಾಗೂ ವರಿಷ್ಠರು ಈ ಕುರಿತ ತೀರ್ಮಾನ ಕೈಗೊಳ್ಳುತ್ತಾರೆ. ಇವು ರಸ್ತೆಯಲ್ಲಿ, ಮಾಧ್ಯಮಗೋಷ್ಠಿಯಲ್ಲಿ ನಿರ್ಣಯವಾಗುವ ವಿಷಯಗಳಲ್ಲ. ವರಿಷ್ಠರ ತೀರ್ಮಾಣವೇ ಅಂತಿಮ ಎಂದರು.

ಇದೇ ಸಂದರ್ಭದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕುಬೇರಪ್ಪ ಪರ ಮತಯಾಚನೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.