ETV Bharat / state

ಬೌದ್ಧ ಬಿಕ್ಕುವಿಗೆ ಸಾವು ಸಮೋಸದಲ್ಲಿ ಬರೆದಿತ್ತೇ? - Uttar kannada district news

ಗಂಟಲಲ್ಲಿ ಸಮೋಸಾ ಸಿಲುಕಿ ಬಿಕ್ಕು ಮಂಗೋಲಿಯಾ ದೇಶದ ವ್ಯಕ್ತಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೆಟಿಯನ್ ಕಾಲೊನಿಯಲ್ಲಿ ನಡೆದಿದೆ.

The death of a Buddhist
ಬೌದ್ಧ ಬಿಕ್ಕು ಸಾವು
author img

By

Published : Jun 30, 2020, 2:44 PM IST

ಕಾರವಾರ: ತಿನ್ನುವಾಗ ಗಂಟಲಲ್ಲಿ ಸಮೋಸಾ ಸಿಲುಕಿಕೊಂಡು ಬೌದ್ಧ ಬಿಕ್ಕು ಸಾವನ್ನಪ್ಪಿರುವ ಘಟನೆ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೊನಿಯಲ್ಲಿ ನಡೆದಿದೆ.

ಮಂಗೋಲಿಯಾ ದೇಶದ ಪ್ರಜೆ ಬಯಾರ್ಜವಕ್ಲನ್ ದಾಶ್ದೋರ್ಜ್ (18) ಮೃತ ಯುವಕ ಎಂದು ತಿಳಿದುಬಂದಿದೆ.

ಟಿಬೆಟಿಯನ್ ಕ್ಯಾಂಪ್-2ರ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಾಗಿದ್ದ ಈತ, ತನ್ನ ಕೊಠಡಿಯಲ್ಲಿ ಸಮೋಸಾ ತಿನ್ನುತ್ತಿರುವಾಗ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದ್ದಾನೆ ಎಂಬ ಮಾಹಿತಿ ದೊರೆತಿದೆ.

ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.