ETV Bharat / state

ಭಟ್ಕಳದಲ್ಲಿ ಬಾಲಕನ ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್

ಎಂಟು ವರ್ಷದ ಬಾಲಕನನ್ನು ಅಪಹರಿಸಿದ ಘಟನೆ ಭಟ್ಕಳ ತಾಲೂಕಿನ ಆಜಾದ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

Boy Kidnapped in Bhatkal
ಭಟ್ಕಳದಲ್ಲಿ ಬಾಲಕನ ಅಪಹರಣ
author img

By

Published : Aug 21, 2022, 11:53 AM IST

Updated : Aug 21, 2022, 12:00 PM IST

ಭಟ್ಕಳ: ತಾಲೂಕಿನ ಆಜಾದ್ ನಗರದಲ್ಲಿ ನಿನ್ನೆ ರಾತ್ರಿ 8 ವರ್ಷದ ಬಾಲಕನನ್ನು ಅಪಹರಿಸಿದ ಘಟನೆ ನಡೆದಿದೆ. ಬಾಲಕ ಅಲಿ ಸಾದಾ (8) ಅಂಗಡಿಯಿಂದ ಬ್ರೆಡ್ ತರಲು ಹೋಗಿದ್ದ ಸಂದರ್ಭ ನಾಪತ್ತೆಯಾಗಿದ್ದಾನೆ ಎನ್ನಲಾಗ್ತಿದೆ.

ಬಾಲಕನ ಅಪಹರಣ: ಸಿಸಿಟಿವಿ ದೃಶ್ಯ

ಅಕ್ಕಪಕ್ಕದ ಮನೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾತ್ರಿ 8 ಗಂಟೆ ಸುಮಾರಿಗೆ ಮಾರುತಿ ಇಕೋ ವ್ಯಾನ್ ಬರುತ್ತಿರುವುದು ಕಂಡು ಬಂದಿದೆ. ಅದರಲ್ಲಿದ್ದ ವ್ಯಕ್ತಿಯೋರ್ವ ಇಳಿದು ಬಾಲಕನನ್ನು ಎತ್ತಿಕೊಂಡು ಕಾರಿನಲ್ಲಿ ಹಾಕಿದ್ದು, ಬಳಿಕ ವಾಹನ ಪರಾರಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Boy Kidnapped in Bhatkal
ಅಲಿ ಸಾದಾ: ಅಪಹರಣಕ್ಕೊಳಗಾದ ಬಾಲಕ

ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನಗರದ ವಿವಿಧೆಡೆ ಪೊಲೀಸರನ್ನು ನಿಯೋಜಿಸಿ ತನಿಖೆ ನಡೆಸಲಾಗುತ್ತಿದೆ. ಸಂಜೆಯಿಂದ ಇದೇ ಪ್ರದೇಶದಲ್ಲಿ ವಾಹನ ಸುತ್ತುತ್ತಿರುವುದು ಕಂಡು ಬಂದಿದ್ದು ಅಪಹರಣದ ವೇಳೆ ವ್ಯಾನ್ ಹಿಂದೆ ದ್ವಿಚಕ್ರ ವಾಹನವೂ ಕಾಣಿಸಿಕೊಂಡಿದೆ. ಪೊಲೀಸರು ಇತರ ಮನೆಗಳ ಹೊರಗಿನ ಸಿಸಿಟಿವಿ ದೃಶ್ಯಗಳನ್ನು ಸಹ ಪಡೆದುಕೊಂಡಿದ್ದು, ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್ ಮಾತನಾಡಿ, ನಾವು ನಮ್ಮ ಪ್ರಯತ್ನವನ್ನು ಮಾಡುತ್ತಿದ್ದೇವೆ, ಶೀಘ್ರದಲ್ಲೇ ನಾವು ಅಪಹರಣಕಾರರನ್ನು ಬಂಧಿಸುವುದಾಗಿ ದೂರವಾಣಿಯಲ್ಲಿ ತಿಳಿಸಿದ್ದಾರೆ.

Last Updated : Aug 21, 2022, 12:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.