ಶಿರಸಿ: ಟೈಯರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿ 5 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸ್ ಬಳಿ ಸಂಭವಿಸಿದೆ.
ಒಟ್ಟು 9 ಪ್ರಯಾಣಿಕರು ಮದುವೆ ಸಮಾರಂಭಕ್ಕೆಂದು ಗೋವಾದಿಂದ ಯಲ್ಲಾಪುರಕ್ಕೆ ಆಗಮಿಸಿದ್ದರು. ಅಲ್ಲಿಂದ ಅಳ್ವಾವರದಲ್ಲಿ ಸಂಬಂಧಿಕರಿಗೆ ಅನಾರೋಗ್ಯ ಎಂದು ಭೇಟಿಯಾಗಲು ತೆರಳುತ್ತಿದ್ದ ವೇಳೆ ಈ ಘಟನೆ ಜರುಗಿದೆ.
ಹಳಿಯಾಳ ಕ್ರಾಸ್ ಸಮೀಪ ಮಳೆಗೆ ಮರದ ಕೊಂಬೆ ಉರುಳಿ ಬೀಳುತ್ತದೆ ಎಂದು ಆಕಸ್ಮಿಕವಾಗಿ ಕಾರಿನ ಬ್ರೇಕ್ ಹಾಕಿದ ಪರಿಣಾಮ ಕಾರಿನ ಟೈಯರ್ ಸ್ಫೋಟಗೊಂಡು ರಸ್ತೆಯ ಮೇಲೆ ಪಲ್ಟಿಯಾಗಿದೆ.
ಘಟನೆಯಲ್ಲಿ 9 ಜನರಲ್ಲಿ 5 ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.