ETV Bharat / state

ಅಪ್ರಾಪ್ತ ಸಹೋದರಿ ಮೇಲೆ ಅತ್ಯಾಚಾರವೆಸಗಿದ ಪಾಪಿ ಅಣ್ಣ.. - ತಂಗಿ ಮೇಲೆ ಅತ್ಯಾಚಾರ ಪ್ರಕರಣ

ತಾಯಿ ಇಲ್ಲದ 12 ವರ್ಷದ ಬಾಲಕಿ ತಂದೆಯೊಂದಿಗೆ ವಾಸಿಸುತ್ತಿದ್ದಳು. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ತಂದೆ ಕೆಲಸಕ್ಕೆ ತೆರಳುವಾಗ ಆಕೆಯ ದೊಡ್ಡಪನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು..

brother raped his sister in gokarna
ಅಪ್ರಾಪ್ತ ಸಹೋದರಿ ಮೇಲೆ ಅತ್ಯಾಚಾರ
author img

By

Published : Feb 8, 2021, 8:21 PM IST

ಕಾರವಾರ : ಯುವಕನೋರ್ವ ಅಪ್ರಾಪ್ತ ವಯಸ್ಸಿನ ತನ್ನ ಚಿಕ್ಕಪ್ಪನ ಮಗಳನ್ನೇ ಪುಸಲಾಯಿಸಿ ಅತ್ಯಾಚಾರವೆಸಗಿರುವ ಪ್ರಕರಣ ಗೋಕರ್ಣದಲ್ಲಿ ಬೆಳಕಿಗೆ ಬಂದಿದೆ.

ತಾಯಿ ಇಲ್ಲದ 12 ವರ್ಷದ ಬಾಲಕಿ ತಂದೆಯೊಂದಿಗೆ ವಾಸಿಸುತ್ತಿದ್ದಳು. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ತಂದೆ ಕೆಲಸಕ್ಕೆ ತೆರಳುವಾಗ ಆಕೆಯ ದೊಡ್ಡಪನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು.

ಆ ಮನೆಯಲ್ಲಿಯೂ ಎಲ್ಲರೂ ಕೆಲಸಕ್ಕೆ ತೆರಳುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಯುವಕ ಬಾಲಕಿಯನ್ನು ಮರುಳು ಮಾಡಿ ಅತ್ಯಾಚಾರ ಎಸಗಿ ಆಕೆ ಗರ್ಭವತಿಯನ್ನಾಗಿ ಮಾಡಿದ್ದಾನೆ.

ಅಲ್ಲದೆ ಈ ವಿಷಯ ಅರಿವಿಗೆ ಬರುತ್ತಿದ್ದಂತೆ ಆರೋಪಿ ಕೆಲ ದಿನಗಳ ಹಿಂದೆ ಮದುವೆ ಆಗಿದ್ದಾನೆ. ಈಗ ಪ್ರಕರಣ ಗೊತ್ತಾಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

ಎಂಟು ತಿಂಗಳ ಗರ್ಭವತಿಯಾಗಿರುವ ಬಾಲಕಿಯನ್ನು ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.